ಭಾರತದಲ್ಲಿ ‘ಗಾಜಾ ಬಿಕ್ಕಟ್ಟಿ’ನ ಹೆಸರಿನಲ್ಲಿ ಸಿರಿಯಾದ 4 ನಾಗರಿಕರಿಂದ ಲಕ್ಷಾಂತರ ರೂಪಾಯಿ ಲೂಟಿ ! Syrian Gang Arrested

  • ಮಸೀದಿಗಳಿಂದ ನಿಧಿ ಸಂಗ್ರಹಣೆ ಮಾಡುತ್ತಿದ್ದರು

  • ಗುಜರಾತನಿಂದ ಒಬ್ಬನ ಬಂಧನ

ಕರ್ಣಾವತಿ (ಗುಜರಾತ) – ಸಿರಿಯಾದ ನಾಲ್ಕು ನಾಗರಿಕರು ಗಾಜಾದ ಸಂತ್ರಸ್ತರ ಹೆಸರಿನಲ್ಲಿ ಇಲ್ಲಿನ ಮಸೀದಿಗಳಿಂದ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿದ್ದಾರೆ. ವಾಸ್ತವವಾಗಿ ಆ ಹಣವನ್ನು ಗಾಜಾಕ್ಕೆ ಕಳುಹಿಸದೆ, ಅದನ್ನು ತಮ್ಮ ಐಷಾರಾಮಿ ಜೀವನಕ್ಕೆ ಬಳಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ ಪೊಲೀಸರು, ಇಲ್ಲಿನ ಎಲಿಸ್ ಬ್ರಿಜ್ ಪ್ರದೇಶದ ಹೋಟೆಲ್ ಒಂದರಿಂದ 23 ವರ್ಷದ ಅಲಿ ಮೆಘಾಟ್ ಅಲ್-ಅಝಹರ್‌ ನನ್ನು ಬಂಧಿಸಿದ್ದಾರೆ. ಇವನು ಸಿರಿಯಾದ ರಾಜಧಾನಿ ದಮಾಸ್ಕಸ್ ನಿವಾಸಿಯಾಗಿದ್ದಾನೆ. ಇತರ 3 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಪೊಲೀಸ್ ಸಹಾಯಕ ಆಯುಕ್ತ ಶರದ ಸಿಂಘಲ ಈ ಪ್ರಕರಣದ ಬಗ್ಗೆ ಹೇಳಿಕೆ ನೀಡುತ್ತಾ, ಆರೋಪಿಗಳಿಂದ 3 ಸಾವಿರ 600 ಡಾಲರ್ (3 ಲಕ್ಷ 14 ಸಾವಿರ ಭಾರತೀಯ ರೂಪಾಯಿಗಳು) ಹಾಗೂ 25 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಮೂವರು ವ್ಯಕ್ತಿಗಳಾದ ಜಕಾರಿಯಾ ಹೈತಮ ಅಲ್ಜಾರ್, ಅಹ್ಮದ್ ಅಲಹಬಾಶ್ ಮತ್ತು ಯೂಸುಫ್ ಅಲ್-ಜಹರ್ ಇವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ, ಎಂದು ಹೇಳಿದರು.

ಮಸೀದಿಗಳಲ್ಲಿ ಗಾಜಾದಲ್ಲಿನ ಹಸಿದ ಕುಟುಂಬಗಳ ವೀಡಿಯೊಗಳನ್ನು ತೋರಿಸಿ ಹಣ ಪಡೆದರು!

ಈ ಗುಂಪು ಜುಲೈ 22ರಂದು ಪ್ರವಾಸಿ ವೀಸಾದ ಮೇಲೆ ಕೋಲಕಾತಾಗೆ ಬಂದಿತ್ತು. ನಂತರ ಆಗಸ್ಟ್ 2ರಂದು ಕರ್ಣಾವತಿಯನ್ನು ತಲುಪಿದ್ದರು. ಈ ಗುಂಪು ಮಸೀದಿಗಳಿಗೆ ಭೇಟಿ ನೀಡಿ ಗಾಜಾದ ಹಸಿದ ಕುಟುಂಬಗಳ ವೀಡಿಯೊಗಳನ್ನು ತೋರಿಸಿ, ಅಲ್ಲಿನ ಮುಸ್ಲಿಮರಿಂದ ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣ ಗಾಜಾವನ್ನು ತಲುಪಿದೆ ಎಂಬುದಕ್ಕೆ ಪೊಲೀಸರಿಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ‘ಪ್ರಾಥಮಿಕವಾಗಿ ಈ ಗುಂಪು ಸಂಶಯಾಸ್ಪದ ವ್ಯಕ್ತಿಗಳ ಸಂಪರ್ಕದಲ್ಲಿದೆ ಎಂದು ಕಂಡುಬಂದಿದೆ’ ಎಂದು ಪೊಲೀಸರು ಹೇಳಿದ್ದಾರೆ.