ಈ ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನೌಷಾದ್ ಆಯೋಜಿಸಿದ್ದರು!

ದರಭಂಗಾ (ಬಿಹಾರ) – ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರ ‘ಮತದಾನದ ಹಕ್ಕು ಯಾತ್ರೆ’ಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಾಯಿಯ ಬಗ್ಗೆ ನಿಂದಿಸಲಾಯಿತು. ಈ ಯಾತ್ರೆಯ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ, ರಾಹುಲ್ ಗಾಂಧಿಯವರ ಬೆಂಬಲಿಗರು ಪ್ರಧಾನಿ ಮೋದಿಯವರನ್ನು ತಾಯಿಯ ಹೆಸರಿನಲ್ಲಿ ನಿಂದಿಸುವುದು ಕಂಡುಬಂದಿದೆ. ಈ ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನೌಷಾದ್ ಆಯೋಜಿಸಿದ್ದರು.
ಈ ಘಟನೆಗೆ ಪ್ರತಿಕ್ರಿಯಿಸಿದ ರಾಜ್ಯದ ಭಾಜಪ-ಜನತಾ ದಳ (ಸಂಯುಕ್ತ) ಮೈತ್ರಿ ಸರಕಾರದ ಉಪಮುಖ್ಯಮಂತ್ರಿ ಮತ್ತು ಭಾಜಪ ನಾಯಕ ವಿಜಯ ಸಿನ್ಹಾ ಅವರು, ರಾಹುಲ ಗಾಂಧಿಯವರ ವೇದಿಕೆಯಿಂದ ಪ್ರಧಾನಿ ಮೋದಿಯವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಲಾಗಿದೆ. ಈ ರೀತಿಯ ಭಾಷೆಯನ್ನು ಸಹಿಸಲಾಗುವುದಿಲ್ಲ. ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳವು ಬಿಹಾರದ ವಾತಾವರಣವನ್ನು ಹಾಳು ಮಾಡಲು ಬಯಸಿದೆ. ಪ್ರಧಾನಿಯವರನ್ನು ನಿಂದಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತೇಜಸ್ವಿ ಯಾದವ ಮತ್ತು ರಾಹುಲ ಗಾಂಧಿ ಈ ನಿಂದನೆಗಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇದು ಕಾಂಗ್ರೆಸ್‌ನ ವಿಕೃತಿಯಾಗಿದೆ. ಬಿಹಾರದಲ್ಲಿ ಭಾಜಪ ಅಧಿಕಾರದಲ್ಲಿರುವುದರಿಂದ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು; ಇದರಿಂದ ಮುಂದೆ ಇಂತಹ ನಿಂದನೆ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!