ಹತ್ಯೆಯ ಕುರಿತು ಫಲಕಗಳನ್ನು ಹಾಕಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಲು ಯತ್ನ

ರಾಯಪುರ (ಛತ್ತೀಸಗಢ) – ರಾಜ್ಯದ ಕಾಂಕೇರ ಜಿಲ್ಲೆಯಲ್ಲಿ ಆಗಸ್ಟ್ 15 ರಂದು ಮನೀಶ್ ನರೇತಿ ಎಂಬ ಯುವಕನೊಬ್ಬ ರಾಷ್ಟ್ರಧ್ವಜವನ್ನು ಹಾರಿಸಿದ್ದನು. ಇದರಿಂದ ಕುಪಿತಗೊಂಡ ನಕ್ಸಲರು ಆಗಸ್ಟ್ 16ರಂದು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಾಂಕೇರ ಜಿಲ್ಲೆಯ ಮಾಡ್ ಪ್ರದೇಶದ ಬಿನಾಗುಂಡಾ ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ಬೆಳಕಿಗೆ ಬಂದಿದೆ.
ಕಳೆದ ವರ್ಷ ಇಲ್ಲಿ ನಡೆದ ಎನ್ ಕೌಂಟರ್ ನಲ್ಲಿ 29 ನಕ್ಸಲರು ಹತರಾಗಿದ್ದರು. ಇದರ ನಂತರ ಹಲವು ವರ್ಷಗಳ ಬಳಿಕ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮದ ಮನೀಶ್ ನರೇತಿ ಎಂಬ ಯುವಕನು ರಾಷ್ಟ್ರಧ್ವಜ ಹಾರಿಸಿ ‘ಭಾರತ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗಿದ್ದನು.
ಮರುದಿನ ನಕ್ಸಲವಾದಿಗಳು ಗ್ರಾಮದಲ್ಲಿ ‘ಜನ್ ಅದಾಲತ್’ ಆಯೋಜಿಸಿ ಮನೀಶ್ ನನ್ನು ಹತ್ಯೆ ಮಾಡಿದರು. ಅವನು ಪೊಲೀಸರ ‘ಮಾಹಿತಿದಾರ’ ಎಂಬ ಆರೋಪ ಮಾಡಿದ ನಕ್ಸಲರು, ಈ ಹತ್ಯೆಯ ಬಗ್ಗೆ ಗ್ರಾಮದಲ್ಲಿ ಫಲಕಗಳನ್ನು ಹಾಕಿ ಇಡೀ ಗ್ರಾಮದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!