|

ಬೆಂಗಳೂರು – ‘ಆನ್ ಲೈನ್ ಮನಿ ಗೇಮಿಂಗ್’ ಕ್ಷೇತ್ರದಲ್ಲಿ ಭಾರತದಲ್ಲಿ ಕರ್ನಾಟಕದ ಪಾಲು ಬರೋಬ್ಬರಿ ಶೇ.30 ಇದೆ. ಕೇಂದ್ರ ಸರಕಾರವು ‘ಆನ್ ಲೈನ್ ಮನಿ ಗೇಮಿಂಗ್’ ಅನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ, ಈಗ ರಾಜ್ಯಕ್ಕೆ ‘ಕಾನೂನುಬದ್ಧ ಆದಾಯದ ಮೂಲ’ವನ್ನು ಕಳೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ತನ್ನದೇ ಆದ ಕಾನೂನನ್ನು ತರುವ ಯೋಚನೆಯಲ್ಲಿದೆ’ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ, ಕರ್ನಾಟಕ ಪೊಲೀಸರು ಆನ್ ಲೈನ್ ಜೂಜಿಗೆ ಸಂಬಂಧಿಸಿದ 1 ಸಾವಿರ 193 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಅವಧಿಯಲ್ಲಿ ಆನ್ ಲೈನ್ ಜೂಜಿನಿಂದ ಕನಿಷ್ಠ 32 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವಾರವಷ್ಟೇ ಲೋಕಸಭೆ ಮತ್ತು ರಾಜ್ಯಸಭೆಗಳು ‘ದಿ ಪ್ರಮೋಷನ್ ಅಂಡ್ ರೆಗ್ಯುಲೇಷನ್ ಆಫ್ ಆನ್ ಲೈನ್ ಗೇಮಿಂಗ್ ಬಿಲ್’ಗೆ ಒಪ್ಪಿಗೆ ನೀಡಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಅದಕ್ಕೆ ಒಪ್ಪಿಗೆ ನೀಡಿದ್ದರಿಂದ ಆನ್ ಲೈನ್ ಮನಿ ಗೇಮಿಂಗ್ ಗೆ ನಿಷೇಧ ಹೇರುವ ಕಾನೂನು ಜಾರಿಗೆ ಬಂದಿದೆ. ಈ ಕೇಂದ್ರ ಕಾನೂನಿನ ಪ್ರಕಾರ, ಎಲ್ಲಾ ರೀತಿಯ ಆನ್ ಲೈನ್ ಮನಿ ಗೇಮ್ಸ್‌ಗಳನ್ನು ನಿಷೇಧಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಗಳು
1. ‘ಆನ್ ಲೈನ್ ಗೇಮಿಂಗ್’ ರಾಜ್ಯದ ವಿಷಯವೋ ಅಥವಾ ಕೇಂದ್ರದ ವಿಷಯವೋ ಎಂಬುದರ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಆದರೂ ಕೇಂದ್ರ ಸರಕಾರ ಅವಸರದಲ್ಲಿ ಈ ಕಾನೂನನ್ನು ಮಾಡಿದೆ. (ಹೀಗೆ ಹೇಳುವ ಮೂಲಕ ಖರ್ಗೆ ಅವರು ಪ್ರಜಾಪ್ರಭುತ್ವವನ್ನು ಅವಮಾನಿಸುತ್ತಿದ್ದಾರೆ! – ಸಂಪಾದಕರು) ನಿಷೇಧವು ಪರಿಹಾರವಲ್ಲ. ನಾವು ಈ ಕುರಿತು ಮೌಲ್ಯಮಾಪನ ಮಾಡಿ ಗೃಹ ಇಲಾಖೆ ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ.
2. ಕರ್ನಾಟಕವು ‘ಗೇಮ್ಸ್ ಆಫ್ ಸ್ಕಿಲ್’ಗಳಿಗೆ ಪರವಾನಿಗೆ ನೀಡುವ ಕರಡನ್ನು ಸಿದ್ಧಪಡಿಸಿದೆ, ಇದರಲ್ಲಿ ಸಂಸ್ಥೆಗಳು ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (Know Your Customer) ಮತ್ತು ‘ಹಣ ವರ್ಗಾವಣೆ ತಡೆ’ (Anti-Money Laundering) ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದಾಗ್ಯೂ, ರಾಜ್ಯ ಸರಕಾರವು ‘ಗೇಮ್ಸ್ ಆಫ್ ಚಾನ್ಸ್’ ಅನ್ನು ನಿಷೇಧಿಸುವ ಪ್ರಸ್ತಾಪವನ್ನು ನೀಡಿದೆ.
3. ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಗೇಮಿಂಗ್ ಸಂಸ್ಥೆಗಳಿವೆ, ಇವು 2 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಪ್ರತಿಭಾವಂತ ಮಾನವ ಸಂಪನ್ಮೂಲಕ್ಕೆ ಇದು ತೊಂದರೆಯನ್ನುಂಟು ಮಾಡುತ್ತದೆ. (ಈ ವ್ಯವಹಾರದಲ್ಲಿ ಹಣ ಹೂಡಿದ ಕಾರಣ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಲ್ಲ, ಅದರ ಬಗ್ಗೆ ಏನು? ಹಣ ಗಳಿಸಲು ಅನೇಕ ಉತ್ತಮ ಮಾರ್ಗಗಳಿವೆ. ಈ ರೀತಿ ಹಣ ಗಳಿಸುವುದು ನೈತಿಕತೆಯನ್ನು ಹೊಂದಿದೆಯೇ ? – ಸಂಪಾದಕರು)
4. ಕಳೆದ ಕೆಲವು ವರ್ಷಗಳಲ್ಲಿ ಗೇಮಿಂಗ್ ಕ್ಷೇತ್ರದಲ್ಲಿ 23 ಸಾವಿರ ಕೋಟಿ ರೂಪಾಯಿಗಳ ನೇರ ವಿದೇಶಿ ಹೂಡಿಕೆ ಬಂದಿದೆ. ದೊಡ್ಡ ಡಿಜಿಟಲ್ ಜನಸಂಖ್ಯೆ ಇದ್ದರೂ ಸ್ಥಳೀಯ ಮಾರುಕಟ್ಟೆ ಇಲ್ಲದಿದ್ದರೆ, ಅನೇಕ ಜಾಗತಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಾರೆ.
ಸಂಪಾದಕೀಯ ನಿಲುವುಯಾವ ಜನತೆಯ ಹಿತಕ್ಕಾಗಿ ಆದಾಯವನ್ನು ಸಂಗ್ರಹಿಸಲಾಗುತ್ತದೆಯೋ, ಅದೇ ಜನತೆಯ ಜೀವದ ಜೊತೆ ಆಟವಾಡುವ ರಾಜ್ಯದ ಕಾಂಗ್ರೆಸ್ ಸರಕಾರ! ಯಾವ ರೀತಿ ‘ಆನ್ ಲೈನ್ ಮನಿ ಗೇಮಿಂಗ್’ಗೆ ಸಂಪೂರ್ಣ ನಿಷೇಧ ಹೇರಲಾಯಿತೋ, ಅದೇ ರೀತಿ ಈಗ ಜನತಾದ್ರೋಹಿ ಕಾಂಗ್ರೆಸ್ಸಿನ ಮೇಲೆ ನಿಷೇಧ ಹೇರಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!