|
(ಜಾರ್ಜ್ ಸೊರೊಸ್ ಭಾರತ ವಿರೋಧಿ ಕಥೆಗಳನ್ನು ರಚಿಸಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುವ ಒಬ್ಬ ಅಮೇರಿಕನ್ ಉದ್ಯಮಿ.)

ನವದೆಹಲಿ: ಭಾರತ ವಿರೋಧಿ ಜಾರ್ಜ್ ಸೊರೊಸ್ ಅವರೊಂದಿಗೆ ಸೇರಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಆದಾಗ್ಯೂ, ವಿರೋಧ ಪಕ್ಷಗಳ ಪಿತೂರಿಗಳನ್ನು ಲೆಕ್ಕಿಸದೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಕೇಂದ್ರ ಸಚಿವ ಕಿರೇನ್ ರಿಜಿಜೂ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಮೇಲೂ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ‘ಅತ್ಯಂತ ಅಪಾಯಕಾರಿ ಹಾದಿ’ಯಲ್ಲಿದ್ದಾರೆ ಎಂದು ರಿಜಿಜೂ ಹೇಳಿದರು.
ಕೇಂದ್ರ ಸಚಿವ ರಿಜಿಜೂ ಮಾಡಿರುವ ಆರೋಪಗಳು!
೧. ಭಾರತ ಸರಕಾರವನ್ನು ಅಸ್ಥಿರಗೊಳಿಸಲು ಒಂದು ಟ್ರಿಲಿಯನ್ ಡಾಲರ್‌ಗಳನ್ನು (₹ 131 ಲಕ್ಷ ಕೋಟಿ) ಮೀಸಲಿಟ್ಟಿರುವುದಾಗಿ ಜಾರ್ಜ್ ಸೊರೊಸ್ ಹೇಳಿದ್ದಾರೆ.
೨. ಕೆನಡಾ, ಅಮೇರಿಕಾ ಮತ್ತು ಬ್ರಿಟನ್‌ನಲ್ಲಿ ನೆಲೆಸಿರುವ ಭಾರತ ವಿರೋಧಿ ಖಲಿಸ್ತಾನಿ ಶಕ್ತಿಗಳು ಮತ್ತು ಅನೇಕ ಕಮ್ಯುನಿಸ್ಟ್ ಸಂಘಟನೆಗಳು ದೇಶದ ವಿರುದ್ಧ ಪಿತೂರಿ ನಡೆಸುತ್ತಿವೆ.
೩. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಈ ಎಲ್ಲಾ ಅಂತರರಾಷ್ಟ್ರೀಯ ಶಕ್ತಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದು ಬಹಳ ಆತಂಕಕಾರಿ ಸಂಗತಿ.
೪. ಕಾಂಗ್ರೆಸ್ ಚುನಾವಣೆಗಳಲ್ಲಿ ಸೋತಾಗ, ಅದು ಭಾರತ ವಿರೋಧಿ ಗುಂಪುಗಳೊಂದಿಗೆ ಸೇರಿ ಕೆಲಸ ಮಾಡುತ್ತದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮತ್ತು ಇತರ ಭಾರತ ವಿರೋಧಿ ಶಕ್ತಿಗಳು ಸರಕಾರ ಮತ್ತು ಸರಕಾರಿ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡುತ್ತವೆ. ಇದರಿಂದ ದೇಶದ ಸಂಸ್ಥೆಗಳ ಮೇಲೆ ಜನರ ವಿಶ್ವಾಸ ಕಳೆದುಹೋಗುತ್ತದೆ. ನ್ಯಾಯಾಂಗ ಮತ್ತು ಚುನಾವಣಾ ಆಯೋಗಗಳು ಮಾರಾಟವಾಗಿವೆ ಎಂದು ಕಾಂಗ್ರೆಸ್ ಪದೇ-ಪದೇ ಹೇಳುತ್ತಿದೆ. ಈ ಎರಡೂ ಸಂಸ್ಥೆಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುತ್ತಿದೆ.
ರಾಹುಲ್ ಗಾಂಧಿಯವರ ‘ನಿರರ್ಥಕ’ ಮಾತುಗಳಿಂದ ಕಾಂಗ್ರೆಸ್‌ನ ಎಲ್ಲ ನಾಯಕರು ಅಸಮಾಧಾನಗೊಂಡಿದ್ದಾರೆ! – ರಿಜಿಜೂರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಸದಸ್ಯರ ಮಾತನ್ನೂ ಕೇಳುವುದಿಲ್ಲ ಎಂದು ರಿಜಿಜೂ ಹೇಳಿದರು. ರಾಹುಲ್ ಅವರು ಏನಾದರೂ ಮಾತನಾಡಿದಾಗ, ಅವರ ಸಂಸದರು ಆತಂಕಗೊಳ್ಳುತ್ತಾರೆ. ಅವರು ಅರ್ಥಹೀನವಾಗಿ ಮಾತನಾಡುತ್ತಾರೆ ಮತ್ತು ಪಕ್ಷಕ್ಕೆ ಹಾನಿಯಾಗಬಹುದು ಎಂಬ ಭಯ ಕಾಂಗ್ರೆಸ್ ಸಂಸದರಿಗಿದೆ. (ರಿಜಿಜೂ ಅವರ ಈ ಆರೋಪಗಳು ನಿಜವಾಗಿದ್ದರೆ, ಅದು ಕಾಂಗ್ರೆಸ್‌ಗೆ ನಾಚಿಕೆಗೇಡಿನ ವಿಷಯ. ಹೇಗೆ ಮಾತನಾಡಬೇಕೆಂದು ತಿಳಿಯದ ವ್ಯಕ್ತಿಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಇದರ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆಯೇ ಎಂದು ಈಗಲಾದರೂ ತನಿಖೆ ಮಾಡಬೇಕು! ಇಲ್ಲದಿದ್ದರೆ, ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾದರೆ, ಅವರ ಸೂತ್ರಧಾರಿಗಳು ಹೇಳಿದಂತೆ ರಾಹುಲ್ ನಡೆದುಕೊಳ್ಳುತ್ತಾರೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡುತ್ತಾರೆ! – ಸಂಪಾದಕರು). |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !