ಕರ್ನಾಟಕ: ಧರ್ಮಸ್ಥಳದ ಮೇಲೆ ಸುಳ್ಳು ಆರೋಪ ಮಾಡಿದ ಸ್ವಚ್ಛತಾ ಸಿಬ್ಬಂದಿಯ ಬಂಧನ! Dharmasthala Sanitation Worker Arrested

ದೇವಸ್ಥಾನದ ಆವರಣದಲ್ಲಿ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಮೃತದೇಹಗಳನ್ನು ಹೂತಿದ್ದಾರೆಂಬ ಆರೋಪದ ಪ್ರಕರಣ

ಸ್ವಚ್ಛತಾ ಸಿಬ್ಬಂದಿ ಚಿನ್ನಯ್ಯ

ಮಂಗಳೂರು – ರಾಜ್ಯದ ಧರ್ಮಸ್ಥಳದಲ್ಲಿರುವ ಭಗವಾನ್ ಮಂಜುನಾಥ ದೇವಸ್ಥಾನದ ಮಾಜಿ ಸ್ವಚ್ಛತಾ ಸಿಬ್ಬಂದಿಯೊಬ್ಬ ಜುಲೈ ತಿಂಗಳಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದನು. ಅವನು 1995 ರಿಂದ 2014 ರ ಅವಧಿಯಲ್ಲಿ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೃತದೇಹಗಳನ್ನು ಹೂತುಹಾಕಲು ತನಗೆ ಹೇಳಲಾಗಿತ್ತು ಎಂದು ಹೇಳಿದ್ದನು. ಇದಕ್ಕೆ ಸಾಕ್ಷಿಯಾಗಿ 30 ವರ್ಷಗಳ ಹಿಂದಿನ ತಲೆಬುರುಡೆಯೊಂದನ್ನು ತೋರಿಸಿದ್ದನು. ಈಗ ಈ ಪ್ರಕರಣ ಸುಳ್ಳು ಎಂದು ತಿಳಿದುಬಂದ ಕಾರಣ ಆತನನ್ನು ಬಂಧಿಸಲಾಗಿದೆ. ಆತನ ಹೆಸರು ಚಿನ್ನಯ್ಯ ಆಗಿದೆ.

ಸಂಪಾದಕೀಯ ನಿಲುವು

ಹಿಂದೂ ದೇವಸ್ಥಾನಗಳನ್ನು ಈ ರೀತಿ ಅಪಪ್ರಚಾರ ಮಾಡಿದ ಈ ಕಾರ್ಯಕರ್ತನಿಗೆ ಕಠಿಣ ದಂಡ ವಿಧಿಸಬೇಕು. ಇದರೊಂದಿಗೆ, ಈ ಹಿಂದಿರುವ ಮಾಸ್ಟರ್ ಮೈಂಡ್ ಯಾರು ಎಂಬುದನ್ನು ತನಿಖೆ ಮಾಡಿ, ಹಿಂದೂ ವಿರೋಧಿ ವ್ಯವಸ್ಥೆಯ ಬಣ್ಣ ಬಯಲು ಮಾಡಬೇಕು. ಅಲ್ಲದೆ, ಕರ್ನಾಟಕದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಇರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಬೇಡಿಕೆಯನ್ನು ಇಡಬೇಕು‌!