ಪಂಜಾಬಿನಲ್ಲಿ 43 ಜನರು ಸಾವನ್ನಪ್ಪಿದ್ದಾರೆ, 1 ಸಾವಿರ 902 ಹಳ್ಳಿಗಳು ಜಲಾವೃತ

ದೆಹಲಿ / ಚಂಡೀಗಢ / ಮಥುರಾ – ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಹದಗೆಡುತ್ತಿದೆ. ಪಂಜಾಬ್ ರಾಜ್ಯದಲ್ಲಿ ಇದುವರೆಗೆ ಭಾರಿ ಹಾನಿಯಾಗಿದೆ. ಇಲ್ಲಿಯವರೆಗೆ 43 ಜನರು ಸಾವನ್ನಪ್ಪಿದ್ದು, 23 ಜಿಲ್ಲೆಗಳ 1 ಸಾವಿರದ 902 ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡಿವೆ. ಕನಿಷ್ಠ 4 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಭಾಕ್ರಾ ಅಣೆಕಟ್ಟಿನ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಕೇವಲ 1 ಅಡಿ ಕೆಳಗಿದೆ. ಭಾಕ್ರಾ ಅಣೆಕಟ್ಟಿನಿಂದ 85 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಇತರ ಗ್ರಾಮಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಪ್ರವಾಹ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೆಹಲಿಯ ವಸತಿ ಪ್ರದೇಶಗಳು ಜಲಾವೃತವಾಗಲಿವೆ!

ರಾಜಧಾನಿಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ‘ಇಲ್ಲಿನ ಹಳೆಯ ಕಬ್ಬಿಣದ ಸೇತುವೆ ನೀರಿನಲ್ಲಿ ಮುಳುಗುತ್ತದೆ’ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸಧ್ಯ ನದಿಯ ನೀರು 207.48 ಮೀಟರ್ ಗೆ ತಲುಪಿದೆ. ಎಚ್ಚರಿಕೆಯ ಮಟ್ಟ 204.5 ಮೀಟರ್, ಅಪಾಯಕಾರಿ ಮಟ್ಟ 205.33 ಮೀಟರ್ ಮತ್ತು ಹೆಚ್ಚಿನ ಪ್ರವಾಹ ಮಟ್ಟ 208.66 ಮೀಟರ್ ಆಗಿದೆ. ಕೆಲವು ವಸತಿ ಪ್ರದೇಶಗಳಲ್ಲಿ ಯಮುನಾ ನೀರು 4 ರಿಂದ 10 ಅಡಿಗಳಷ್ಟು ನುಗ್ಗಿದೆ.
1. ಹಥಿನಿಕುಂಡ ಅಣೆಕಟ್ಟಿನಿಂದ ಪ್ರತಿ ಗಂಟೆಗೆ ಸುಮಾರು 2 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
2. ಯಮುನಾ ನದಿಗೆ ಬಿಡಲಾಗುವ ಚರಂಡಿಗಳ ನೀರನ್ನು ತಡೆಯಲಾಗಿದೆ. ಕೆಳಮಟ್ಟದ ಪ್ರದೇಶಗಳಲ್ಲಿ ಚರಂಡಿಗಳಿಂದ ನಿರಂತರವಾಗಿ ನೀರು ಹರಿಯುತ್ತಿದೆ. ಪ್ರವಾಹ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೆಹಲಿಯ ವಸತಿ ಪ್ರದೇಶಗಳು ಮುಳುಗುತ್ತವೆ.
ಮಥುರಾ-ವೃಂದಾವನದಲ್ಲಿನ ಪರಿಸ್ಥಿತಿ!
ರಾಜಧಾನಿ ದೆಹಲಿಯಲ್ಲಿ ಯಮುನಾ ನದಿಯ ನೀರು ಅಪಾಯಕಾರಿ ಮಟ್ಟವನ್ನು ತಲುಪಿದಂತಹ ಪರಿಸ್ಥಿತಿಯು ತೀರ್ಥಕ್ಷೇತ್ರ ಮಥುರಾ-ವೃಂದಾವನದಲ್ಲಿಯೂ ನಿರ್ಮಾಣವಾಗಿದೆ. ಮಥುರಾ ಜಿಲ್ಲೆಯ ಕನಿಷ್ಠ 13 ಹಳ್ಳಿಗಳು ಜಲಾವೃತವಾಗಿವೆ. ಅಲ್ಲಿ 4 ಅಡಿ ನೀರಿದ್ದು, ಅದು ಮನೆಗಳಿಗೆ ನುಗ್ಗಿದೆ. ಅನೇಕ ಗ್ರಾಮಗಳ ಗಡಿಗಳನ್ನು ದಾಟಿ ನೀರು ತಲುಪಿದೆ. ಯಮುನಾ ನದಿಗೆ ಹೊಂದಿಕೊಂಡಿರುವ 23 ಹಳ್ಳಿಗಳು ಪ್ರವಾಹದಿಂದ ತತ್ತರಿಸಿವೆ. ಅನೇಕ ಘಾಟ್ ಗಳನ್ನು ಮುಚ್ಚಲಾಗಿದೆ.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ