ಚೀನಾದಲ್ಲಿ ನಡೆಯುತ್ತಿರುವ ‘ಶಾಂಘೈ ಸಹಕಾರ ಸಂಘಟನೆ’ಯ ಶೃಂಗಸಭೆ

ಟಿಯಾಂಜಿನ್ (ಚೀನಾ) – ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯನ್ನು ಶಾಂಘೈ ಸಹಕಾರ ಸಂಘಟನೆಯು ಸೆಪ್ಟೆಂಬರ್ 1 ರಂದು ತೀವ್ರವಾಗಿ ಖಂಡಿಸಿದೆ. ಇದರ ಜೊತೆಗೆ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಯಾವುದೇ ‘ದ್ವಿಮುಖ ನೀತಿಯನ್ನು’ ಸ್ವೀಕರಿಸಲಾಗುವುದಿಲ್ಲ ಎಂಬ ಭಾರತದ ನಿಲುವಿಗೆ ಒಪ್ಪಿಗೆ ಸೂಚಿಸಲಾಗಿದೆ. ಸಂಘಟನೆಯ ಜಂಟಿ ಘೋಷಣೆಯಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಲಾಗಿದೆ. ಇಲ್ಲಿ ನಡೆಯುತ್ತಿರುವ ಸಂಘಟನೆಯ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಇವರ ಜೊತೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇತರ ಅನೇಕ ಜಾಗತಿಕ ನಾಯಕರು ಉಪಸ್ಥಿತರಿದ್ದರು.
🌐 #SCOSummit in China: United Stand Against Terror!
🚨 Pahalgam terror attack in J&K condemned by all SCO nations. PM Modi, Xi Jinping, Putin & world leaders attend.
❌ “No double standards” in fighting terrorism – SCO joint declaration.
⚠️ Also condemned: Israeli attacks on… pic.twitter.com/o3zL0tc7mj
— Sanatan Prabhat (@SanatanPrabhat) September 1, 2025
1. ಶೃಂಗಸಭೆಯ ಸದಸ್ಯ ರಾಷ್ಟ್ರಗಳು ಇಸ್ರೇಲ್‌ನಿಂದ ಗಾಜಾದ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಹ ಖಂಡಿಸಿವೆ. ಇದಕ್ಕೆ ಕಾರಣ, ಈ ದಾಳಿಗಳಿಂದಾಗಿ ಅಪಾರ ಸಂಖ್ಯೆಯಲ್ಲಿ ನಾಗರಿಕರು ಸಾವನ್ನಪ್ಪಿದ್ದಾರೆ.
2. ಇದರ ಜೊತೆಗೆ, ಬಲೂಚಿಸ್ತಾನದ ಖುಜ್ದಾರ್ ಮತ್ತು ಜಾಫರ್ ಎಕ್ಸ್‌ಪ್ರೆಸ್ ಮೇಲೆ ‘ಬಲೂಚಿಸ್ತಾನ ಲಿಬರೇಶನ್ ಆರ್ಮಿ’ ಎಂಬ ಕ್ರಾಂತಿಕಾರಿ ಸಂಘಟನೆಯಿಂದ ನಡೆದ ದಾಳಿಗಳನ್ನೂ ಖಂಡಿಸಲಾಗಿದೆ.
3. ಭಯೋತ್ಪಾದನೆ ಮತ್ತು ಉಗ್ರವಾದದ ಬೆದರಿಕೆಗಳನ್ನು ಎದುರಿಸಲು ಸಾರ್ವಭೌಮ ರಾಷ್ಟ್ರಗಳು ಮತ್ತು ಅವುಗಳ ಸಮರ್ಥ ಸಂಸ್ಥೆಗಳ ಪಾತ್ರವು ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ