ಕ್ಯಾನ್ಸರ್ ತಜ್ಞ ಮತ್ತು ‘ಆಸ್ತಾ ಕ್ಯಾನ್ಸರ್ ಸಂಸ್ಥೆ’ಯ ನಿರ್ದೇಶಕ ಡಾ. ತರಂಗ ಕೃಷ್ಣ ಅವರ ಮನವಿ

ಮುಂಬಯಿ – ಅಡುಗೆಮನೆಯಲ್ಲಿರುವ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಟೊಮ್ಯಾಟೊ, ನಿಂಬೆಹಣ್ಣು ಮತ್ತು ಹುಣಸೆಹಣ್ಣಿನಂತಹ ಆಮ್ಲೀಯ ಆಹಾರ ಪದಾರ್ಥಗಳನ್ನು ಬೇಯಿಸುವುದರಿಂದ ಅಲ್ಯೂಮಿನಿಯಂ ಪಾತ್ರೆಯ ಅಂಶಗಳು ಕರಗುತ್ತವೆ.
ಹೆಚ್ಚಿನ ಸಮಯದವರೆಗೆ ನಿರಂತರವಾಗಿ ಅಲ್ಯೂಮಿನಿಯಂ ಅನ್ನು ಉಪಯೋಗಿಸುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ರೋಗಗಳು ಬರಬಹುದು. ಆದ್ದರಿಂದ ಅಲ್ಯೂಮಿನಿಯಂ ಬಳಸುವುದನ್ನು ತಪ್ಪಿಸಿ, ಎಂದು ಕ್ಯಾನ್ಸರ್ ತಜ್ಞ ಹಾಗೂ ‘ಆಸ್ತಾ ಕ್ಯಾನ್ಸರ್ ಸಂಸ್ಥೆ’ಯ ನಿರ್ದೇಶಕ ಡಾ. ತರಂಗ್ ಕೃಷ್ಣ ಅವರು ಒಂದು ಸಂದರ್ಶನದಲ್ಲಿ ಮನವಿ ಮಾಡಿದ್ದಾರೆ. ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳಿಂದ ಕ್ಯಾನ್ಸರ್‌ನ ಅಪಾಯವು ದ್ವಿಗುಣಗೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟೆಫ್ಲಾನ್ ಲೇಪನದ ನಾನ್-ಸ್ಟಿಕ್ ಪಾತ್ರೆಗಳನ್ನು ಉಪಯೋಗಿಸಬೇಡಿ!

ಡಾ. ತರಂಗ್ ಕೃಷ್ಣ ಅವರು ನೀಡಿದ ಮಾಹಿತಿಯ ಪ್ರಕಾರ ಟೆಫ್ಲಾನ್ ಲೇಪನದ ನಾನ್-ಸ್ಟಿಕ್ ಪಾತ್ರೆಗಳನ್ನೂ ಉಪಯೋಗಿಸಬಾರದು; ಏಕೆಂದರೆ ಅದರಲ್ಲಿ ಹೆಚ್ಚು ಉಷ್ಣತೆಯಲ್ಲಿ ಅಡುಗೆ ಮಾಡಿದರೆ ಹಾನಿಕಾರಕ ಅನಿಲಗಳು ಹೊರಬರಬಹುದು. ಇದರಿಂದ ಟೆಫ್ಲಾನ್ ಕೂಡ ಹಾಳಾಗುತ್ತದೆ, ಹಾಗೂ ಅನೇಕ ಅಪಾಯಕಾರಿ ರೋಗಗಳು ಬರಬಹುದು.
ಸ್ಟೀಲ್ ನಾರಿನಿಂದ ನಾನ್-ಸ್ಟಿಕ್ ಪಾತ್ರೆಗಳನ್ನು ತೊಳೆಯಬೇಡಿ!
ಒಂದು ವೇಳೆ ನೀವು ನಾನ್-ಸ್ಟಿಕ್ ಪಾತ್ರೆಗಳನ್ನು ಸ್ಟೀಲ್ ನಾರಿನಿಂದ ತಳೆದರೆ, ರಾಸಾಯನಿಕಗಳು ಹೊರಬರಲು ಪ್ರಾರಂಭಿಸುತ್ತವೆ. ನೀವು ಅದರಲ್ಲಿ ಮತ್ತೆ ಆಹಾರವನ್ನು ಬೇಯಿಸಿದಾಗ, ನೀವು ವಿಷವನ್ನು ತಯಾರಿಸುತ್ತೀರಿ, ಆ ವಿಷವು ನಿಮ್ಮ ಆಹಾರದಲ್ಲಿ ಸೇರಿಕೊಳ್ಳುತ್ತದೆ.
ಪ್ಲಾಸ್ಟಿಕ್ ಪಾತ್ರೆಗಳಿಂದ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ!
ಪ್ಲಾಸ್ಟಿಕ್ ಪಾತ್ರೆಗಳಿಂದ ಕ್ಯಾನ್ಸರ್‌ನಂತಹ ಗಂಭೀರ ರೋಗಗಳ ಅಪಾಯವು ಹೆಚ್ಚುತ್ತದೆ; ಏಕೆಂದರೆ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದಾಗ ಅಥವಾ ಉಪಯೋಗಿಸಿದಾಗ ಅದರಿಂದ ‘ಬಿಪಿಎ’ಯಂತಹ ಅಪಾಯಕಾರಿ ರಾಸಾಯನಿಕಗಳು ಹೊರಬರುತ್ತವೆ. ಈ ರಾಸಾಯನಿಕಗಳು ನಿಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಅಡುಗೆಗೆ ಯಾವಾಗಲೂ ಹಿತ್ತಾಳೆ ಮತ್ತು ಕಬ್ಬಿಣದ ಪಾತ್ರೆಗಳನ್ನು ಉಪಯೋಗಿಸಿ!
ಅಡುಗೆ ಮಾಡಲು ಯಾವಾಗಲೂ ಹಿತ್ತಾಳೆ ಮತ್ತು ಕಬ್ಬಿಣದ ಪಾತ್ರೆಗಳನ್ನು ಉಪಯೋಗಿಸುವಂತೆ ಡಾ. ತರಂಗ್ ಕೃಷ್ಣ ಅವರು ಸಲಹೆ ನೀಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!