ಕೊಲ್ಹಾಪುರದ ಜೈನ ದೇವಸ್ಥಾನದಲ್ಲಿನ ಮಹಾದೇವಿ ಆನೆ ಸ್ಥಳಾಂತರ ಪ್ರಕರಣ

ನವದೆಹಲಿ – ಗುಜರಾತ್‌ನ ಜಾಮನಗರದಲ್ಲಿರುವ ರಿಲಯನ್ಸ್ ಫೌಂಡೇಶನ್‌ನಿಂದ ನಡೆಸಲಾಗುತ್ತಿರುವ ‘ವನತಾರಾ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ’ದ ವಿರುದ್ಧದ ಆರೋಪಗಳ ತನಿಖೆ ನಡೆಸಲು ಆಗಸ್ಟ್ 25 ರಂದು ಸರ್ವೋಚ್ಚ ನ್ಯಾಯಾಲಯವು ವಿಶೇಷ ತನಿಖಾ ತಂಡ (ಎಸ್‌ಐಟಿ) ವನ್ನು ರಚಿಸಿತು. ಕೋಲ್ಹಾಪುರದ ಜೈನ ದೇವಸ್ಥಾನದಲ್ಲಿದ್ದ ಮಹಾದೇವಿ ಎಂಬ ಆನೆಯ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪಿ.ಬಿ. ವರಾಳೆ ಅವರ ಪೀಠವು, ‘ಎಸ್‌ಐಟಿ ಕೇವಲ ಸತ್ಯಾಂಶಗಳನ್ನು ಕಂಡುಹಿಡಿಯಲು ರಚಿಸಲಾಗಿದೆ ಮತ್ತು ಅದರ ರಚನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಮಾಡಲಾದ ಆರೋಪಗಳಿಗೆ ಮಾನ್ಯತೆಯನ್ನು ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ. ಸರ್ವೋಚ್ಚ ನ್ಯಾಯಾಲಯ ‘ಎಸ್‌ಐಟಿ’ ಗೆ ಸಪ್ಟೆಂಬರ್ 12, 2025 ರೊಳಗೆ ತನ್ನ ವರದಿಯನ್ನು ಸಲ್ಲಿಸಲು ಸೂಚಿಸಿದೆ. ಅಲ್ಲದೆ, ಸಪ್ಟೆಂಬರ್ 15 ರಂದು ಪ್ರಕರಣವನ್ನು ಮರು ಪರಿಶೀಲನೆಗಾಗಿ ಪಟ್ಟಿ ಮಾಡಲಾಗಿದೆ. ಗುಜರಾತ್ ಸರಕಾರಕ್ಕೆ ‘ಎಸ್‌ಐಟಿ’ಗೆ ಸಂಪೂರ್ಣ ಸಹಕಾರ ನೀಡಲು ತಿಳಿಸಲಾಗಿದೆ.
36 ವರ್ಷ ವಯಸ್ಸಿನ ಮಹಾದೇವಿ ಎಂಬ ಆನೆಯು ಈ ಹಿಂದೆ ಕೋಲ್ಹಾಪುರದ ಜೈನ ದೇವಸ್ಥಾನದಲ್ಲಿತ್ತು. ಆದರೆ, ನಂತರ ಅದರ ಆರೋಗ್ಯ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ, ಅದನ್ನು ಗುಜರಾತ್‌ನಲ್ಲಿರುವ ವನತಾರಾ ಕೇಂದ್ರಕ್ಕೆ ಸ್ಥಳಾಂತರಿಸಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!