
ಜಾರ್ಖಂಡ್ – ಇಲ್ಲಿನ ಗಢವಾ ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಹತ್ಯೆಗಾಗಿ ಸಾಗಿಸಲಾಗುತ್ತಿದ್ದ 200ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 4 ರಂದು ಗೋವುಗಳ ಕಳ್ಳಸಾಗಣೆ ಬಗ್ಗೆ ಬಜರಂಗ ದಳದ ಜಿಲ್ಲಾ ಮುಖ್ಯಸ್ಥ ಸೋನು ಸಿಂಗ್ ಅವರಿಗೆ ಮಾಹಿತಿ ಲಭಿಸಿತ್ತು. (‘ಎಲ್ಲ ವ್ಯವಸ್ಥೆಗಳು ಕೈಯಲ್ಲಿ ಇದ್ದರೂ ಪೊಲೀಸರಿಗೆ ಈ ಮಾಹಿತಿ ಏಕೆ ಸಿಗುವುದಿಲ್ಲ?’ – ಸಂಪಾದಕರು) ‘200ಕ್ಕೂ ಹೆಚ್ಚು ಗೋವುಗಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಭಾರೀ ವಾಹನಗಳಲ್ಲಿ ತುಂಬಿ ಸಾಗಿಸಲಾಗುತ್ತಿದೆ’ ಎಂದು ಗೋರಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮತ್ತು ಗೋರಕ್ಷಕರು ಭಾರೀ ವಾಹನಗಳನ್ನು ತಡೆಯಲು ಯತ್ನಿಸಿದಾಗ, ಗೋ ಕಳ್ಳಸಾಗಣೆದಾರರು ಅವರ ಮೇಲೆ ದಾಳಿ ಮಾಡಲು ಯತ್ನಿಸಿದರು; ಆದರೆ ಪೊಲೀಸರು ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಗೋವುಗಳನ್ನು ಪಲಾಮುವಿನಲ್ಲಿರುವ ಗೋಶಾಲೆಗೆ ಕಳುಹಿಸಲಾಗಿದೆ. ‘ಜನರು ನಮಗೆ ಗೋವುಗಳನ್ನು ಮಾರಾಟ ಮಾಡಿದ್ದರು’ ಎಂದು ಗೋ ಕಳ್ಳಸಾಗಣೆದಾರರು ಹೇಳಿಕೊಂಡಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಕೇವಲ ಗೋರಕ್ಷಕರ ಪ್ರಯತ್ನದಿಂದ ಗೋಹಂತಕರು ತಮ್ಮ ಕೃತ್ಯಗಳನ್ನು ನಿಲ್ಲಿಸುವುದಿಲ್ಲ. ನಕ್ಸಲರಂತೆ ಗೋಹತ್ಯೆಯ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”