|

ಹಳಿಯಾಳ: ಸುಮಾರು 800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳದ ವಿರುದ್ಧ ಸಂಚು, ಸುಳ್ಳು ಪ್ರಚಾರ ಹಾಗೂ ದುರುದ್ದೇಶಿತ ವರದಿಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ ವ್ಯಕ್ತ ಪಡಿಸಿದೆ. ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಸರ್ಕಾರ ತನಿಖಾದಳ ರಚಿಸಿ ಕಾರ್ಯಾಚರಣೆ ನಡೆಸಿದರು ಸತ್ಯ ಹೊರಬಂದಿಲ್ಲ.ಕೆಲವು ಯೂಟ್ಯೂಬರಗಳು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಧರ್ಮಸ್ಥಳದ ಬಗ್ಗೆ ಸುಳ್ಳು ಹಾಗೂ ದುರುದ್ದೇಶಿತ ವರದಿಗಳನ್ನು ಪ್ರಸಾರ ಮಾಡಿರುವುದು ಹಿಂದೂ ಸಮಾಜದ ಭಾವನೆಗಳಿಗೆ ತೀವ್ರ ಅವಮಾನವಾಗಿದೆ ,ಸುಳ್ಳು ಪ್ರಚಾರ ಹಾಗು ಧರ್ಮಸ್ಥಳದ ತೇಜೋವಧೆ ಮಾಡಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹಳಿಯಾಳ ತಾಲ್ಲೂಕಿನ ಸಮಸ್ತ ಭಕ್ತವೃಂದ ಹಾಗೂ ಸಮಿತಿಯು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ನಗರದ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್, ಶಿವಾಜಿ ಸರ್ಕಲ್ ಮೂಲಕ ಸಾಗಿತು.
ಮೆರವಣಿಗೆಯಲ್ಲಿ 1000 ಕ್ಕಿಂತ ಹೆಚ್ಚು ಭಕ್ತಾದಿಗಳು, ಹಿಂದುತ್ವನಿಷ್ಟರು ತಪಿಸ್ಥರ ವಿರುದ್ಧ. ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವೈಶಿಷ್ಠ್ಯಪೂರ್ಣ ಅಂಶಗಳು:
1.ತಹಶೀಲ್ದಾರ್ ಅವರಿಗೆ ಮನವಿ ಕೊಡುವಾಗ ಸ್ವತಃ CPI ಮುಂದೆ ಬಂದು ಮನವಿ ಕೊಡುವುದರಲ್ಲಿ ಸಹಭಾಗಿಯಾದರು.
2.ಉಪಸ್ಥಿತಿ ಸಂಖ್ಯೆ ಕಂಡು ತಹಶೀಲ್ದಾರರು ಕೌತುಕ ವ್ಯಕ್ತ ಪಡಿಸಿದರು.
3.ಭಾಗಿಯಾದವರ ಎಲ್ಲರಲ್ಲಿ ಜಾಗೃತ ಮೂಡಿತ್ತು ಮತ್ತು ಸಂಘಟನೆಯಲ್ಲಿ ಬಲವಿದೆ ಎನ್ನುವುದು ಗಮನಕ್ಕೆ ಬಂದಿತು .
4.ಸುಮಾರು 1000 ಜನರ ಉಪಸ್ಥಿತಿ ಇತ್ತು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ