‘ರಾಮರಾಜ್ಯ’ದ ಕಲ್ಪನೆಯನ್ನು ಅಪಹಾಸ್ಯ ಮಾಡಿರುವ ಆರೋಪ

ಗೌಹಾಟಿ (ಆಸ್ಸಾಂ) – ಪತ್ರಕರ್ತ ಮತ್ತು ಯೂಟ್ಯೂಬರ್ (ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ಪ್ರಸಾರ ಮಾಡುವವರು) ಅಭಿಸಾರ ಶರ್ಮಾ ವಿರುದ್ಧ ಪೊಲೀಸರ ಅಪರಾಧ ವಿಭಾಗ ‘ಎಫ್‌ಐಆರ್’ ದಾಖಲಿಸಿದೆ. ಅವರು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ ವಿಡಿಯೊದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಅಭಿಸಾರ ಶರ್ಮಾ ತಮ್ಮ ವಿಡಿಯೊದಲ್ಲಿ ಆಸ್ಸಾಂ ಸರಕಾರ ಮತ್ತು ಕೇಂದ್ರ ಸರಕಾರವನ್ನು ಅಪಹಾಸ್ಯ ಮಾಡಿದ್ದಾರೆ. ‘ಈ ಎರಡೂ ಸರಕಾರಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಧ್ರುವೀಕರಣವನ್ನುಂಟು ಮಾಡಿ ಅಧಿಕಾರದಲ್ಲಿ ಉಳಿದುಕೊಂಡಿವೆ’ ಎಂದು ಅವರು ಹೇಳಿದ್ದರು. ಹಾಗೆಯೇ, ಅವರು ‘ರಾಮರಾಜ್ಯ’ದ ಕಲ್ಪನೆಯನ್ನು ಕೂಡ ಅಪಹಾಸ್ಯ ಮಾಡಿದ್ದರು.
🚨 Assam: FIR filed against journalist Abhisar Sharma for mocking the concept of Ramrajya.
❓ Strange how such journalists never dare speak a word about Ghazwa-e-Hind, but mocking Sanatan ideals is their “freedom of expression”!
VC: @himanshi__bishtpic.twitter.com/4lHtBoyhgC
— Sanatan Prabhat (@SanatanPrabhat) August 22, 2025
1. ಎಫ್.ಐ.ಆರ್.ನಲ್ಲಿ, ಶರ್ಮಾ ಅವರ ವಿಡಿಯೊ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಿದೆ ಎಂದು ಆರೋಪಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 152 (ರಾಜದ್ರೋಹ), 196 ಮತ್ತು 197ರ ಅಡಿಯಲ್ಲಿ ‘ಎಫ್‌ಐಆರ್’ ದಾಖಲಿಸಿದ್ದಾರೆ.
2. ಗೌಹಾಟಿಯ ಅಲೋಕ ಬರುವಾ ಎಂಬ 23 ವರ್ಷದ ಯುವಕ ಪತ್ರಕರ್ತ ಅಭಿಸಾರ ಶರ್ಮಾ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ, ಅಭಿಸಾರ ಶರ್ಮಾ ಅವರು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರ ಮೇಲೆ ಧಾರ್ಮಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅವರು ‘ರಾಮರಾಜ್ಯ’ದ ಕಲ್ಪನೆಯನ್ನು ಅವಮಾನಿಸಿದ್ದಾರೆ ಎಂದು ಹೇಳಲಾಗಿದೆ.
3. ದೂರಿನ ಪ್ರಕಾರ, ಅಭಿಸಾರ ಶರ್ಮಾ ಅವರು ಸರಕಾರವನ್ನು ಅಪಖ್ಯಾತಿಗೊಳಿಸಲು ಮತ್ತು ಜನರ ನಡುವೆ ದ್ವೇಷವನ್ನು ಸೃಷ್ಟಿಸಲು ಈ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಗಳಿಂದ ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟಾಗಬಹುದು.
4. ಪೊಲೀಸರು, ಶರ್ಮಾ ಅವರ ಆರೋಪಗಳು ಭಾರತದ ಸಾರ್ವಭೌಮತ್ವ ಮತ್ತು ಏಕತೆಗೆ ಅಪಾಯ ತರುವ ನಿಬಂಧನೆಗಳಿಗೆ ಸಂಬಂಧಿಸಿವೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುರಾಮರಾಜ್ಯವನ್ನು ಅಪಹಾಸ್ಯ ಮಾಡುವ ಪತ್ರಕರ್ತರು ‘ಗಜ್ವಾ-ಎ-ಹಿಂದ್’ (ಭಾರತವನ್ನು ಇಸ್ಲಾಮೀಕರಣಗೊಳಿಸುವುದು) ಬಗ್ಗೆ ಎಂದಿಗೂ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!