ಸಾಧಕರಿಗೆ ಧೈರ್ಯ ಮತ್ತು ಆನಂದವನ್ನು ನೀಡಿ, ಅವರಿಂದ ಸೇವೆ ಹಾಗೂ ಸಾಧನೆ ಮಾಡಿಸಿಕೊಂಡು ತಾವು ಮಾತ್ರ ನಾಮರಹಿತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ಸನಾತನದ ಪ್ರತಿಯೊಬ್ಬ ಸಾಧಕನ ಸಾಧನೆಯ ಆರಂಭದ ಕ್ಷಣಗಳು ಅಮೂಲ್ಯ ಮತ್ತು ಅನುಭೂತಿಗಳಿಂದ ಕೂಡಿರುತ್ತದೆ. ಸುಮಾರು ೨೦೦೧ ರಿಂದ ೨೦೦೬ ರ ಅವಧಿಯಲ್ಲಿ ನಾನು ಅನುಭವಿಸಿದ ಕೆಲವು ಅಮೂಲ್ಯ ಕ್ಷಣಗಳನ್ನು ಇಲ್ಲಿ ಕೊಟ್ಟಿದ್ದೇನೆ. ಆ ಸಮಯದಲ್ಲಿ ದೂರವಾಣಿ ಇರಲಿಲ್ಲ, ಜಾಲತಾಣ (ಇಂಟರ್ನೆಟ್) ಕೂಡ ಇರಲಿಲ್ಲ! ಆದರೂ ಸನಾತನದ ಸಾಧಕರು ಆ ಸಮಯದಲ್ಲಿ ಕೇವಲ ಗುರುದೇವರ ಭಾವಚಿತ್ರವನ್ನು ನೋಡಿದವರೂ ಸಹ ಸಾಧನೆ ಮತ್ತು ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಸನಾತನ ಸಂಸ್ಥೆಯ ಮೂಲಕ ಸಾಧಕರು ಸತ್ಸಂಗ, ಸೇವೆ, ಸಾಮೂಹಿಕ ಜಪ ಮುಂತಾದ ಸಾಧನೆಗಳನ್ನು ಹೇಗೆ ಮಾಡುತ್ತಿದ್ದರು ಎಂಬ ಕುತೂಹಲವನ್ನು ಇಲ್ಲಿ ನೀಡಿದ ಉದಾಹರಣೆ ತಣಿಸುತ್ತದೆ. ಈ ಉದಾಹರಣೆಯಲ್ಲಿ ಆ ಕಾಲದ ಪ್ರತಿಯೊಬ್ಬ ಸಾಧಕನ ಅನುಭವದ ಪ್ರಮಾಣವು ಹೆಚ್ಚು ಕಡಿಮೆ ಸಮಾನವಾಗಿದ್ದರೂ, ಕೆಲವು ಅನುಭವಗಳು ಕೊಂಚ ಭಿನ್ನವೂ ಇರಬಹುದು. ಆ ಸುವರ್ಣ ದಿನಗಳ ಅಮೂಲ್ಯ ಕ್ಷಣಗಳು ಮತ್ತು ಸುವರ್ಣ ನೆನಪುಗಳನ್ನು ನಾನು ಗುರುದೇವರ ಚರಣಗಳಿಗೆ ಸಮರ್ಪಿಸುತ್ತಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸತ್ಸಂಗ

೧ ಅ. ಸತ್ಸಂಗದಲ್ಲಿ ಸಣ್ಣ ಸಣ್ಣ ಕೃತಿಗಳನ್ನು ಕೂಡ ಸಾಧನೆ ಎಂದು ಮಾಡಲು ಕಲಿಸುವುದು : ಆರಂಭ ದಲ್ಲಿ ನಮಗೆ ಸನಾತನ ಸಂಸ್ಥೆಯ ಸತ್ಸಂಗಗಳು ಸಿಗುತ್ತಿದ್ದವು. ಸತ್ಸಂಗಕ್ಕೆ ಬರುವಂತೆ ಸ್ಥಳದ ಸುತ್ತಮುತ್ತಲಿನ ಜನರನ್ನು ಸಂಪರ್ಕಿಸಲಾಗುತ್ತಿತ್ತು. ಸತ್ಸಂಗದಲ್ಲಿ ಸಾಧನೆಯ ಆರಂಭ ‘ಚಪ್ಪಲಿಗಳನ್ನು ಸರಿಯಾಗಿ ಸಾಲಿನಲ್ಲಿ ಇಡುವುದರಿಂದ’ ಆಗುತ್ತಿತ್ತು. ಇದನ್ನು ಇಂದಿಗೂ ಸನಾತನದ ಪ್ರತಿಯೊಬ್ಬ ಸಾಧಕನೂ ಪಾಲಿಸುತ್ತಿದ್ದಾನೆ.
೧ ಆ. ಸತ್ಸಂಗದ ಆರಂಭದಲ್ಲಿ ಮಾರ್ಗದರ್ಶನ ಮಾಡುವುದು: ಸತ್ಸಂಗವು ಸಾಮಾನ್ಯವಾಗಿ ದೇವಾಲಯವೊಂದರಲ್ಲಿ ನಡೆಯು ತ್ತಿತ್ತು. ಸತ್ಸಂಗವನ್ನು ಪ್ರಾರಂಭಿಸುವ ಮೊದಲು ಹತ್ತಿರದ ಹಿತಚಿಂತಕರ ಮನೆಯಿಂದ ಜಮಖಾನ ತರಲಾಗುತ್ತಿತ್ತು. ಅದರ ಮೇಲೆ ಸತ್ಸಂಗ ಮಾಡುವವರು ಮತ್ತು ಕೇಳುವವರು ಕುಳಿತುಕೊಳ್ಳುತ್ತಿದ್ದರು ಮತ್ತು ಗ್ರಂಥಗಳನ್ನೂ ಇಡಲಾಗುತ್ತಿತ್ತು. ಆರಂಭದಲ್ಲಿ ಸತ್ಸಂಗದಲ್ಲಿ ಮಾರ್ಗದರ್ಶನ ಮಾಡಲಾಗುತ್ತಿತ್ತು.
೧ ಇ. ಸತ್ಸಂಗದಲ್ಲಿ ನಾಮಜಪ ಮತ್ತಿತರ ಸಾಧನೆಗಳನ್ನು ಕಲಿಸುವುದು
೧. ಸತ್ಸಂಗ ಮುಗಿದ ನಂತರ, ಜಿಜ್ಞಾಸೆಯಿಂದ ಬಂದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಹಿಂದಿನ ಸತ್ಸಂಗದಲ್ಲಿ ಹೇಳಿದ ವಿಷಯಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆಯೇ ಎಂದು ವಿಮರ್ಶಿಸುತ್ತಿದ್ದರು.

ಶ್ರೀ. ಪ್ರಶಾಂತ ಹರಿಹರ

೨. ಸತ್ಸಂಗದ ಸೇವಕರು ಅನುಭವಗಳ ಹಿಂದಿನ ಶಾಸ್ತ್ರವನ್ನು ಹೇಳುತ್ತಿದ್ದರು. ಇದರಿಂದ ಜಿಜ್ಞಾಸೆಯಿಂದ ಬಂದವರಿಗೆ ಸ್ಫೂರ್ತಿ ಸಿಗುತ್ತಿತ್ತು ಮತ್ತು ಅವರಿಗೆ ಶಾಸ್ತ್ರವೂ ಅರ್ಥವಾಗುತ್ತಿತ್ತು.

೩. ಜಿಜ್ಞಾಸೆಯಿಂದ ಬಂದವರು ಆರಂಭದಲ್ಲಿ ಮನೆಯ ಅಡಚಣೆ ಗಳನ್ನು ಹೇಳಿಕೊಳ್ಳುತ್ತಿದ್ದರು. ಕೊನೆಗೆ ಅವರಿಗೆ, ನಾವು ಆನಂದ ವನ್ನು ಹೇಗೆ ಪಡೆಯಬೇಕು ಎಂಬುದನ್ನು ಕಲಿಯಬೇಕು ಮತ್ತು ಉಳಿದದ್ದನ್ನು ದೇವರಿಗೆ ಬಿಡಬೇಕು ಎಂಬುದು ಅರ್ಥವಾಯಿತು.

೧ ಈ. ಸತ್ಸಂಗದಲ್ಲಿ ಭಾಗವಹಿಸಿದವರು ಬೇರೆ ಸ್ಥಳದಲ್ಲಿ ಸತ್ಸಂಗ ನಡೆಸಲು ಪ್ರೇರೇಪಿಸುವುದು : ಸತ್ಸಂಗದಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಾದಾಗ ಮತ್ತು ಯಾರಾದರೂ ಸಾಧನೆ ಮಾಡಲು ಆರಂಭಿಸಿದರೆ,
ಸತ್ಸಂಗ ನಡೆಸುವವರು ಆ ಸಾಧಕರನ್ನು ಇನ್ನೊಂದು ಸ್ಥಳದಲ್ಲಿ ಸತ್ಸಂಗ ನಡೆಸಲು ಪ್ರೇರೇಪಿಸುತ್ತಿದ್ದರು. ‘ಜ್ಯೋತ್‌ ಸೇ ಜ್ಯೋತ್‌ ಜಗಾವೊ’ (ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿಸುವುದು) ಎಂಬಂತೆ ಸತ್ಸಂಗಗಳು ಬೆಳೆಯುತ್ತಾ ಹೋದವು ಮತ್ತು ಸಾಧಕರ ಆನಂದವೂ ಹೆಚ್ಚುತ್ತಾ ಹೋಯಿತು. ಅಲ್ಲದೆ, ಸಾಧಕರಿಗೆ ಅನೇಕ ಅನುಭವಗಳೂ ಬರುತ್ತಿದ್ದವು.
೨. ಸೇವೆ
೨ ಅ. ಯಾವುದೇ ಪರಿಸ್ಥಿತಿಯಲ್ಲೂ ಸೇವೆ ಮಾಡಲು ಕಲಿಸುವುದು :
ಆ ಸಮಯದಲ್ಲಿ ಸೇವೆ ಮಾಡಲು ಇಂದಿನಂತೆ ಅನೇಕರಲ್ಲಿ ಕಾರು ಇರಲಿಲ್ಲ, ಹೆಚ್ಚಿನವರಲ್ಲಿ ದ್ವಿಚಕ್ರ ವಾಹನಗಳೂ ಇರಲಿಲ್ಲ. ಆಗ ಕೆಲವರಲ್ಲಿ ಸೈಕಲ್‌ ಇತ್ತು. ಆಗ ಸಾಧಕರು ಸೇವೆ ಮಾಡಲು ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಹೋಗುತ್ತಿದ್ದರು, ಉದಾಹರಣೆಗೆ, ಗ್ರಂಥ ಪ್ರದರ್ಶನವಿದ್ದರೆ, ಬ್ಯಾಗ್‌ ಹಿಡಿದುಕೊಂಡು ೨-೩ ಕಿ.ಮೀ. ನಡೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಸೈಕಲ್‌ನಲ್ಲಿ ಇಬ್ಬರು ಸಾಧಕರಿರುತ್ತಿದ್ದರು. ಒಬ್ಬರು ಸೈಕಲ್‌ ಓಡಿಸುತ್ತಿದ್ದರೆ, ಇನ್ನೊಬ್ಬರು ಗ್ರಂಥಗಳಿಂದ ಭಾರವಾದ ಬ್ಯಾಗ್‌ ಮತ್ತು ಭುಜದ ಮೇಲೆ ಗ್ರಂಥಗಳ ಸ್ಟ್ಯಾಂಡ್‌ ಅನ್ನು ಹಿಡಿದು ಕುಳಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಯಾರೂ ಇಲ್ಲದಿದ್ದರೆ, ಹಿಂದೆ ಗ್ರಂಥಗಳ ಬ್ಯಾಗ್‌ ಮತ್ತು ಸ್ಟ್ಯಾಂಡ್‌ ಅನ್ನು ಹಗ್ಗದಿಂದ ಕಟ್ಟಿ ಒಬ್ಬರೇ ಗ್ರಂಥ ಪ್ರದರ್ಶನ ಸ್ಥಳಕ್ಕೆ ಹೋಗುತ್ತಿದ್ದರು.
೨ ಆ. ಗ್ರಂಥ ವಿತರಣೆಯ ಸೇವೆಯನ್ನು ನಿಷ್ಕಾಮವಾಗಿ ಮತ್ತು ಆನಂದದಿಂದ ಮಾಡಲು ಕಲಿಸುವುದು (ಸಾಧನೆ) : ಗ್ರಂಥ ಪ್ರದರ್ಶನ ಸ್ಥಳದಲ್ಲಿ ಕೆಲವೊಮ್ಮೆ ಒಂದೂವರೆ-ಎರಡು ಗಂಟೆ ನಿಲ್ಲುತ್ತಿದ್ದರು ಸಹ ಕೆಲವೊಮ್ಮೆ ಕೇವಲ ಒಂದೆರಡು ಗ್ರಂಥ ಮಾತ್ರ ವಿತರಣೆಯಾಗುತ್ತಿತ್ತು. ಆಗ ಗುರುದೇವರು ಹೇಳಿದ ಮುಂದಿನ ದೃಷ್ಟಿಕೋನ ನೆನಪಾಗುತ್ತಿತ್ತು: ‘ಎಷ್ಟು ಗ್ರಂಥಗಳನ್ನು ವಿತರಣೆ ಮಾಡಿದೆ ಎಂಬುದು ಮುಖ್ಯವಲ್ಲ, ಸೇವೆ ಮಾಡುವಾಗ ನಾಮಜಪ ಆಯಿತಲ್ಲ, ಮನಸ್ಸಿನಲ್ಲಿ ಅಪೇಕ್ಷೆಯ ವಿಚಾರಗಳು ಬರಲಿಲ್ಲವಲ್ಲ, ನಾವು ನಿಷ್ಕಾಮವಾಗಿ ಸೇವೆ ಮಾಡಿದ್ದೇವಲ್ಲ?’ ಇದರಿಂದ ಸಾಧಕರು ಆನಂದದಿಂದ ಸೇವೆ ಮಾಡುತ್ತಿದ್ದರು.
೨ ಇ. ಗುರುದೇವರು ನೀಡಿದ ದೃಷ್ಟಿಕೋನದಿಂದಾಗಿ ಅಂಗಫಲಕ (ಪ್ರಬೋಧನಪರ ಲೇಖನ, ಹಾಗೆಯೇ ‘ಸನಾತನ ಸಂಸ್ಥೆ’ ಎಂದು ಹೆಸರು ಬರೆದ
ಬಟ್ಟೆಯ ಅಂಗ ಫಲಕ) ಹಾಕಿಕೊಂಡು
ಸೇವೆಗೆ ಹೋಗುವಾಗ ಪ್ರತಿಷ್ಠೆಯ ವಿಚಾರಗಳು ಬರದಿರುವುದು ಮತ್ತು ಇದರಿಂದ ಸಮಾಜದ ಜನರಿಗೆ ಆತ್ಮೀಯತೆ ಮೂಡುವುದು : ಆರಂಭ
ದಲ್ಲಿ ಅಂಗಫಲಕವನ್ನು (ಪ್ರಬೋಧನಪರ
ಬರಹಗಳು ಮತ್ತು ‘ಸನಾತನ ಸಂಸ್ಥೆ’ ಎಂದು ಬರೆದ ಬಟ್ಟೆಯ
ಅಂಗಫಲಕ) ಹಾಕಿಕೊಂಡು ಸೇವೆಗೆ ಹೋಗುವಾಗ ನಮ್ಮ ಮನಸ್ಸಿ
ನಲ್ಲಿ ಪ್ರತಿಷ್ಠೆಯ (ಈಮ್ಚಿಗೆ) ವಿಚಾರಗಳು ಬರುತ್ತಿದ್ದವು. ನಂತರ ಗುರುದೇವರು ನೀಡಿದ ದೃಷ್ಟಿಕೋನಗಳನ್ನು ಪಾಲಿಸಿ, ಸಾಧಕರು ಸೇವೆಗೆ ಹೋಗುವಾಗ ಅಂಗಫಲಕಗಳನ್ನು ಹಾಕಿಕೊಳ್ಳಲು ಪ್ರಾರಂಭಿಸಿದರು. ‘ಈ ಅಂಗಫಲಕ ನಮ್ಮ ರಕ್ಷಣಾ ಕವಚವಾಗಿದೆ, ಇದು ಗುಂಡು ನಿರೋಧಕದಂತಿದೆ (ಬುಲೆಟ್‌ ಪ್ರೂಫ್‌)’ ಎಂದು ನಾವು ಸಾಧಕರು ಎದೆ ತಟ್ಟಿ ಧೈರ್ಯದಿಂದ ಹೇಳುತ್ತಿದ್ದೆವು. ಕ್ರಮೇಣ ನಮ್ಮ ಅಂಗಫಲಕಗಳನ್ನು ನೋಡಿ ಸಮಾಜದ ಜನರಿಗೆ ಆತ್ಮೀಯತೆ
ಮೂಡುತ್ತಿತ್ತು ಮತ್ತು ಅವರು ಸಾಧಕರಿಗೆ ಗೌರವ ನೀಡುತ್ತಿದ್ದರು.
೩. ಸೇವೆ ಮಾಡುವಾಗ ಬಂದ ಅನುಭವಗಳು
ಮತ್ತು ಗುರುದೇವರು ನೀಡಿದ ದೃಷ್ಟಿಕೋನಗಳು
೩ ಅ. ಆಧ್ಯಾತ್ಮಿಕ ಪ್ರಸಾರದ ಸೇವೆ ಮಾಡುವಾಗ ಒಳ್ಳೆಯ-ಕೆಟ್ಟ ಅನುಭವಗಳು ಬರುವುದು
೧. ‘ಪ್ರಸಾರ ಸೇವೆ’ಯು ಮನೆಮನೆಗೆ ಹೋಗಿ ಗ್ರಂಥ ವಿತರಣೆ ಮಾಡುವ ಮೂಲಕ ಪ್ರಾರಂಭವಾಯಿತು. ಆ ಸಮಯದಲ್ಲಿ ಜನರಿಗೆ ಸನಾತನ ಸಂಸ್ಥೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೂ ಕೆಲವು ಕಡೆ ಜನರು ನಮ್ಮನ್ನು ಮನೆ ಒಳಗೆ ಕರೆದು ತಿನ್ನಲು ಕೊಡುತ್ತಿದ್ದರೆ ಕೆಲವರು ಬಾಗಿಲಿನ ಹೊರಗೆಯೇ ನಮ್ಮನ್ನು ಸಂಚಾರಿ ವ್ಯಾಪಾರಿ ಎಂದು ತಿಳಿದು ಅಕ್ಷರಶಃ ಓಡಿಸಿಬಿಡುತ್ತಿದ್ದರು.
೨. ‘ನಾವು ಎಲ್ಲಿಗೆ ಹೋದರೂ ಸ್ಥಿರವಾಗಿರಬೇಕು. ಮಾನ-ಅಪಮಾನಗಳ ಆಚೆಯ ಆನಂದವನ್ನು ಪಡೆಯಬೇಕು. ನಿಷ್ಕಾಮ ಸೇವೆ ಮಾಡಲು ಸಾಧ್ಯವಾಗಬೇಕು’, ಎಂಬ ಗುರುದೇವರ ದೃಷ್ಟಿಕೋನವು ನಮ್ಮೆಲ್ಲ ಸಾಧಕರಿಗೂ ತಿಳಿದಿತ್ತು.
೩ ಆ. ‘ಪಾತ್ರೆ ದಾನಮ್‌ ತಿಳಿಯಬೇಕು’ ಎಂದು ಗುರುದೇವರು ಹೇಳುವುದು : ಆ ಸಮಯದಲ್ಲಿ ಒಬ್ಬ ಸಾಧಕಿ ಗುರುದೇವರ ಬಳಿ ”ಒಂದು ನಾಯಿ ಕೂಡ ನಮ್ಮೊಂದಿಗೆ ಮನೆ ಮನೆಗೆ ಪ್ರಸಾರಕ್ಕೆ
ಬರುತ್ತಿತ್ತು. ಅದು ಯಾವ ಮನೆಯ ಮುಂದೆ ಸುಮ್ಮನಿರುತ್ತಿತ್ತೋ ಆ ಮನೆಯ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು ಮತ್ತು ಅದು ಯಾವ ಮನೆಯ ಮುಂದೆ ಬೊಗಳುತ್ತಿತ್ತೋ ಅಲ್ಲಿ ನಕಾರಾತ್ಮಕ ಸ್ಪಂದನ ಸಿಗುತ್ತಿತ್ತು’’ ಎಂದು ಹೇಳಿದರು. ಅದಕ್ಕೆ ಗುರುದೇವರು ನಗುತ್ತಾ, ”ನಾಯಿಗೆ ಏನು ಅರ್ಥವಾಗುತ್ತದೆಯೋ ಅದು ನಮಗೆ ಏಕೆ ಅರ್ಥವಾಗುವುದಿಲ್ಲ ? ನಾವು ಕೂಡ ಸೂಕ್ಷ್ಮವಾಗಿ ಯಾರು ಪಾತ್ರರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಯಾರ ಮನೆಗೆ ಹೋಗಬೇಕು, ಯಾರ ಮನೆಗೆ ಹೋಗಬಾರದು ಎಂಬುದನ್ನು ಅರಿತುಕೊಳ್ಳಬೇಕು ! ಯಾರಿಗೆ ಸಾಧನೆಯ ಬಗ್ಗೆ ಹೇಳಬೇಕು ಮತ್ತು ಯಾರಿಗೆ ಹೇಳಿ ಸಮಯ ವ್ಯರ್ಥ ಮಾಡಬಾರದು, ಅಂದರೆ ‘ಪಾತ್ರೆ ದಾನಮ್’ (ಯೋಗ್ಯ ಪಾತ್ರರಿಗೆ ದಾನ ಮಾಡುವುದು) ತಿಳಿಯಬೇಕು’’ ಎಂದು ಹೇಳಿದರು. ಗುರುದೇವರ ಈ ಮಾತು ಇಂದಿಗೂ ನಮ್ಮೆಲ್ಲರಿಗೂ ನೆನಪಿದೆ.

೪. ಸಾಮೂಹಿಕ ನಾಮಜಪ

೪ ಅ. ಸಾಮೂಹಿಕ ನಾಮಜಪದಿಂದ ಸಾಂಘಿಕಭಾವನೆ ಮತ್ತು ಕೌಟುಂಬಿಕ ಭಾವನೆ ನಿರ್ಮಾಣವಾಗುವುದು : ಆ ಅವಧಿಯಲ್ಲಿ ಸಾಧಕರಿಗೆ ಸಾಮೂಹಿಕ ನಾಮಜಪ ಮಾಡಲು ಹೇಳಲಾಗಿತ್ತು. ಶಾಲೆ ಮತ್ತು ಕೆಲಸದಿಂದಾಗಿ ಅನೇಕರಿಗೆ ಹಗಲಿನಲ್ಲಿ ನಾಮಜಪ ಮಾಡಲು ಸಮಯ ಸಿಗುತ್ತಿರಲಿಲ್ಲ. ಇಂತಹ ಸಾಧಕರು ಬೆಳಗಿನಜಾವ ೫-೬ ಗಂಟೆಗೆ ಯಾವುದಾದರೂ ಶಾಲೆ, ದೇವಾಲಯ ಅಥವಾ ಒಂದು ಕೋಣೆಯಲ್ಲಿ ಸೇರಿ ಸಾಮೂಹಿಕ ನಾಮಜಪ ಮಾಡುತ್ತಿದ್ದರು. ಈ ರೀತಿ ಗುರುದೇವರು ನಮ್ಮೆಲ್ಲರಲ್ಲಿ ಒಂದು ರೀತಿಯಲ್ಲಿ ಸಾಂಘಿಕಭಾವನೆ ಮತ್ತು ಕೌಟುಂಬಿಕ ಭಾವನೆಯನ್ನು ನಿರ್ಮಿಸಿದರು.

೫. ಶ್ರದ್ಧೆ

ಆ ಸಾಧಕರಿಗೆ ಗುರುದೇವರ ಮೇಲೆ ಎಷ್ಟೊಂದು ಶ್ರದ್ಧೆಯಿದೆ ಎಂದರೆ, ಇಂದಿಗೂ ಆ ಸಾಧಕರು ಸನಾತನದ ಮಾರ್ಗದರ್ಶನದ ಪ್ರಕಾರ ಕೇವಲ ಸಾಧನೆ ಮಾತ್ರವಲ್ಲ, ಸೇವೆಯನ್ನೂ ಮಾಡುತ್ತಿದ್ದಾರೆ. ಇಂದಿಗೂ ಕೆಲವು ಸಾಧಕರು ವಯಸ್ಸಾದರೂ ಜವಾಬ್ದಾರಿ ವಹಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ಇಂತಹ ಸಾಧಕರು ಪ್ರತಿಯೊಂದು ಜಿಲ್ಲೆಯಲ್ಲಿಯೂ ಖಂಡಿತವಾಗಿಯೂ ಸಿಗುತ್ತಾರೆ, ಇದರಲ್ಲಿ ಯಾವುದೇ ಸಂದೇಹವಿಲ್ಲ.

೬. ಪ್ರಸಿದ್ಧಿ

ಆ ಸಮಯದಲ್ಲಿ ಕ್ರಮೇಣ ಪ್ರಸಾರ ಹೆಚ್ಚಾದ ಮೇಲೆ ಒಂದು ದಿನ, ಸನಾತನದ ಕಾರ್ಯದ ಬಗ್ಗೆ ಒಂದು ಲೇಖನ ಹೊರಗಿನ ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಯಿತು. ಆಗ ನಮ್ಮ ಆನಂದಕ್ಕೆ ಮಿತಿಯೇ ಇರಲಿಲ್ಲ. ಈಗ ಸನಾತನದ ಕಾರ್ಯದ ಬಗ್ಗೆ ಇತರ ಅನೇಕ ಪತ್ರಿಕೆಗಳಲ್ಲಿಯೂ ಲೇಖನಗಳು ಬರುತ್ತಿರುವುದರಿಂದ ಸನಾತನ ಸಂಸ್ಥೆಯ ಪ್ರಸಿದ್ಧಿ ದಿನೇ ದಿನೇ ಹೆಚ್ಚುತ್ತಿದೆ.
೭. ಗುರುದೇವರು ಸಾಧಕರನ್ನು ರೂಪಿಸಿದ್ದರಿಂದಲೇ ಜನರು ಸಾಧಕರನ್ನು ‘ಸನಾತನದವರು’ ಎಂದು ಗುರುತಿಸುವುದು
ಗುರುದೇವರು ಸಾಧಕರನ್ನು ಎಷ್ಟೊಂದು ಉತ್ತಮವಾಗಿ ರೂಪಿಸಿದ್ದಾರೆಂದರೆ, ಸಾಮಾನ್ಯ ಜನರು ಕೂಡ ಸಾಧಕರನ್ನು ಬಸ್, ಅಂಗಡಿ ಮುಂತಾದ ಸ್ಥಳಗಳಲ್ಲಿಯೂ ಗುರುತಿಸುತ್ತಿದ್ದರು. ಮೊದಲ
ಬಾರಿಗೆ ಭೇಟಿಯಾದ ವ್ಯಕ್ತಿಯೂ, ‘ನೀವು ‘ಸನಾತನದವರು’ ಅಲ್ಲವೆ ?’ ಎಂದು ಕೇಳುತ್ತಿದ್ದರು. ಇದರಿಂದ ‘ಗುರುದೇವರು ಸಾಧಕರನ್ನು ಅಮೂಲ್ಯವಾಗಿ ರೂಪಿಸಿದ್ದಾರೆ’ ಎಂಬುದು ತಿಳಿಯುತ್ತದೆ.
೮. ಗುರುದೇವರು ನೀಡಿದ ದೃಷ್ಟಿಕೋನ ಮತ್ತು
ಅವರ ಅಂತಃಪ್ರೇರಣೆಯಿಂದಲೇ ಸಾಧಕರು ಪೂರ್ಣ ಸಮಯ ಸಾಧನೆಯಲ್ಲಿ ತೊಡಗಿಸಿಕೊಳ್ಳುವುದು
೮ ಅ. ಆಧ್ಯಾತ್ಮಿಕ ಮಾರ್ಗಕ್ಕೆ ಸೇರುವುದರಿಂದ ಜೀವನ ಸಾರ್ಥಕವಾಗುವುದು : ‘ನಾನು ಆಧ್ಯಾತ್ಮಿಕ ಮಾರ್ಗಕ್ಕೆ ಸೇರಿದ್ದ ರಿಂದಲೇ ನನ್ನ ಜೀವನ ಸಾರ್ಥಕವಾಯಿತು. ನಾನು ಸನಾತನದ ಮೂಲಕ ಸಾಧನೆ ಮಾಡುವಾಗ ಆರಂಭದಲ್ಲಿ ಜನರು ನನಗೆ, ‘ಸನಾತನಕ್ಕೆ ಹೋಗಬೇಡ, ಏನಾದರೂ ಕೆಲಸ ಮಾಡು, ನೀನು ನಿನ್ನ ಸ್ವಂತ ಕಾಲ ಮೇಲೆ ನಿಲ್ಲು’ ಎಂದು ಹೇಳುತ್ತಿದ್ದರು.’
೮ ಆ. ಅನೇಕ ಸಾಧಕರು ಪೂರ್ಣ ಸಮಯ ಸಾಧನೆ ಮಾಡುವ ನಿರ್ಧಾರ ಮಾಡುವುದು : ಗುರುದೇವರ ಮಾರ್ಗದರ್ಶನ ಮತ್ತು
ಪ್ರೀತಿಯಿಂದಾಗಿ ಶ್ರೀಮಂತ ವರ್ಗದ ಕೆಲವು ಜನರು (ಇಂಜಿನಿಯರ್,
ವೈದ್ಯರು, ಪ್ರೊಫೆಸರ್‌ಗಳು ಇತ್ಯಾದಿ) ಪೂರ್ಣ ಸಮಯ ಸಾಧನೆ ಮಾಡಲು ಪ್ರಾರಂಭಿಸಿದರು. ಕೆಲವರು ಮನೆಯ ತೊಂದರೆಗಳನ್ನು ದೇವರ ಮೇಲೆ ಬಿಟ್ಟು, ಮತ್ತೆ ಕೆಲವು ಕುಟುಂಬಗಳು ಮನೆ ಮಾರು ಬಿಟ್ಟು ಪೂರ್ಣ ಸಮಯ ಸಾಧನೆ ಮಾಡಲು ಪ್ರಾರಂಭಿಸಿದರು. ಇದರ ಹಿಂದಿನ ಕಾರಣ ಕೇವಲ ಮತ್ತು ಕೇವಲ ಗುರುದೇವರು ನೀಡಿದ ದೃಷ್ಟಿಕೋನ ಮತ್ತು ಅವರ ಅಂತಃಪ್ರೇರಣೆ !
ಅನೇಕ ಸಾಧಕರು ಇಂದು ಸಂತ ಮತ್ತು ಸದ್ಗುರು ಸ್ಥಾನದಲ್ಲಿದ್ದಾರೆ ಮತ್ತೆ ಕೆಲವು ಸಾಧಕರು ಆ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಅನೇಕ ಸಾಧಕರು ಇಂದಿಗೂ ಗುರುದೇವರ ಮೇಲಿನ ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದಾರೆ. ಸಾಧಕರು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.
ನೆನಪಿನಲ್ಲಿರುವ ಕೆಲವು ವಿಷಯಗಳನ್ನು ಮಾತ್ರ ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ. ಎಲ್ಲ ಸಾಧಕರ ಅನುಭವಗಳನ್ನು ಬರೆಯುತ್ತಾ ಹೋದರೆ ಅದು ಒಂದು ಗ್ರಂಥವಾಗಬಹುದು. ಗುರುಗಳ ಮಹತ್ವವನ್ನು ಬರೆಯಲು ಇಡೀ ಭೂಮಿಯನ್ನೇ ಕಾಗದ ಮಾಡಿದರೂ ಬರೆಯಲು ಸಾಧ್ಯವಿಲ್ಲ.
ಆ ಕಾಲದಲ್ಲಿಯೂ ಸಾಧಕರಿಗೆ ಧೈರ್ಯ ಮತ್ತು ಆನಂದವನ್ನು ನೀಡಿ, ಅವರಿಂದ ಸೇವೆ ಹಾಗೂ ಸಾಧನೆ ಮಾಡಿಸಿಕೊಂಡು ತಾವು
ಮಾತ್ರ ನಾಮರಹಿತವಿರುವ ನಮ್ಮ ಗುರುದೇವರ ಚರಣಗಳಿಗೆ ‘ಕೃತಜ್ಞತೆ’ ಎಂಬ ಶಬ್ದವೂ ಸಾಲದು. ಶಬ್ದಬ್ರಹ್ಮರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಚರಣಗಳಿಗೆ ನಮನಗಳು !’

– ಶ್ರೀ. ಪ್ರಶಾಂತ ಹರಿಹರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೩.೨೦೨೫)