ಕಂಪನಿಯ ಜಾಹೀರಾತುಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಖಾನ್ ವಿರುದ್ಧ ಕೂಡ ದೂರು!

ಜೈಪುರ (ರಾಜಸ್ಥಾನ) – ರಾಜಸ್ಥಾನದ ಓರ್ವ ವ್ಯಕ್ತಿಯು ‘ಹುಂಡೈ ಮೋಟಾರ್ಸ್’ ಕಂಪನಿಯ ಹಿರಿಯ ಅಧಿಕಾರಿಗಳು ಹಾಗೂ ಚಲನಚಿತ್ರ ನಟರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ವಂಚನೆಯ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೀರ್ತಿ ಸಿಂಗ್ ಅವರು ಈ ಇಬ್ಬರು ಕಲಾವಿದರು ಕಂಪನಿಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರ ಮೇಲೆ “ಗ್ರಾಹಕರನ್ನು ದಾರಿ ತಪ್ಪಿಸಿದ್ದಾರೆ” ಎಂದು ಆರೋಪಿಸಿ ದೂರು ನೀಡಿದ್ದರು. ತಾಂತ್ರಿಕವಾಗಿ ದೋಷಪೂರಿತ ಕಾರನ್ನು ಉದ್ದೇಶಪೂರ್ವಕವಾಗಿ ತಮಗೆ ಮಾರಾಟ ಮಾಡಲಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
ತಮ್ಮ ದೂರಿನಲ್ಲಿ ಸಿಂಗ್ ಅವರು ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ.
೧. ಜೂನ್ ೧೪, ೨೦೨೨ ರಂದು ಅವರು ರೂ. ೨೩,೯೭,೩೫೩ ನೀಡಿ ‘ಹುಂಡೈ ಅಲ್ಕಾಜರ್ ೧.೫’ ಕಾರನ್ನು ಖರೀದಿಸಿದ್ದರು. ದೋಷರಹಿತ ಕಾರು ನೀಡುವುದಾಗಿ ಮತ್ತು ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದು ಕಂಪನಿಯ ಜವಾಬ್ದಾರಿ ಎಂದು ಭರವಸೆ ನೀಡಿದ ನಂತರವೇ ಅವರು ಕಾರನ್ನು ಖರೀದಿಸಿದರು. ಆದರೆ, ಖರೀದಿಸಿದ ಕೂಡಲೇ ಕಾರಿನ ವೇಗವರ್ಧಕದಲ್ಲಿ ತಾಂತ್ರಿಕ ದೋಷಗಳು ಕಂಡುಬಂದವು.
೨. ಈ ಬಗ್ಗೆ ಪದೇ-ಪದೇ ದೂರು ನೀಡಿದರೂ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಅಂತಿಮವಾಗಿ, ಕಂಪನಿಯ ಪ್ರತಿನಿಧಿ ಇದು ‘ಉತ್ಪಾದನಾ ದೋಷ’ (ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್) ಎಂದು ಒಪ್ಪಿಕೊಂಡರು.
೩. ನಂತರ ಕಾರನ್ನು ಬದಲಾಯಿಸಿಕೊಡಲು ಅಥವಾ ಬಡ್ಡಿದರದೊಂದಿಗೆ ಖರೀದಿಸಿದ ಹಣವನ್ನು ಹಿಂದಿರುಗಿಸಲು ಕಂಪನಿ ನಿರಾಕರಿಸಿರುವುದು ವಂಚನೆ ಮತ್ತು ವಿಶ್ವಾಸದ್ರೋಹವಾಗಿದೆ.
೪. ಅವರು ಕಾರು ಖರೀದಿಸಲು ರೂ. ೧೦ ಲಕ್ಷಗಳ ಸಾಲ ಕೂಡ ಮಾಡಿದ್ದರು. ಈ ಘಟನೆಯಿಂದ ಅವರಿಗೆ ಮಾನಸಿಕ ಮತ್ತು ಆರ್ಥಿಕ ಹಾನಿಯಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!