‘ನಾಮಶೂದ್ರ ಮತ್ತು ಮತುಆ ಸಮುದಾಯಗಳು ‘ಚುನಾವಣೆ ಸನಾತನಿಗಳು’! (ಅಂತೆ)

ತೃಣಮೂಲ ಕಾಂಗ್ರೆಸ್ಸಿನ ಮಹುವಾ ಮೊಯಿತ್ರಾ ಇವರಿಂದ ಹಿಂದೂಗಳನ್ನು ಅವಮಾನ!

(ನಾಮಶೂದ್ರ ಮತ್ತು ಮತುಆ ಬಂಗಾಳದ ಹಿಂದೂಗಳ ಎರಡು ಜಾತಿಗಳು)

ಕೋಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ ನ ಸಂಸದೆ ಮಹುವಾ ಮೊಯಿತ್ರಾ ಅವರು, ಪರಿಶಿಷ್ಟ ಜಾತಿಗಳು, ನಾಮಶೂದ್ರ ಮತ್ತು ಮತುಆ ಸಮುದಾಯದ ಜನರು ಮಮತಾ ಬ್ಯಾನರ್ಜಿ ಸರಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಾರೆ, ಆದರೆ ಚುನಾವಣೆಯ ಸಮಯದಲ್ಲಿ ‘ಸನಾತನಿ’ಗಳಾಗಿ ಭಾಜಪದ ಪರವಾಗಿ ಮತ ಚಲಾಯಿಸುತ್ತಾರೆ ಎಂದು ಖೇಧಕರ ಹೇಳಿಕೆಯನ್ನು ನೀಡಿದ್ದಾರೆ. ಹಿಂದೂಗಳ ಮೇಲೆ ಜಾತಿ ದ್ವೇಷ ಪ್ರೇರಿತ ಟೀಕೆಗಳನ್ನು ಮಾಡುತ್ತಿರುವ ಅವರ ಬಂಗಾಳಿ ಭಾಷೆಯ ವಿಡಿಯೋವನ್ನು ಭಾಜಪದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ‘ಎಕ್ಸ್’ನಲ್ಲಿ ಪ್ರಸಾರ ಮಾಡಿದ್ದಾರೆ. ವಾಸ್ತವವಾಗಿ, ಈ ಹೇಳಿಕೆಯನ್ನು ಅವರು ಆಗಸ್ಟ್ 28 ರಂದು ನೀಡಿದ್ದರು. ಈ ಹೇಳಿಕೆಯ ಮೂಲಕ ಅವರು ‘ಯಾರಾದರೂ ಒಂದೇ ಸಮಯದಲ್ಲಿ ಹಿಂದೂ (ಸನಾತನಿ) ಮತ್ತು ತೃಣಮೂಲ ಕಾಂಗ್ರೆಸ್‌ನ ಬೆಂಬಲಿಗರಾಗಿರಲು ಸಾಧ್ಯವಿಲ್ಲ’ ಎಂದು ಸೂಚಿಸುತ್ತಿದ್ದಾರೆ.

1. ಮೊಯಿತ್ರಾ ಅವರು ವೈಷ್ಣವ ಪಂಥದವರು ಕೊರಳಲ್ಲಿ ಧರಿಸುವ ಗಂಟೆಯ ಹಾರಕ್ಕೂ ಅಪಮಾನ ಮಾಡಿದ್ದಾರೆ. ಅವರು, ‘ಕುತ್ತಿಗೆಯಲ್ಲಿ ಮರದ ಹಾರ ಹಾಕಿಕೊಂಡಿರುವ ಜನರು ಸರಕಾರದಿಂದ ಹಣ ಪಡೆಯಲು ಮಾತ್ರ ಮರೆಯುವುದಿಲ್ಲ’ ಎಂದು ಹೇಳಿದರು.

2. ಇತ್ತೀಚೆಗೆ ಅವರು, ‘ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರ ತಲೆಯನ್ನು ಕತ್ತರಿಸಿ ಅದನ್ನು ವೇದಿಕೆಯ ಮೇಲೆ ಇಟ್ಟು ಜನರಿಗೆ ತೋರಿಸಬೇಕು’ ಎಂದು ಖೇದಕರ ಹೇಳಿಕೆಯನ್ನು ನೀಡಿದ್ದರು. ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೊರರ ವಿರುದ್ಧ ನಡೆಯುತ್ತಿರುವ ಕ್ರಮಗಳ ಬಗ್ಗೆ ಅವರು ಈ ಹೇಳಿಕೆ ನೀಡಿದ್ದರು.

ಇದಕ್ಕೆ ಭಾಜಪದಿಂದ ತೀವ್ರ ವಿರೋಧ ವ್ಯಕ್ತ!

ಭಾಝಪ ನಾಯಕ ಅಮಿತ್ ಮಾಳವೀಯ ಅವರು, ಮೊಯಿತ್ರಾ ಅವರ ಭಾಷಣವನ್ನು ಭಾಜಪ ತೀವ್ರವಾಗಿ ಖಂಡಿಸುತ್ತದೆ. ನಾವು ಯಾವಾಗಲೂ ನಾಮಶೂದ್ರ, ಪರಿಶಿಷ್ಟ ಜಾತಿ ಮತ್ತು ಮತುಆ ಸಮುದಾಯಗಳ ಪರವಾಗಿ ದೃಢವಾಗಿ ನಿಂತಿದ್ದೇವೆ. ಹಿಂದೂ ಸಮುದಾಯಗಳಿಗೆ ಅವಮಾನ ಮಾಡಿದ್ದರಿಂದ ಮೊಯಿತ್ರಾ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ನಡುವೆ ಈ ರೀತಿಯ ಬಿರುಕು ಮೂಡಿಸಲು ಯತ್ನಿಸುತ್ತಿರುವ ಮಹುವಾ ಮೊಯಿತ್ರಾ ಮತ್ತು ಅವರ ತೃಣಮೂಲ ಕಾಂಗ್ರೆಸ್ ಅನ್ನು ಎಷ್ಟು ಖಂಡಿಸಿದರೂ ಕಡಿಮೆ. ಸಾರ್ವಜನಿಕವಾಗಿ ದ್ವೇಷವನ್ನು ಹರಡುವ ತೃಣಮೂಲ ಕಾಂಗ್ರೆಸ್ ಸರಕಾರಿ ಮಟ್ಟದಲ್ಲಿ ಎಷ್ಟು ಭೀಕರವಾದ ತಾರತಮ್ಯ ಮಾಡುತ್ತಿರಬಹುದು, ಅದನ್ನು ಊಹಿಸದಿರುವುದೇ ಉತ್ತಮ!