|

ಮಂಗಳೂರು – ಸುಜಾತಾ ಭಟ್ ಎಂಬ ವೃದ್ಧ ಮಹಿಳೆ, ತಮ್ಮ ಮಗಳು ‘ಅನನ್ಯಾ ಭಟ್’ ಕಾಣೆಯಾಗಿದ್ದಾಳೆ, ಆಕೆಯ ಮೇಲೆ ಅತ್ಯಾಚಾರ ಮಾಡಿ ಧರ್ಮಸ್ಥಳದಲ್ಲಿರುವ ದೇವಾಲಯದ ಆವರಣದಲ್ಲಿ ಹೂಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು; ಆದರೆ ಈಗ, ಹಾಗೇನೂ ಆಗಿಲ್ಲ ಮತ್ತು ಅನನ್ಯಾ ಭಟ್ ಎಂಬ ಯಾವುದೇ ಮಗಳು ಅಸ್ತಿತ್ವದಲ್ಲಿಲ್ಲ ಎಂಬುದು ಬಹಿರಂಗಗೊಂಡಿದೆ. ‘ಧರ್ಮಸ್ಥಳದ ಪ್ರಸಿದ್ಧ ದೇವಾಲಯಕ್ಕೆ ಕೆಟ್ಟ ಹೆಸರು ತರಲು ಅಭಿಯಾನ ನಡೆಸುತ್ತಿರುವ ಕಾರ್ಯಕರ್ತರು ಹೇಳಿದ್ದಕ್ಕೆ ನಾನು ಸುಳ್ಳು ಸಾಕ್ಷಿ ಹೇಳಿದೆ. ‘ಅತ್ಯಾಚಾರ’ ಮತ್ತು ‘ಸಾಮೂಹಿಕ ಶವ ಹೂಳುವುದು’ ಎಂಬ ಪಿತೂರಿಯ ಸಿದ್ಧಾಂತಕ್ಕೆ ಬೆಂಬಲ ನೀಡಲು ನನ್ನ ಮೇಲೆ ಒತ್ತಡ ಹೇರಲಾಗಿತ್ತು’ ಎಂದು ಸುಜಾತಾ ಭಟ್ ಒಪ್ಪಿಕೊಂಡಿದ್ದಾರೆ.
ಒಂದು ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಭಟ್, ಗಿರೀಶ್ ಮತ್ತನ್ನಾವರ್ ಮತ್ತು ಟಿ. ಜಯಂತಿ ಎಂಬ ಕಾರ್ಯಕರ್ತರು ತಮ್ಮ ‘ಬ್ರೈನ್‌ವಾಶ್’ ಮಾಡಿ ಸುಳ್ಳು ಹೇಳುವಂತೆ ಮಾಡಿದ್ದಾರೆ ಎಂದಿದ್ದಾರೆ.
ಸುಜಾತಾ ಭಟ್ ಅವರು ಮಾಡಿದ ಸುಳ್ಳು ಆರೋಪಗಳು!
೧. ‘ಮಗಳು’ ಅನನ್ಯಾ ಭಟ್ ೨೦೦೩ರ ಮೇ ತಿಂಗಳಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು.
೨. ಅಸ್ತಿತ್ವದಲ್ಲಿ ಇಲ್ಲದ ಅನನ್ಯಾ ೧೮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ದೇವಾಲಯದ ಆವರಣದಲ್ಲಿ ನಾಪತ್ತೆಯಾಗಿದ್ದಳು.
೩. ಅವಳನ್ನು ಅಪಹರಿಸಿ, ಕಟ್ಟಿ ಹಾಕಿ, ಮತ್ತೆ ಧರ್ಮಸ್ಥಳಕ್ಕೆ ಬರದಂತೆ ಬೆದರಿಕೆ ಹಾಕಲಾಗಿತ್ತು.
೪. ಅವಳು ತನ್ನ ಮೇಲೆ ನಡೆದ ಅನ್ಯಾಯದ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಎಂದು ಹೇಳಲಾಗಿತ್ತು.
೫. ಅನನ್ಯಾ ಇರುವಿಕೆಗೆ ಸಾಕ್ಷಿಯಾಗಿ ನೀಡಲಾದ ಫೋಟೋ ಕೂಡ ಸಂಪೂರ್ಣವಾಗಿ ಸುಳ್ಳಾಗಿತ್ತು.
ಆರೋಪಗಳ ಹಿಂದಿನ ಕಾರಣ ಇದು!
ಆಸ್ತಿ ವಿವಾದದಿಂದಾಗಿ ನನಗೆ ಹೀಗೆ ಮಾಡಲು ಹೇಳಲಾಗಿತ್ತು. ಇದೇ ಏಕೈಕ ಕಾರಣ ಎಂದು ಸುಜಾತಾ ಭಟ್ ಹೇಳಿದ್ದಾರೆ. ಧರ್ಮಸ್ಥಳ ದೇವಾಲಯದ ಆಡಳಿತ ಮತ್ತು ನನ್ನ ಅಜ್ಜರ ನಡುವೆ ಜಮೀನಿನ ವಿಷಯಕ್ಕೆ ಸಂಬಂಧಿಸಿದ ವಿವಾದದಿಂದಾಗಿ, ನಾನು ದೇವಾಲಯವನ್ನು ಗುರಿಯಾಗಿಸಿದ ಮಾನಹಾನಿಕರ ಅಭಿಯಾನದಲ್ಲಿ ಭಾಗಿಯಾದೆ.
ನನ್ನ ಆರೋಪಗಳಿಂದ ಕರ್ನಾಟಕದ ಜನರ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಕರ್ನಾಟಕದ ಜನರು, ಧರ್ಮಸ್ಥಳದ ಭಕ್ತರು ಮತ್ತು ಇಡೀ ದೇಶದ ಜನರು ನನ್ನನ್ನು ಕ್ಷಮಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.
ಹಿಂದೂ ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಪಿತೂರಿಗಳನ್ನು ಮಾಡಲಾಗುತ್ತಿದೆ! – ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ

ಹುಬ್ಬಳ್ಳಿ – ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಮಾಡಲಾದ ಎಲ್ಲ ಆರೋಪಗಳು ಸುಳ್ಳು ಮತ್ತು ಅವುಗಳಿಗೆ ಯಾವುದೇ ಸಾಕ್ಷಿಗಳಿಲ್ಲ. ಇಲ್ಲಿಯವರೆಗೆ ೧೭ ಕಡೆಗಳಲ್ಲಿ ಉತ್ಖನನ ನಡೆಸಲಾಗಿದೆ; ಆದರೆ ಅಲ್ಲಿ ಏನೂ ಸಿಕ್ಕಿಲ್ಲ. ನಮ್ಮ ಹಿಂದೂ ಧರ್ಮ ಮತ್ತು ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಪಿತೂರಿಗಳನ್ನು ಮಾಡಲಾಗುತ್ತಿದೆ ಮತ್ತು ನಾವೆಲ್ಲರೂ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ನಾವು ನಮ್ಮ ಧರ್ಮವನ್ನು ರಕ್ಷಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಆಗಸ್ಟ್ ೨೨ರಂದು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅವರು ಮಾತು ಮುಂಉದವರೆಸಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಪಿತೂರಿ ಇದೆ ಎಂದು ನಾನು ಈಗಾಗಲೇ ಹೇಳಿದ್ದೆ. ಈ ಮೊದಲು ಕೂಡ ಸಿಬಿಐ ತನಿಖೆಗೆ ನಾನು ಒತ್ತಾಯಿಸಿದ್ದೆ. ಈಗಲೂ ನಾನು ವಿಶೇಷ ತನಿಖಾ ದಳದ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
‘ನಾವು ಧರ್ಮಸ್ಥಳದ ಅಥವಾ ಆರೋಪ ಮಾಡುವವರ ಪರವಾಗಿಲ್ಲ, ಬದಲಾಗಿ ನ್ಯಾಯದ ಪರವಾಗಿದ್ದೇವೆ!’ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಯಾವುದೇ ಮಸೀದಿ-ಮದರಸಾ ಅಥವಾ ಚರ್ಚ್‌ಗಳ ಬಗ್ಗೆ ಇಂತಹ ಆರೋಪಗಳು ಬಂದಿದ್ದರೆ, ಕಾಂಗ್ರೆಸ್‌ನ ಉಪಮುಖ್ಯಮಂತ್ರಿಯ ನಿಲುವು ನ್ಯಾಯಕ್ಕಿಂತ ಯಾರ ಪರವಾಗಿ ಇರುತ್ತಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!
ನಾವು ಅವರ (ಧರ್ಮಸ್ಥಳದ) ಪರವಾಗಿಯೂ ಇಲ್ಲ ಅಥವಾ ಇವರ (ಆರೋಪ ಮಾಡುವವರ) ಪರವಾಗಿಯೂ ಇಲ್ಲ. ನಾವು ಕೇವಲ ನ್ಯಾಯದ ಪರವಾಗಿದ್ದೇವೆ. ಧರ್ಮದ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನಾವು ಹೇಳುತ್ತಿದ್ದೇವೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಯಾವುದೇ ತಪ್ಪಿತಸ್ಥರು ಕಂಡುಬಂದರೆ, ನಮ್ಮ ಸರಕಾರ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಧರ್ಮಸ್ಥಳ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನಾವು ಪತ್ತೆ ಮಾಡುತ್ತೇವೆ! – ಗೃಹ ಸಚಿವ ಜಿ. ಪರಮೇಶ್ವರ

ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ, ತನಿಖೆ ಇತ್ತೀಚೆಗೆ ಪ್ರಾರಂಭವಾಗಿದೆ. ಕೇವಲ ಅಗೆಯುವ ಕೆಲಸ ನಡೆದಿದೆ. ಇಡೀ ಪ್ರಕರಣ ಇನ್ನೂ ಸ್ಪಷ್ಟವಾಗಬೇಕಿದೆ. ದೂರುದಾರರ ಆರೋಪಗಳು ಸುಳ್ಳು ಎಂದು ಸಾಬೀತಾದರೆ, ಕಾನೂನು ಅವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನಾವು ಪತ್ತೆ ಮಾಡುತ್ತೇವೆ. ಸತ್ಯವನ್ನು ಹೊರತರಲು ನಮ್ಮ ಸರಕಾರ ವಿಶೇಷ ತನಿಖಾ ದಳವನ್ನು (‘ಎಸ್.ಐ.ಟಿ.’ – ‘ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್’) ರಚಿಸಿದೆ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!