
ಅಮರಾವತಿ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಡೆಸಿದ ‘ಸ್ವಚ್ಛ ವಾಯು ಸಮೀಕ್ಷೆ 2025’ ಸ್ಪರ್ಧೆಯಲ್ಲಿ, 3 ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ, ಅಮರಾವತಿ ನಗರವು 200 ಕ್ಕೆ 200 ಅಂಕಗಳನ್ನು ಗಳಿಸಿ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಮರಾವತಿ ಮಹಾನಗರ ಪಾಲಿಕೆಯ ಆಯುಕ್ತರಾದ ಸೌಮ್ಯಾ ಶರ್ಮಾ-ಚಾಂಡಕ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಯು ₹75 ಲಕ್ಷ ಮತ್ತು ಪ್ರಶಂಸಾಪತ್ರವನ್ನು ಒಳಗೊಂಡಿದೆ.
ಅಮರಾವತಿ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಿದ ಗಿಡ ನೆಡುವಿಕೆ, ರಸ್ತೆಗಳನ್ನು ಧೂಳು ಮುಕ್ತವಾಗಿಡುವ ಯೋಜನೆಗಳು, ಸಂಚಾರಕ್ಕಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆ, ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ವಿಶೇಷ ಕ್ರಮಗಳು ಮುಂತಾದ ಪ್ರಯತ್ನಗಳಿಂದ ಅಮರಾವತಿ ನಗರಕ್ಕೆ ಈ ಯಶಸ್ಸು ಸಿಕ್ಕಿದೆ. ಈ ಸಮೀಕ್ಷೆಯಲ್ಲಿ ವಾಯು ಗುಣಮಟ್ಟ, ನಾಗರಿಕರ ಸಹಭಾಗಿತ್ವ, ಸುಸ್ಥಿರ ಪರಿಹಾರಗಳು, ಆಡಳಿತದ ಪಾತ್ರ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
ವಿಶೇಷವೆಂದರೆ, ಇದೇ ಸ್ಪರ್ಧೆಯಲ್ಲಿ ಅಮರಾವತಿಯು 2024ರಲ್ಲಿ ದೇಶದಲ್ಲಿ 2ನೇ ಸ್ಥಾನ ಮತ್ತು 2023ರಲ್ಲಿ 3ನೇ ಸ್ಥಾನ ಗಳಿಸಿತ್ತು.
ಸಂಪಾದಕೀಯ ನಿಲುವುಅಮರಾವತಿ ಮಹಾನಗರ ಪಾಲಿಕೆಯು ಕೈಗೊಂಡಿರುವ ಯೋಜನೆಗಳನ್ನು ಇತರ ನಗರಗಳು ಸಹ ಅನುಸರಿಸಿ, ತಮ್ಮ ನಗರಗಳನ್ನು ಮಾಲಿನ್ಯ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು! |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !