‘ಮತದಾನದ ಹಕ್ಕನ್ನು ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಬಳಸಬೇಕು’ ಎಂಬ ಸಂದೇಶವನ್ನು ನೀಡಲಿದ್ದಾರೆ.

ವಾರಣಾಸಿ – ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಜಿ ಅವರು ಬಿಹಾರದಲ್ಲಿ ‘ಗೋಮಾತಾ ಸಂಕಲ್ಪ ಯಾತ್ರೆ’ಯನ್ನು ನಡೆಸಲಿದ್ದಾರೆ. ಈ ಯಾತ್ರೆಯು ಸೆಪ್ಟೆಂಬರ್ 12, 2025 ರಂದು ವಾರಣಾಸಿಯಿಂದ ಹೊರಟು ಬಿಹಾರದ ಸೀತಾಮಢಿ, ಮಧುಬನಿ, ಸುಪಾಉಲ್, ಅರಾರಿಯಾ, ಕಿಶನಗಂಜ, ಪೂರ್ಣಿಯಾ, ಭಾಗಲಪುರ, ಗಯಾ, ಔರಂಗಾಬಾದ, ರೋಹತಾಸ, ಭೋಜಪುರ, ಸಾರಣ, ಸಿವಾನ, ಗೋಪಾಲಗಂಜ, ಚಂಪಾರಣ, ದರಭಂಗಾ, ಮುಜಫ್ಫರಪುರ, ಖಗಡಿಯಾ, ಮುಂಗೆರ್, ನಾಲಂದ ಇತ್ಯಾದಿ ಬಹುತೇಕ ಪ್ರಮುಖ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಈ ಯಾತ್ರೆಯ ಮೂಲಕ ‘ಮತದಾನದ ಹಕ್ಕನ್ನು ಕೇವಲ ವೈಯಕ್ತಿಕ ಅನುಕೂಲಕ್ಕಾಗಿ ಬಳಸದೆ, ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಬಳಸಬೇಕು’ ಎಂಬ ಸಂದೇಶವನ್ನು ನೀಡಲಾಗುತ್ತದೆ.
ಧರ್ಮ ಮತ್ತು ರಾಜಕಾರಣದ ವೈದಿಕ ಸಂಗಮ !
ಈ ಯಾತ್ರೆಯ ಕುರಿತು ಮಾಹಿತಿ ನೀಡಿದ ಶಂಕರಾಚಾರ್ಯರು, ಇಂದು ರಾಜಕಾರಣವು ಕೇವಲ ಅಧಿಕಾರ ಗಳಿಸುವ ಸಾಧನವಾಗಿದೆ, ಅದರಲ್ಲಿ ರಾಷ್ಟ್ರದ ಆತ್ಮ ಅಥವಾ ಸಮಾಜದ ಆಧ್ಯಾತ್ಮಿಕ ಅರಿವು ಪ್ರತಿಬಿಂಬಿತವಾಗುತ್ತಿಲ್ಲ. ಈ ಯಾತ್ರೆಯು ಧಾರ್ಮಿಕ ರಾಜಕಾರಣವಿಲ್ಲದೆ ದೇಶವು ಎಂದಿಗೂ ಬಲಿಷ್ಠವಾಗಲು ಸಾಧ್ಯವಿಲ್ಲ ಎಂಬುದನ್ನು ನಮಗೆ ನೆನಪಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ‘ರಾಷ್ಟ್ರಮಾತೆ’ ಎಂದು ಕರೆಯಲ್ಪಡುವ ಗೋಮಾತೆಯನ್ನು ರಕ್ಷಿಸುವ ಸಂಕಲ್ಪ ಮಾಡದೆ ರಾಜಕೀಯವು ಕೇವಲ ಒಂದು ಟೊಳ್ಳು ವ್ಯವಸ್ಥೆಯಾಗಿ ಉಳಿಯುತ್ತದೆ.
ಗೋಮಾತೆಯೇ ‘ರಾಷ್ಟ್ರಮಾತೆ’!
ಭಾರತೀಯ ಜೀವನದಲ್ಲಿ ಗೋಮಾತೆಯು ಕೇವಲ ಒಂದು ಪ್ರಾಣಿಯಲ್ಲ, ಆದರೆ ಸಂಪೂರ್ಣ ಸೃಷ್ಟಿಯ ಪೋಷಣೆಯ ಸಂಕೇತವಾಗಿದೆ. ವೇದಗಳಲ್ಲಿ ಗೋಮಾತೆಯನ್ನು ‘ಅಘನ್ಯಾ’ ಎಂದು ಕರೆಯಲಾಗಿದೆ; ಅಂದರೆ ಅದನ್ನು ಎಂದಿಗೂ ಕೊಲ್ಲಬಾರದು. ಇಂದು ಆಧುನಿಕತೆಯ ಬಿರುಗಾಳಿಯು ಸಂಸ್ಕೃತಿಯನ್ನು ಬುಡಸಮೇತ ಕಿತ್ತೊಗೆಯಲು ಪ್ರಯತ್ನಿಸುತ್ತಿರುವಾಗ, ಈ ಯಾತ್ರೆಯು ‘ಗೋವು ರಾಷ್ಟ್ರಮಾತೆ’ ಎಂದು ಘೋಷಿಸುತ್ತದೆ. ಇದು ಕೇವಲ ಗೋರಕ್ಷಣಾ ಆಂದೋಲನವಲ್ಲ, ಆದರೆ ಧರ್ಮರಾಜ್ಯದ ಪುನರ್ ಸ್ಥಾಪನೆಯ ಪೂರ್ವಸಿದ್ಧತೆಯಾಗಿದೆ. ‘ಗೋಮಾತಾ ಸಂಕಲ್ಪ ಯಾತ್ರೆ’ಯು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಆದರೆ ರಾಷ್ಟ್ರೀಯ ಪುನರುಜ್ಜೀವನಕ್ಕೆ ಒಂದು ಕರೆಯಾಗಿದೆ. ಭಾರತದ ಆತ್ಮವು ಧರ್ಮದಲ್ಲಿದೆ ಮತ್ತು ಧರ್ಮದ ಆಧಾರವು ‘ಗೋಮಾತೆ’ಯಾಗಿದೆ ಎಂಬುದನ್ನು ಈ ಯಾತ್ರೆಯು ನಮಗೆ ನೆನಪಿಸುತ್ತದೆ. ದೇಶವನ್ನು ಬಲಿಷ್ಠ, ಸ್ವಾವಲಂಬಿ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಪುನರುಜ್ಜೀವನಗೊಳಿಸಬೇಕಾದರೆ, ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನವನ್ನು ನೀಡಬೇಕಾಗುತ್ತದೆ.
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam