ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಜನರಿಂದ ಚುನಾಯಿತರಾದ ರಾಜ್ಯ ಸರಕಾರಗಳು ರಾಜ್ಯಪಾಲರ ಇಚ್ಛೆಯಂತೆ ನಡೆಯಲು ಸಾಧ್ಯವಿಲ್ಲ. ವಿಧಾನ ಸಭೆಯು ಒಂದು ಮಸೂದೆಯನ್ನು ಎರಡನೇ ಬಾರಿಗೆ ರಾಜ್ಯಪಾಲರಿಗೆ ಕಳುಹಿಸಿದರೆ, ರಾಜ್ಯಪಾಲರು ಅದನ್ನು ರಾಷ್ಟ್ರಪತಿಗೆ ಕಳುಹಿಸಲು ಸಾಧ್ಯವಿಲ್ಲ. ಅಲ್ಲದೆ, ಅವರಿಗೆ ಅನಿರ್ದಿಷ್ಟ ಕಾಲದವರೆಗೆ ಮಸೂದೆ ಅನುಮೋದನೆ ತಡೆ ಹಿಡಿಯುವ ಅಧಿಕಾರವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ರಾಜ್ಯಪಾಲರಿಗೆ ಇರುವ 4 ಆಯ್ಕೆಗಳು!
ಸಂವಿಧಾನದ 200ನೇ ವಿಧಿಯ ಪ್ರಕಾರ, ರಾಜ್ಯಪಾಲರಿಗೆ ಮಸೂದೆಗಳ ಬಗ್ಗೆ ನಿರ್ಣಯ ಕೈಗೊಳ್ಳಲು 4 ಆಯ್ಕೆಗಳಿವೆ:
ಅ. ಮಸೂದೆಯನ್ನು ಸ್ವೀಕರಿಸುವುದು
ಆ. ಮಸೂದೆ ಅನುಮೋದನೆ ತಡೆ ಹಿಡಿಯುವುದು
ಇ. ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸುವುದು, ಅಥವಾ
ಈ. ಪುನರ್ ಪರಿಶೀಲನೆಗಾಗಿ ಮಸೂದೆಯನ್ನು ವಿಧಾನಸಭೆಗೆ ಹಿಂತಿರುಗಿಸುವುದು
ನಾಲ್ಕನೇ ಆಯ್ಕೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಹೇಳಿರುವುದೇನೆಂದರೆ, ಒಂದು ವೇಳೆ ವಿಧಾನಸಭೆಯು ಅದೇ ಮಸೂದೆಯನ್ನು ಮತ್ತೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದರೆ, ರಾಜ್ಯಪಾಲರು ಅದನ್ನು ಸ್ವೀಕರಿಸಲೇಬೇಕು.
ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ನೇತೃತ್ವದ ಐದು ನ್ಯಾಯಾಧೀಶರ ಪೀಠವು, ರಾಜ್ಯಪಾಲರು ಪುನರ್ ಪರಿಶೀಲನೆಗೆ ಕಳುಹಿಸದೆ ಮಸೂದೆ ಅನುಮೋದನೆ ತಡೆ ಹಿಡಿದರೆ, ಚುನಾಯಿತ ಸರಕಾರಗಳು ರಾಜ್ಯಪಾಲರ ಇಚ್ಛೆಯ ಮೇಲೆ ಅವಲಂಬಿತವಾಗುತ್ತವೆ. ರಾಜ್ಯಪಾಲರಿಗೆ ಅನಿರ್ದಿಷ್ಟ ಕಾಲದವರೆಗೆ ಮಸೂದೆ ಅನುಮೋದನೆ ತಡೆ ಹಿಡಿಯುವ ಅಧಿಕಾರವಿಲ್ಲ ಎಂದು ಹೇಳಿದೆ.
ಏನಿದು ಪ್ರಕರಣ ?
ಈ ಪ್ರಕರಣವು ತಮಿಳುನಾಡು ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವಿನ ವಿವಾದದಿಂದ ಬೆಳಕಿಗೆ ಬಂದಿದೆ. ಅಲ್ಲಿನ ರಾಜ್ಯಪಾಲರು ರಾಜ್ಯ ಸರಕಾರದ ಮಸೂದೆಗಳನ್ನು ತಡೆ ಹಿಡಿದಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!