ಹೆಮ್ಮೆಯಿಂದ ಹೇಳಿ ‘ಈ ವಸ್ತು ಸ್ವದೇಶಿ’ ಆಗಿದೆ ! – ಪ್ರಧಾನಿ ಮೋದಿ

‘ಮನ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಂದ ಆತ್ಮ ನಿರ್ಭರ ಭಾರತ ರೂಪಿಸಲು ಜನರಿಗೆ ಕರೆ

ನವದೆಹಲಿ – ಪ್ರಸ್ತುತ ದೇಶಾದ್ಯಂತ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನೇಕ ಹಬ್ಬಗಳು ಬರಲಿವೆ. ಈ ಹಬ್ಬಗಳಲ್ಲಿ ನೀವು ಎಂದಿಗೂ ಸ್ವದೇಶಿ ಎಂಬ ಅಂಶವನ್ನು ಮರೆಯಬಾರದು. ಉಡುಗೊರೆಗಳನ್ನು ಭಾರತದಲ್ಲಿ ತಯಾರಿಸಬೇಕು, ಬಟ್ಟೆಗಳನ್ನು ಭಾರತದಲ್ಲಿ ನೇಯಬೇಕು, ಅಲಂಕಾರಿಕ ವಸ್ತುಗಳನ್ನು ಭಾರತದಲ್ಲಿ ತಯಾರಿಸಿದ ವಸ್ತುಗಳಿಂದಲೇ ಮಾಡಬೇಕು, ಬೆಳಕಿನ ಅಲಂಕಾರವನ್ನು ಭಾರತದಲ್ಲಿ ತಯಾರಿಸಿದ ಹಾರಗಳಿಂದಲೇ ಮಾಡಬೇಕು. ಎಲ್ಲವೂ ಸ್ವದೇಶಿಯಾಗಿರಬೇಕು. ‘ಈ ವಸ್ತು ಸ್ವದೇಶಿ’ ಎಂದು ಹೆಮ್ಮೆಯಿಂದ ಹೇಳಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಅವರು ‘ಮನ್ ಕಿ ಬಾತ್’ನ 125 ನೇ ಸರಣಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಅಮೆರಿಕವು ವಿಧಿಸಿದ 50% ಆಮದು ಸುಂಕವನ್ನು ಉಲ್ಲೇಖಿಸದೆ, ಪ್ರಧಾನ ಮಂತ್ರಿಯವರು ದೇಶವಾಸಿಗಳಿಗೆ ‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ವ್ಯಾಪಾರವನ್ನು ಉತ್ತೇಜಿಸುವುದು)ಗಾಗಿ ಧ್ವನಿ ಎತ್ತುವಂತೆ ಕರೆ ನೀಡಿದರು. ಪ್ರಧಾನ ಮಂತ್ರಿಯವರು ಸ್ವಾಭಿಮಾನವನ್ನು ಒಂದು ಅಸ್ತ್ರವನ್ನಾಗಿ ಮಾಡುವಂತೆ ಪರೋಕ್ಷವಾಗಿ ಕರೆ ನೀಡಿದರು.

ಪ್ರಧಾನ ಮಂತ್ರಿಗಳು ಮಾತು ಮುಂದುವರೆಸಿ, ನಾವು ‘ಒಂದೇ ಮಂತ್ರ ‘ಸ್ಥಳೀಯರಿಗಾಗಿ ಧ್ವನಿ’, ಒಂದೇ ಮಾರ್ಗ ‘ಆತ್ಮನಿರ್ಭರ ಭಾರತ’, ಒಂದೇ ಗುರಿ ‘ವಿಕಸಿತ ಭಾರತ’ ಈ ಭಾವನೆಯೊಂದಿಗೆ ಮುಂದೆ ಸಾಗಬೇಕು’ ಎಂದರು. ಇದೇ ಸಂದರ್ಭದಲ್ಲಿ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಪ್ರವಾಹದಿಂದ ಆದ ವಿನಾಶದ ಬಗ್ಗೆಯೂ ಅವರು ದುಃಖ ವ್ಯಕ್ತಪಡಿಸಿದರು.