ಕಿವಿ, ಕಣ್ಣು ಕತ್ತರಿಸಿ ಬರ್ಬರ ಹತ್ಯೆ

ಕುಶೀನಗರ (ಉತ್ತರ ಪ್ರದೇಶ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಶೀನಗರ ಜಿಲ್ಲಾ ಸಹ ಸಂಚಾಲಕರಾದ ಇಂದ್ರಜಿತ ಸಿಂಗ್ ಅವರ ಮಗ ಉತ್ಕರ್ಷ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಉತ್ಕರ್ಷ್ ಅವರು ‘ಅಖಿಲ ಭಾರತ ಗಹರ್ವಾರ್ ಕ್ಷತ್ರಿಯ ಮಹಾಸಭೆ’ಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಹಂತಕರು ಉತ್ಕರ್ಷ್ ಅವರನ್ನು ಬೆನ್ನಟ್ಟಿ ಕೋಲುಗಳು ಮತ್ತು ಕಬ್ಬಿಣದ ರಾಡ್‌ಗಳಿಂದ ಅಮಾನುಷವಾಗಿ ಥಳಿಸಿದರು. ಕಿವಿಯನ್ನು ಕತ್ತರಿಸಿ, ಕಣ್ಣುಗಳನ್ನು ಕಿತ್ತು ಹಾಕಿ ಉತ್ಕರ್ಷ್ ಅವರು ಸಾಯುವ ತನಕ ಥಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಕೂಗಾಟ ಕೇಳಿ ಉತ್ಕರ್ಷ್ ಅವರ ಕುಟುಂಬದವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಪೊಲೀಸರು ಸ್ಥಳಕ್ಕೆ ತಲುಪಿ ಮೂವರನ್ನು ವಶಕ್ಕೆ ಪಡೆದಿದ್ದಾರೆ, ಒಬ್ಬನು ಪರಾರಿಯಾಗಿದ್ದಾನೆ.
ಹತ್ಯೆಯ ಹಿಂದಿನ ಕಾರಣವಿದು!
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಘಟನೆ ಸೆಮರಾ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಜಾನುವಾರುಗಳು ಮೇಯಲು ಹೊಲಕ್ಕೆ ನುಗ್ಗಿದ್ದರಿಂದ ವಿವಾದ ಉಂಟಾಗಿತ್ತು. ಇಂದ್ರಜಿತ್ ಸಿಂಗ್ ಅವರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಜಾನುವಾರುಗಳು ಹೊಲಕ್ಕೆ ನುಗ್ಗಿರುವ ಬಗ್ಗೆ ಉತ್ಕರ್ಷ್ ನೊಂದಿಗೆ ಅವರ ನೆರೆಹೊರೆಯವರಾದ ಸಚ್ಚಿದಾನಂದ, ಶ್ರೀನಿವಾಸ, ದೇವೇಂದ್ರ ಮತ್ತು ಜ್ಞಾನ ಅವರೊಂದಿಗೆ ಜಗಳವಾಗಿತ್ತು. ಈ ಕಾರಣಕ್ಕೆ ಆ ನಾಲ್ವರು ತಮ್ಮ ಮಗನನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಇಂದ್ರಜಿತ್ ಸಿಂಗ್ ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವಿದ್ದರೂ ಗೂಂಡಾಗಳಿಗೆ ಕಾನೂನಿನ ಭಯ ಏಕಿಲ್ಲ? ಸರಕಾರ ಇಂತಹವರಿಗೆ ಬುದ್ಧಿ ಕಲಿಸಬೇಕು. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!