ಗಣೇಶೋತ್ಸವದ ಹಿನ್ನೆಲೆಯಲ್ಲಿ ನಿರ್ಧಾರ

ಮುಂಬಯಿ – ಗಣೇಶೋತ್ಸವದ ಹಿನ್ನೆಲೆಯಲ್ಲಿ ಮುಂಬಯಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ 16 ಟನ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಸರಕುಗಳನ್ನು ಸಾಗಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆಗಸ್ಟ್ 23ರ ಮಧ್ಯರಾತ್ರಿ 12 ರಿಂದ ಆಗಸ್ಟ್ 28 ರ ರಾತ್ರಿ 11ರವರೆಗೆ ಈ ನಿಷೇಧ ಜಾರಿಯಲ್ಲಿರುವುದು. ಭಾರಿ ವಾಹನಗಳು, ಟ್ರಕ್‌ಗಳು, ಮಲ್ಟಿ-ಆಕ್ಸೆಲ್, ಟ್ರೈಲರ್, ಲಾರಿ ಇತ್ಯಾದಿ ವಾಹನಗಳ ಮೇಲೆ ನಿಷೇಧ ಹೇರಲಾಗಿವೆ.
ಈ 6 ದಿನಗಳ ಜೊತೆಗೆ, 5 ಮತ್ತು 7 ದಿನಗಳ ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 2 ರಂದು ಬೆಳಗ್ಗೆ 8 ರಿಂದ ರಾತ್ರಿ 11 ರವರೆಗೆ, ಹಾಗೆಯೇ ಅನಂತ ಚತುರ್ದಶಿಯ ವೇಳೆ ಸೆಪ್ಟೆಂಬರ್ 6 ರ ಬೆಳಗ್ಗೆ 8 ರಿಂದ ಸೆಪ್ಟೆಂಬರ್ 7ರ ರಾತ್ರಿ 8ರವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧವಿರುವುದು.
ನಿಷೇಧ ಯಾರಿಗೆ ಅನ್ವಯಿಸುವುದಿಲ್ಲ ?
1. ಜೆ.ಎನ್.ಪಿ.ಟಿ. ಬಂದರಿನಿಂದ ಜಯಗಡ ಬಂದರಿಗೆ ಆಮದು-ರಫ್ತು ಸರಕುಗಳನ್ನು ಸಾಗಿಸುವ ವಾಹನಗಳು.
2. ಹಾಲು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ಗಳು, ಔಷಧಗಳು, ದ್ರವ ವೈದ್ಯಕೀಯ ಆಮ್ಲಜನಕ, ಆಹಾರ-ಧಾನ್ಯಗಳು, ತರಕಾರಿಗಳು ಮತ್ತು ಹಾಳಾಗುವ ವಸ್ತುಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು.
3. ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಕೆಲಸ ಮತ್ತು ಸಾಮಗ್ರಿಗಳನ್ನು ಸಾಗಿಸುವ ವಾಹನಗಳು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!