ಪ್ರತಿಭಟನೆಯನ್ನು ಖಂಡಿಸಿದ ಆಸ್ಟ್ರೇಲಿಯಾದ ಪ್ರಧಾನಿ

ಸಿಡ್ನಿ (ಆಸ್ಟ್ರೇಲಿಯಾ) – ದೇಶದ 20 ನಗರಗಳಲ್ಲಿ ಭಾರತೀಯ ವಲಸಿಗರ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ‘ಭಾರತೀಯ ವಲಸಿಗರಿಂದಾಗಿ ಆಸ್ಟ್ರೇಲಿಯಾದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ’ ಎಂದು ಪ್ರತಿಭಟನಾಕಾರರು ವಿಚಿತ್ರವಾಗಿ ಆರೋಪಿಸಿದ್ದಾರೆ. ಬ್ರಿಟನ್ ನಂತರ, ಭಾರತೀಯರು ಆಸ್ಟ್ರೇಲಿಯಾದಲ್ಲಿ ಎರಡನೇ ಅತಿ ದೊಡ್ಡ ವಲಸಿಗರ ಗುಂಪಾಗಿದ್ದಾರೆ. ಜೂನ್ 2023 ರವರೆಗೆ, ಆಸ್ಟ್ರೇಲಿಯಾದಲ್ಲಿ 8 ಲಕ್ಷ 4 ಸಾವಿರ ಭಾರತೀಯ ಮೂಲದ ನಿವಾಸಿಗಳಿದ್ದರು. ಆಸ್ಟ್ರೇಲಿಯಾದ ಜನಸಂಖ್ಯೆ 2 ಕೋಟಿ 72 ಲಕ್ಷ ಇದೆ. ‘ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಕೇವಲ 3.2 ಶೇಕಡಾ ಇದೆ. ಹೀಗಿದ್ದರೂ, ಆಸ್ಟ್ರೇಲಿಯಾದಲ್ಲಿನ ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಹಣದುಬ್ಬರಕ್ಕೆ ಭಾರತೀಯರನ್ನು ಏಕೆ ದೂಷಿಸಲಾಗುತ್ತಿದೆ?’ ಎಂದು ಭಾರತೀಯರು ಪ್ರಶ್ನಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ದಾಳಿಗಳ ಸಂಖ್ಯೆಯೂ ಹೆಚ್ಚಿದೆ.
1. ಆಸ್ಟ್ರೇಲಿಯಾದ ಆಡಳಿತ ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಅಲ್ಲಿನ ಭಾರತೀಯ ಸಮುದಾಯದ ಸಕಾರಾತ್ಮಕ ಕೊಡುಗೆಯನ್ನು ಒಪ್ಪಿಕೊಂಡಿದ್ದಾರೆ.
2. ಹೀಗಿದ್ದರೂ, ದೇಶದ ಬಿಳಿಯರು, ಕಟ್ಟರವಾದಿ ಕ್ರೈಸ್ತರು ಮತ್ತು ಕಪಟ ಬಲಪಂಥೀಯರು ಅಲ್ಲಿನ ಭಾರತೀಯರನ್ನು ವಿರೋಧಿಸುತ್ತಿದ್ದಾರೆ. ‘ಆಸ್ಟ್ರೇಲಿಯಾಕ್ಕೆ ಕ್ರೈಸ್ತ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮದವರು ಬರಬಾರದು’ ಎಂದು ಅವರು ಭಾವಿಸುತ್ತಾರೆ.
3. ‘ಮಾರ್ಚ್ ಫಾರ್ ಆಸ್ಟ್ರೇಲಿಯಾ’ ಹೆಸರಿನಲ್ಲಿ ಮೆರವಣಿಗೆ ನಡೆಸುತ್ತಿರುವ ಸಂಘಟಕರು ಒಂದು ಪತ್ರಿಕೆಯನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ, ಕಳೆದ 100 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಗ್ರೀಸ್ ಮತ್ತು ಇಟಲಿಯಿಂದ ಎಷ್ಟು ನಾಗರಿಕರು ಬಂದಿಲ್ಲವೋ, ಅದಕ್ಕಿಂತ ಹೆಚ್ಚು ಭಾರತೀಯ ನಾಗರಿಕರು ಕಳೆದ 5 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
4. ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಜನರು ಆಡಳಿತಾರೂಢ ಲೇಬರ್ ಪಕ್ಷದ ಬೆಂಬಲಿಗರಾಗಿದ್ದಾರೆ. ಈ ಪಕ್ಷವನ್ನು ಸುಧಾರಣಾವಾದಿ ಮತ್ತು ಎಡಪಂಥೀಯ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಅವರ ಮತಗಳು ಆಸ್ಟ್ರೇಲಿಯಾದ ರಾಜಕೀಯದ ಮೇಲೆ ಪರಿಣಾಮ ಬೀರಬಹುದು ಎಂದು ಅಲ್ಲಿನ ಬಲಪಂಥೀಯರು ಭಾವಿಸುತ್ತಾರೆ.
5. ಆಸ್ಟ್ರೇಲಿಯಾದಲ್ಲಿ ಕಟ್ಟರ ಬಲಪಂಥೀಯ ಜನರು ವಿರೋಧ ಪಕ್ಷದ ಲಿಬರಲ್ ಪಕ್ಷದ ಬೆಂಬಲಿಗರಾಗಿದ್ದಾರೆ. ಅದಕ್ಕಾಗಿಯೇ ಅವರು ಭಾರತೀಯ ಮೂಲದ ನಾಗರಿಕರನ್ನು ವಿರೋಧಿಸುತ್ತಾರೆ.
ಪ್ರತಿಭಟನಾಕಾರರು ‘ನವ-ನಾಜಿಗಳು’! – ಆಂಥೋನಿ ಅಲ್ಬನೀಸ್, ಪ್ರಧಾನ ಮಂತ್ರಿ, ಆಸ್ಟ್ರೇಲಿಯಾ
(ನವ-ನಾಜಿ ಎಂದರೆ ಜರ್ಮನಿಯ ನಾಜಿಗಳಂತೆ ಕಟ್ಟರವಾದಿ ಜನಾಂಗೀಯವಾದಿ ಮತ್ತು ಕ್ರೂರ ಸಿದ್ಧಾಂತ ಹೊಂದಿರುವ ಜನರು)

ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರು, ಪ್ರತಿಭಟನೆ ನಡೆಸುವವರು ನವ-ನಾಜಿ ಗುಂಪುಗಳಿಗೆ ಸಂಬಂಧಿಸಿದ್ದಾರೆ ಎಂದು ಹೇಳಿದರು. ನವ-ನಾಜಿ ಗುಂಪು ಎಂದು ಗುರುತಿಸಲ್ಪಟ್ಟ ‘ನ್ಯಾಷನಲ್ ಸೋಷಿಯಲಿಸ್ಟ್ ನೆಟ್‌ವರ್ಕ್’ ಸಂಸ್ಥೆಯ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರು ಪೋಸ್ಟ್ ಮಾಡಿ, ಪ್ರತಿಭಟನೆಯನ್ನು ಬೆಂಬಲಿಸುವವರು ಮಹಿಳಾ ವಿರೋಧಿಗಳು, ಶ್ವೇತವರ್ಣೀಯ ಪ್ರಾಬಲ್ಯವಾದಿಗಳು, ಹವಾಮಾನ ಬದಲಾವಣೆಯನ್ನು ನಿರಾಕರಿಸುವವರು, ಮತ್ತು ಟ್ರಂಪ್ ಬೆಂಬಲಿಗರು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಭಾರತೀಯ ವಲಸಿಗರ ವಿರುದ್ಧ ವಿರೋಧ ಮತ್ತು ದಾಳಿಗಳು ಹೆಚ್ಚುತ್ತಿವೆ. ಈ ದಾಳಿಗಳನ್ನು ನಡೆಸುತ್ತಿರುವ ಕಟ್ಟರವಾದಿ ಬಿಳಿಯರು ಮತ್ತು ಕಟ್ಟರವಾದಿ ಕ್ರೈಸ್ತರ ಪಿತೂರಿಯನ್ನು ತಡೆಯಲು ಭಾರತ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation