‘ಬಾಂಗ್ಲಾದೇಶದಂತೆ ಪ್ರಧಾನಿ ಮೋದಿ ಅವರ ಮನೆ ಮೇಲೂ ದಾಳಿ ಆಗಬಹುದಂತೆ!’ – ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ್

ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ್ ರ ಪ್ರಚೋದನಕಾರಿ ಹೇಳಿಕೆ

ಗಜೇಂದ್ರಗಡ – ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಒಂದು ಪ್ರಕರಣದಲ್ಲಿ ಮೊಕದ್ದಮೆ ನಡೆಸಲು ಅನುಮತಿ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ನ ಶಾಸಕ ಜಿ.ಎಸ್. ಪಾಟೀಲ್ ಆಕ್ರೋಶ ಗೊಂಡಿದ್ದಾರೆ. ಅವರು ಭಾಝಪದ ಷಡ್ಯಂತ್ರ ಎಂದು ಆರೋಪಿಸುತ್ತಾ ನೇರವಾಗಿ ಪ್ರಧಾನಿಗಳಿಗೆ ಬೆದರಿಕೆ ಹಾಕಿದ್ದಾರೆ. ಅವರು, ಇದೇ ರೀತಿ ಮುಂದುವರಿದರೆ, ಬಾಂಗ್ಲಾದೇಶದಂತೆ ಜನರು ಪ್ರಧಾನಿ ಮೋದಿ ಅವರ ನಿವಾಸದ ಮೇಲೆ ದಾಳಿ ಮಾಡುವ ದಿನ ದೂರವಿಲ್ಲ ಎಂದು ಅವರು ಹೇಳಿದ್ದಾರೆ.

ಪಾಟೀಲ್ ಅವರು ಮುಂದೆ ಮಾತನಾಡಿ, ಆಕ್ರಮವಾಗಿ ಅಪಾರ ಸಂಪತ್ತು ಗಳಿಸಿದವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಸಿದ್ದರಾಮಯ್ಯ ಅವರ ವಿರುದ್ಧ ಕ್ಷುಲ್ಲಕ ಕಾರಣಕ್ಕಾಗಿ ತನಿಖೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. (ಸಣ್ಣ ಕಾರಣವಿದ್ದರೂ, ಏನಾದರೂ ನಡೆದಿರಬಹುದು ಅಲ್ಲವೇ? ಮುಖ್ಯಮಂತ್ರಿ ಕ್ಷಮೆಗೆ ಅರ್ಹರು ಎಂದು ಹೇಗೆ ಹೇಳುತ್ತೀರಿ? – ಸಂಪಾದಕರು)

ಸಂಪಾದಕೀಯ ನಿಲುವು

ಪ್ರಚೋದನಕಾರಿ ಹೇಳಿಕೆ ನೀಡುವ ಕಾಂಗ್ರೆಸ್ ಶಾಸಕ! ಇದರಿಂದ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ಏನಿದೆ ಎಂಬುದು ಬಹಿರಂಗವಾಗಿದೆ. ಇಂತಹವರನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು!