ಬಾನು ಮುಷ್ತಾಕ್ ಅವರ ಆಯ್ಕೆಯ ಕುರಿತು ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ! – ಮೈಸೂರು ಜಿಲ್ಲಾಧಿಕಾರಿ Mysuru DC Banu Mustaq

ಮೈಸೂರು ದಸರಾವನ್ನು ಲೇಖಕಿ ಬಾನು ಮುಷ್ತಾಕ್ ನಿಂದ ಉದ್ಘಾಟಿಸಲು ನಿರ್ಧಾರ ವಿವಾದದ ಕುರಿತು

ಮೈಸೂರು – ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ಬಗ್ಗೆ ಯಾರಿಂದಲೂ ಯಾವುದೇ ವಿರೋಧ ಅಥವಾ ದೂರು ಬಂದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸರಕಾರವು ಲೇಖಕಿ ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ನಿರ್ಧರಿಸಿದೆ. ಇದರಿಂದ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉದ್ಘಾಟಕರು, ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಗಣ್ಯರನ್ನು ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಹ್ವಾನಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ರೆಡ್ಡಿ ಅವರು ಮಾತು ಮುಂದುವರೆಸಿ, ಮೈಸೂರು ದಸರಾ ಉತ್ಸವದ ಸಿದ್ಧತೆಗಳು ಎರಡು ತಿಂಗಳ ಮೊದಲೇ ಪ್ರಾರಂಭವಾಗಿವೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲು 19 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸ್ಲಿಮರು, ಕ್ರೈಸ್ತರು ಅಥವಾ ಕಮ್ಯುನಿಸ್ಟರ ವಿರುದ್ಧ ಏನಾದರೂ ಒಂದು ಸಣ್ಣ ಘಟನೆ ನಡೆದರೆ, ಆ ಸಮುದಾಯ ತಕ್ಷಣ ಸರ್ವೋಚ್ಚ ನ್ಯಾಯಾಲಯ ತಲುಪುತ್ತದೆ. ಆದರೆ, ಹಿಂದೂಗಳಲ್ಲಿ ‘ಇಕೋಸಿಸ್ಟಮ್’ (ವ್ಯವಸ್ಥೆ) ಕೊರತೆಯಿಂದ, ಸರ್ವೋಚ್ಚ ನ್ಯಾಯಾಲಯವಂತು ಬಿಡಿ, ಜಿಲ್ಲಾಧಿಕಾರಿಯವರೆಗೂ ನಾವು ತಲುಪುವುದಿಲ್ಲ. ಈ ಪರಿಸ್ಥಿತಿಯು ಖಂಡಿತವಾಗಿಯೂ ಹಿಂದೂಗಳಿಗೆ ಹಾನಿಕಾರಕವಾಗಿರುವುದು, ಇದು ನಿಶ್ಚಿತವಾಗಿದೆ !