ಇಸ್ಲಾಮಿಕ್ ದೇಶವಾದ ಇಂಡೋನೇಷಿಯಾದಲ್ಲಿ ಧ್ವನಿವರ್ಧಕಗಳ ಶಬ್ದಕ್ಕೆ ಕಡಿವಾಣ

ಜಕಾರ್ತಾ (ಇಂಡೋನೇಷ್ಯಾ) – ಇಂಡೋನೇಷಿಯಾದಲ್ಲಿ ಮದುವೆ ಸಮಾರಂಭ, ಹಬ್ಬ ಅಥವಾ ಔತಣಕೂಟಗಳಲ್ಲಿ ದೊಡ್ಡ ಧ್ವನಿಯ ಸ್ಪೀಕರ್‌ಗಳು, ಧ್ವನಿವರ್ಧಕಗಳು ಮತ್ತು ಡಿಜೆ (ದೊಡ್ಡ ಧ್ವನಿವರ್ಧಕ ವ್ಯವಸ್ಥೆ) ಬಳಸೋದು ಸಾಮಾನ್ಯವಾಗಿದೆ. ಅವುಗಳ ಶಬ್ದ ಎಷ್ಟು ಜೋರಾಗಿರುತ್ತದೆ ಅಂದರೆ ಕಿಟಕಿಯ ಗಾಜುಗಳು ಒಡೆದು ಹೋಗುತ್ತವೆ, ಗೋಡೆಗಳಲ್ಲಿ ಬಿರುಕು ಬಿಡುತ್ತವೆ ಮತ್ತು ವಸ್ತುಗಳು ನಡುಗಲು ಶುರು ಮಾಡುತ್ತವೆ. ಈ ಕಾರಣಕ್ಕೆ, ಆಡಳಿತವು ಅವುಗಳ ಶಬ್ದದ ಮೇಲೆ ಮಿತಿಗಳನ್ನು ಹೇರಿದೆ. ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ ಸ್ಪೀಕರ್‌ಗಳು, ಧ್ವನಿವರ್ಧಕಗಳನ್ನು ಬಳಸಬಹುದು ಎಂಬ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪೂರ್ವ ಜಾವಾ ಪ್ರಾಂತ್ಯದ ರಾಜ್ಯಪಾಲರು, ಈ ನಿಯಮವು ಜನರ ಆರೋಗ್ಯ ಮತ್ತು ಸುರಕ್ಷತೆಗಾಗಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಶಾಂತಿಯನ್ನು ಕಾಪಾಡಿಕೊಳ್ಳಲು ಶಬ್ದ ನಿಯಂತ್ರಣ ಅಗತ್ಯವಾಗಿದೆ.

ಜುಲೈ ತಿಂಗಳಲ್ಲಿ, ಸ್ಥಳೀಯ ಇಸ್ಲಾಮಿಕ್ ಕೌನ್ಸಿಲ್ ಒಂದು ಫತ್ವಾ (ಇಸ್ಲಾಮಿಕ್ ಕಾನೂನಿನ ಪ್ರಕಾರ, ಒಂದು ವಿಷಯದ ಬಗ್ಗೆ ಇಸ್ಲಾಂನಲ್ಲಿ ಮಾನ್ಯತೆ ಪಡೆದ ವ್ಯಕ್ತಿ ಅಥವಾ ಸಂಸ್ಥೆ ನೀಡಿದ ತೀರ್ಪು) ಹೊರಡಿಸಿತ್ತು. ಮದುವೆ, ಮೆರವಣಿಗೆ ಅಥವಾ ಯಾವುದೇ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಜೋರಾಗಿ ನುಡಿಸಿದರೆ, ಜನರಿಗೆ ತೊಂದರೆಯಾದರೆ, ಪೂಜೆಗೆ ಅಡ್ಡಿಯಾದರೆ ಅಥವಾ ರಸ್ತೆಯಲ್ಲಿ ಗದ್ದಲವಾದರೆ ಅದು ‘ಹರಾಮ್’ (ಇಸ್ಲಾಂ ವಿರೋಧಿ) ಎಂದು ಪರಿಗಣಿಸಲಾಗುವುದು ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿದೆ.

ಧ್ವನಿವರ್ಧಕಗಳ ಮೇಲಿನ ಮಿತಿಗಳು

1. (ಬೊಂಗಾ) ಧ್ವನಿವರ್ಧಕಗಳ ಶಬ್ದ 120 ಡೆಸಿಬಲ್‌ಗಿಂತ ಹೆಚ್ಚಿರಬಾರದು

2. ಮೆರವಣಿಗೆ ಅಥವಾ ಆಂದೋಲನಗಳಲ್ಲಿ ಶಬ್ದದ ಮಿತಿ 85 ಡೆಸಿಬಲ್ ಇರಬೇಕು.

3. ಶಾಲೆಗಳು, ಆಸ್ಪತ್ರೆಗಳು ಮತ್ತು ಪೂಜಾ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಪೂರ್ಣ ನಿಷೇಧವಿದೆ