ಕೇರಳದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆ

  • ಸಮಾಲೋಚನೆಯ (ಕೌನ್ಸಿಲಿಂಗ್) ಸಮಯದಲ್ಲಿ ನ್ಯಾಯಾಧೀಶರಿಂದ ಅಶ್ಲೀಲ ಟಿಪ್ಪಣಿ ಮತ್ತು ದುರ್ವರ್ತನೆಯ ಆರೋಪ

  • ವಿಚಾರಣೆ ಕೂಡ ಆರಂಭ !

ತಿರುವನಂತಪುರಂ (ಕೇರಳ) – ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಉದಯಕುಮಾರ್ ವಿ. ಅವರನ್ನು ಕೊಲ್ಲಂನ ಮೋಟಾರು ಅಪಘಾತಗಳ ಹಕ್ಕುಗಳ ನ್ಯಾಯಮಂಡಳಿಗೆ ಕೇರಳ ಉಚ್ಚ ನ್ಯಾಯಾಲಯ ವರ್ಗಾಯಿಸಿದೆ. ಅವರ ಮೇಲೆ ಸಮಾಲೋಚನೆಯ (ಕೌನ್ಸಿಲಿಂಗ್) ಸಮಯದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವುದು ಮತ್ತು ಅಶ್ಲೀಲ ಟಿಪ್ಪಣಿಗಳನ್ನು ಮಾಡಿರುವ ಆರೋಪವಿದೆ.

ಈ ಕುರಿತು ಸಂತ್ರಸ್ತ ಮಹಿಳೆಯು ಕೊಲ್ಲಂನ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಲಿಖಿತ ದೂರು ನೀಡಿದ್ದರು. ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ಉಚ್ಚ ನ್ಯಾಯಾಲಯವು ಉದಯಕುಮಾರ್ ವಿರುದ್ಧ ತನಿಖೆಗೆ ಆದೇಶಿಸಿದೆ. ಕೇರಳ ಉಚ್ಚ ನ್ಯಾಯಾಲಯದ ಆಡಳಿತ ಸಮಿತಿಯು ಈ ತನಿಖೆಯ ಜವಾಬ್ದಾರಿಯನ್ನು ಜಿಲ್ಲಾ ನ್ಯಾಯಾಂಗದ ನೋಂದಣಿ ಅಧಿಕಾರಿಗೆ ವಹಿಸಿದೆ. ಅವರ ವರದಿಯನ್ನು ಸಮಿತಿಗೆ ಸಲ್ಲಿಸಲಾಗಿದ್ದು, ಮುಂದಿನ ವಾರ ಅದರ ಮೇಲೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು.