ಕಾಂಗ್ರೆಸ್ಅನ್ನು ಖಂಡಿಸಲು ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ’ದಿಂದ ‘ಬಿಹಾರ ಬಂದ್’ ಪ್ರತಿಭಟನೆ! : Bihar Bandh

ಕಾಂಗ್ರೆಸ್ ಕಾರ್ಯಕರ್ತನಿಂದ ಪ್ರಧಾನಿ ಮೋದಿಯವರ ದಿವಂಗತ ತಾಯಿಯವರನ್ನು ನಿಂದಿಸಿದ ಪ್ರಕರಣ

ಪಾಟಲೀಪುತ್ರ (ಬಿಹಾರ) – ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾಜಪ ನೇತೃತ್ವದ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ’ (ಎನ್‌ಡಿಎ) ಸೆಪ್ಟೆಂಬರ್ 4ರಂದು ‘ಬಿಹಾರ ಬಂದ್’ಗೆ ಕರೆ ನೀಡಿತ್ತು. ರಾಜ್ಯಾದ್ಯಂತ ಈ ಬಂದ್ ಪರಿಣಾಮ ಗೋಚರಿಸಿತು. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಅವರು ‘ನಾನು ಕೂಡ ಒಬ್ಬ ತಾಯಿ’ ಎಂದು ಬರೆದಿದ್ದ ಫಲಕಗಳನ್ನು ಹಿಡಿದುಕೊಂಡಿದ್ದರು.

ಎನ್‌ಡಿಎಯಿಂದ ಪಾಟಲಿಪುತ್ರ, ಗಯಾ, ಮುಂಗೇರ್, ಸಮಸ್ತಿಪುರ, ಬೇಗುಸರಾಯ, ಛಪ್ರಾ, ಹಾಜಿಪುರ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಭಾಜಪ ಮತ್ತು ಅದರ ಮಿತ್ರಪಕ್ಷಗಳ ಮಹಿಳಾ ನಾಯಕರು ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದರು. ಇದರೊಂದಿಗೆ ಭಾಜಪ ಕಾರ್ಯಕರ್ತರು ‘ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ. ಆಗಸ್ಟ್ 27, 2025 ರಂದು ದರಭಂಗಾದಲ್ಲಿ ಆಯೋಜಿಸಲಾಗಿದ್ದ ಮತದಾರರ ಹಕ್ಕು ಯಾತ್ರೆಯ ಸಂದರ್ಭದಲ್ಲಿ, ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಉಪಸ್ಥಿತರಿದ್ದ ವೇದಿಕೆಯಿಂದ ಒಬ್ಬ ಕಾರ್ಯಕರ್ತ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿಯನ್ನು ನಿಂದಿಸಿದ್ದರು. ಅಂದಿನಿಂದ ಭಾಜಪ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದೆ.