ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಬದಲು ಕುಂಬಾರರಿಗೆ ಹಿಂದಿರುಗಿಸಲು ಸಾತಾರಾ ಜಿಲ್ಲಾಡಳಿತದ ಹಿಂದೂ ವಿರೋಧಿ ಕರೆ! Anti Hindu Statement

ಸಾತಾರಾ(ಮಹಾರಾಷ್ಟ್ರ), ಆಗಸ್ಟ್ 26 (ಸುದ್ದಿ) – ಸಾತಾರಾ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಹೆಸರಿನಲ್ಲಿ ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಮುರಿಯಲು ಜಿಲ್ಲಾಡಳಿತದ ವತಿಯಿಂದ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ನದಿ, ಕೆರೆ, ಬಾವಿಗಳಂತಹ ಸಾರ್ವಜನಿಕ ಜಲಮೂಲಗಳ ಮಾಲಿನ್ಯ ತಡೆಯಲು ಗಣೇಶ ಭಕ್ತರಿಗೆ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಬದಲು ಅವುಗಳನ್ನು ಕುಂಬಾರರಿಗೆ ಹಿಂದಿರುಗಿಸುವ ವಿಚಿತ್ರ ಕರೆಯನ್ನು ಸಾತಾರಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶನಿ ನಾಗರಾಜನ್ ಅವರು ನೀಡಿದ್ದಾರೆ.

ನಾಗರಾಜನ್ ಅವರು ಮಾತನಾಡಿ, “ಒಂದು ಗ್ರಾಮ, ಒಂದು ಗಣಪತಿ” ಎಂಬ ಪರಿಕಲ್ಪನೆಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಜಾಗೃತಿ ಮೂಡಿಸಲಾಗುವುದು. ಅಲ್ಲದೆ, ಸಾರ್ವಜನಿಕ ಮೂರ್ತಿಗಳನ್ನು ವಿಸರ್ಜನೆ ಮಾಡದೇ ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸಲು ಯುವಕ ಮಂಡಳಿಗಳು ಮುಂದಾಗಬೇಕು. ಮನೆಗಳಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಲೋಹದ, ಮಣ್ಣಿನ, ಅಮೃತಶಿಲೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜನಜಾಗೃತಿ ಮೂಡಿಸಲಾಗುವುದು. ಜೊತೆಗೆ, ಜಿಲ್ಲಾಡಳಿತದ ವತಿಯಿಂದ ಅಲ್ಲಲ್ಲಿ ಮೂರ್ತಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮನೆಗಳಲ್ಲಿನ ಶ್ರೀ ಗಣೇಶ ಮೂರ್ತಿಗಳನ್ನು ಸಾಧ್ಯವಾದಷ್ಟು ಮನೆಯಲ್ಲಿಯೇ ವಿಸರ್ಜಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಹತ್ತಿರದ ಕೃತಕ ಕೆರೆ ಅಥವಾ ಹೊಂಡಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು” ಎಂದರು.

ಶ್ರೀ ಗಣೇಶ ಮೂರ್ತಿಗಳನ್ನು ಗಣಿಗಳಲ್ಲಿ ಹಾಕುವ ಸಂಭಾವ್ಯ ಯೋಜನೆ

ಜಿಲ್ಲಾಡಳಿತದ ವತಿಯಿಂದ ಸಂಗ್ರಹಿಸಿದ ಶ್ರೀ ಗಣೇಶ ಮೂರ್ತಿಗಳನ್ನು ಜಿಲ್ಲೆಯ ಗಣಿಗಳಲ್ಲಿ ಹಾಕುವ ಧರ್ಮ ವಿರೋಧಿ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಸಾತಾರಾ ಜಿಲ್ಲಾಡಳಿತವು ಕೊಲ್ಹಾಪುರ ಜಿಲ್ಲಾಡಳಿತದಿಂದ ಗಣೇಶೋತ್ಸವಕ್ಕಾಗಿ ಜಾರಿಗೆ ತಂದ ವಿವಿಧ ಯೋಜನೆಗಳ ಅಧ್ಯಯನ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

  • ಇಂತಹ ಧರ್ಮ ವಿರೋಧಿ ಕರೆಯನ್ನು ಬೇರೆ ಧರ್ಮಗಳ ವಿಷಯದಲ್ಲಿ ಮಾಡಲು ಸಾತಾರಾ ಜಿಲ್ಲಾಡಳಿತ ಧೈರ್ಯ ಮಾಡುತ್ತಿತ್ತೇ?
  • ಹಿಂದೂಗಳೇ, ಯಾರೇ ಏನೇ ಕರೆ ಕೊಟ್ಟರೂ, ಧರ್ಮಶಾಸ್ತ್ರದ ಪ್ರಕಾರ ಶ್ರೀ ಗಣೇಶ ಮೂರ್ತಿಗಳನ್ನು ಹರಿಯುವ ನೀರಿನಲ್ಲಿಯೇ ವಿಸರ್ಜನೆ ಮಾಡುವುದು ಸರಿಯಾದ ಕ್ರಮವಾಗಿದೆ!