|
(ಸ್ಟಿಂಗ್ ಆಪರೇಷನ್ ಎಂದರೆ ರಹಸ್ಯವಾಗಿ ಚಿತ್ರೀಕರಿಸಿದ ವೀಡಿಯೋ)

ಆಗ್ರಾ (ಉತ್ತರ ಪ್ರದೇಶ) – ಪಾದ್ರಿ ರಾಜಕುಮಾರ್ ಲಾಲ್ವಾನಿ ಮತ್ತು ಆತನ ಗುಂಪು ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಷಡ್ಯಂತ್ರವನ್ನು ‘ಸ್ಟಿಂಗ್ ಆಪರೇಷನ್’ ಮೂಲಕ ಬಯಲು ಮಾಡಲಾಗಿದೆ. ಪೊಲೀಸರಿಗೆ ದೊರೆತ ವೀಡಿಯೋಗಳಲ್ಲಿ, ಇಲ್ಲಿನ ಶಾಹಗಂಜ್ ಪ್ರದೇಶದಲ್ಲಿ ಪಾದ್ರಿ ರಾಜಕುಮಾರ್ ಹಿಂದೂ ಮಹಿಳೆಯರಿಗೆ, ‘ನೀವು ಪ್ರಯೋಜನಗಳನ್ನು ಪಡೆಯಬೇಕಿದ್ದರೆ, ತಾಳಿ ಮತ್ತು ಸಿಂಧೂರವನ್ನು ಧರಿಸುವುದನ್ನು ಬಿಡಬೇಕು’ ಎಂದು ಹೇಳುತ್ತಿರುವುದು ಕಂಡುಬಂದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ, ‘ನಿಮ್ಮ ಮನೆಯಿಂದ ಹಿಂದೂ ದೇವರ ವಿಗ್ರಹಗಳನ್ನು ತೆಗೆದುಹಾಕಿ. ನೀವು ರಾಕ್ಷಸರ ಆರಾಧನೆ ಮಾಡುತ್ತಿದ್ದೀರಿ. ಅದಕ್ಕಾಗಿಯೇ ನಿಮಗೆ ತೊಂದರೆಯಾಗುತ್ತಿದೆ. ಈ ಸ್ವರ್ಗದ ಏಕೈಕ ಒಡೆಯ ಯೇಸು ಕ್ರಿಸ್ತ’ ಎಂದು ಆತ ಹೇಳಿದ್ದಾನೆ. ಸೆಪ್ಟೆಂಬರ್ 2 ರಂದು, ಪೊಲೀಸರು ರಾಜಕುಮಾರ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದಾರೆ.
ಮತಾಂತರದ ಷಡ್ಯಂತ್ರ ಹೀಗೆ ಬೆಳಕಿಗೆ ಬಂದಿತು!
ಪಾದ್ರಿ ಲಾಲ್ವಾನಿ ಮನೆ ಸಮೀಪ ವಾಸಿಸುತ್ತಿದ್ದ ಘನಶ್ಯಾಮ್ ಹೇಮ್ಲಾನಿ ಅವರು ‘ಸ್ಟಿಂಗ್ ಆಪರೇಷನ್’ ನಡೆಸಿ ಈ ಮಾಹಿತಿಯನ್ನು ಹೊರ ತೆಗೆದಿದ್ದಾರೆ. ಅವರ ಪತ್ನಿ ರಾಧಾ ಅವರಿಗೆ ಹೊಟ್ಟೆ ನೋವಿದ್ದ ಕಾರಣ, ಕೆಲವು ಮಹಿಳೆಯರು ಅವರನ್ನು ಸತ್ಸಂಗದ ನೆಪದಲ್ಲಿ ರಾಜಕುಮಾರ್ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪಾದ್ರಿ ಅವರಿಗೆ, ‘ನಿಮ್ಮ ತೊಂದರೆಗೆ ನಿಮ್ಮ ದೇವರೇ ಕಾರಣ. ನೀವು ಯೇಸು ಕ್ರಿಸ್ತನನ್ನು ನಂಬಿದರೆ, ಎಲ್ಲವೂ ಸರಿಹೋಗುತ್ತದೆ’ ಎಂದು ಹೇಳಿದ್ದಾನೆ. ಬಳಿಕ ರಾಧಾ ಅವರ ಕೈಯಲ್ಲಿದ್ದ ಪವಿತ್ರ ದಾರ ಮತ್ತು ಕತ್ತಿನಲ್ಲಿದ್ದ ತಾಳಿಯನ್ನು ತೆಗೆದಿದ್ದಾನೆ.
ಈ ಘಟನೆ ಘನಶ್ಯಾಮ್ ಅವರ ಗಮನಕ್ಕೆ ಬಂದಾಗ, ಅವರು ರಹಸ್ಯವಾಗಿ ಸಂಪೂರ್ಣ ಘಟನೆಯನ್ನು ಚಿತ್ರೀಕರಿಸಿದರು ಮತ್ತು ಅದನ್ನು ಸಚಿವ ಯೋಗೇಂದ್ರ ಉಪಾಧ್ಯಾಯ ಅವರಿಗೆ ತೋರಿಸಿದರು. ನಂತರ, ಈ ಎಲ್ಲದರ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ, ಸೆಪ್ಟೆಂಬರ್ 2 ರಂದು 8 ಜನರನ್ನು ಬಂಧಿಸಲಾಯಿತು. ಬಂಧಿತರಲ್ಲಿ ರಾಜಕುಮಾರ್ ಲಾಲ್ವಾನಿ, ಅನುಪ್ ಕುಮಾರ್, ಕಮಲ್ ಕುಂಡಲಾನಿ, ಜೈಕುಮಾರ್, ಅರುಣ್ ಮತ್ತು 3 ಮಹಿಳೆಯರು ಸೇರಿದ್ದಾರೆ. (ಹಿಂದೂ ಹೆಸರುಗಳನ್ನಿರುವ ಇಂತಹ ಕ್ರೈಸ್ತರ ಬಗ್ಗೆ ಎಚ್ಚರ! – ಸಂಪಾದಕರು)
ಸಂಪಾದಕೀಯ ನಿಲುವು
|
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!