​ಪಥ್ರೋಟ್ (ಅಮರಾವತಿ ಜಿಲ್ಲೆ)ನಲ್ಲಿ ಮಹಾದೇವ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿನ ಹಣ ಕಳ್ಳತನ

ಪಥ್ರೋಟ್ – ಇಲ್ಲಿನ ಪುರಾತನ ಮಹಾದೇವ ಸಂಸ್ಥಾನ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯನ್ನು ರಾತ್ರಿ ೧೨ ಗಂಟೆಗೆ ಕಳ್ಳರು ಒಡೆದು ೫೦ ಸಾವಿರ ರೂಪಾಯಿ ಹಣವನ್ನು ಕದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಲ್ಲಿನ ಶ್ರೀ ಮಹಾದೇವ ದೇವಾಲಯವು ಬಹಳ ಪ್ರಸಿದ್ಧವಾಗಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಇತ್ತೀಚೆಗೆ ಶ್ರಾವಣ ಮಾಸ ಮುಗಿದಿದ್ದರಿಂದ ಕಾಣಿಕೆ ಹುಂಡಿಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗಿತ್ತು. ಕಳ್ಳರು ೫೦೦, ೨೦೦ ಮತ್ತು ೧೦೦ ರೂಪಾಯಿ ನೋಟುಗಳನ್ನು ತೆಗೆದುಕೊಂಡಿದ್ದಾರೆ, ಹಾಗೂ ೫೦, ೨೦, ೧೦, ೫ ರೂಪಾಯಿ ನೋಟುಗಳು ಮತ್ತು ನಾಣ್ಯಗಳನ್ನು ಹುಂಡಿಯಲ್ಲೇ ಬಿಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ದೂರು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ದೇವಾಲಯಗಳಲ್ಲಿ ಕಳ್ಳತನ ಮಾಡುವ ಕಳ್ಳರನ್ನು ತಕ್ಷಣವೇ ಹಿಡಿದು ಕಠಿಣ ಶಿಕ್ಷೆ ನೀಡದಿರುವುದರಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ!