‘ ಆನ್ಲೈನ್ ಮನೀ ಗೇಮಿಂಗ್ ‘ ನಿಯಂತ್ರಣ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತ!

  • ‘ಆನ್ಲೈನ್ ಗೇಮ್ ನಿಯಂತ್ರಣ ಪ್ರಾಧಿಕಾರಣದ’ ಸ್ಥಾಪನೆ ಆಗಲಿದೆ!

  • ‘ಆನ್ಲೈನ್ ಮನಿ ಗೇಮಿಂಗ್’ ಅನ್ನು ನಿಷೇಧಿಸಿ ಆನ್ಲೈನ್ ಸೋಶಿಯಲ್ ಗೇಮ್ಸ್ ಗೆ ಪ್ರೋತ್ಸಾಹ

  • ‘ಸುರಾಜ್ಯ ಅಭಿಯಾನ’ ದಿಂದ ವಿವಿಧ ರಾಜ್ಯದ ಮುಖ್ಯಮಂತ್ರಿಗಳಿಗೆ ಆಗ್ರಹ!

ನವದೆಹಲಿ – ಆನ್ಲೈನ್ ಗೇಮಿಂಗ್ ಅನ್ನು ನಿಯಂತ್ರಿಸುವ ಒಂದು ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಈ ವಿಧೇಯಕದ ಉದ್ದೇಶ ಆನ್ಲೈನ್ ಗೇಮಿಂಗ್ ವೇದಿಕೆಗಳನ್ನು ಕಾನೂನಿನ ಪರಿಧಿಗೆ ತರುವುದು ಮತ್ತು ‘ ಡಿಜಿಟಲ್ ಆಪ್ಸ್ ‘ ಮೂಲಕ ಜೂಜು ಆಡುವವರಿಗೆ ದಂಡ ವಿಧಿಸುವ ವ್ಯವಸ್ಥೆ ಮಾಡುವುದಾಗಿದೆ. ಪ್ರಸ್ತಾವಿತ ಕಾನೂನಿನಲ್ಲಿ ವಂಚನೆ ಮತ್ತು ರಾಜ್ಯದ ಕಾನೂನಗಳಲ್ಲಿನ ವಿರೋಧಭಾಸ ಇದರ ಬಗ್ಗೆ ಚಿಂತೆ ವ್ಯಕ್ತಪಡಿಸಲಾಗಿದ್ದು ದಂಡ ಮತ್ತು ಶಿಕ್ಷೆ ಇದರ ವ್ಯವಸ್ಥೆ ಮಾಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇವುಗಳಿಗೆ ಆನ್ಲೈನ್ ಗೇಮಿಂಗ್ ಗಾಗಿ ಕೇಂದ್ರ ನಿಯಂತ್ರಕರೆಂದು ನೇಮಿಸಬಹುದು. ಈ ವಿಧೇಯಕದ ಉದ್ದೇಶ ಆನ್ಲೈನ್ ಜೂಜುಗಳ ಮೇಲೆ ಕೂಡ ಅಂಕುಶ ಹಾಕಬಹುದೆಂದು ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಅನಧಿಕೃತ ಜೂಜಿಗಾಗಿ ದಂಡ ಮತ್ತು ೭ ವರ್ಷದ ಶಿಕ್ಷೆಯ ವ್ಯವಸ್ಥೆ ಇದೆ. ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮ ಆಗಿರುವ ‘ಸುರಾಜ್ಯ ಅಭಿಯಾನ ‘ದಿಂದ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ನೀಡಿ ಈ ರೀತಿಯ ಕಾನೂನಿನ ವ್ಯವಸ್ಥೆಗೆ ಆಗ್ರಹಿಸಲಾಗಿತ್ತು. ಸುರಾಜ್ಯ ಅಭಿಯಾನದ ವತಿಯಿಂದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಇದೆ ತಿಂಗಳಲ್ಲಿ ಮನವಿಗಳನ್ನು ಕೂಡ ನೀಡಲಾಗಿದ್ದವು.

೩ ವರ್ಷದ ಜೈಲು ಶಿಕ್ಷೆ ಮತ್ತು ೧ ಕೋಟೆ ರೂಪಾಯಿ ದಂಡ !

ವಿಧೇಯಕ ‘ ಈ ಸ್ಪೋರ್ಟ್ಸ್ ‘ ಮತ್ತು ‘ ಆನ್ಲೈನ್ ಸೋಶಿಯಲ್ ಗೇಮ್ಸ್ ‘ ಯುಗಳಿಗೆ ಪ್ರೋತ್ಸಾಹ ನೀಡಲು ಕರೆ ನೀಡುತ್ತದೆ.’ ಈ ಸ್ಪೋರ್ಟ್ಸ್ ‘ ಗೆ ಔಪಚಾರಿಕ ಮಾನ್ಯತೆ ದೊರೆತರೆ ಭಾರತ ಅಂತರಾಷ್ಟ್ರೀಯ ಸ್ಪರ್ಧಾತ್ಮಕ ಗೇಮಿಂಗ್ ಕ್ಷೇತ್ರದಲ್ಲಿ ಸಹಭಾಗಿ ಆಗಬಹುದು. ಇದರಿಂದ ನೂತನ ನಿರ್ಮಿತಿಗೆ ಚಾಲನೆ ದೊರೆಯುವುದು, ‘ ಸ್ಟಾರ್ಟ ಅಪ್ಸ್ ‘ಗಾಗಿ (ನೂತನ ವ್ಯವಸಾಯ ಆರಂಭಿಸುವವರಿಗಾಗಿ) ಅವಕಾಶ ನಿರ್ಮಾಣವಾಗುವುದು, ಮತ್ತು ದೇಶಕ್ಕೆ ಕ್ರೀಡೆಗಳ ಅಭಿವೃದ್ಧಿಯ ಮೂಲಕ ಅಂತರಾಷ್ಟ್ರೀಯ ದಿಗ್ಗಜವಾಗಲು ಸಹಾಯವಾಗುವುದು.

ಶಿಕ್ಷೆಯ ವ್ಯವಸ್ಥೆ ಏನಿದೆ ಎಂಬುದನ್ನು ತಿಳಿದುಕೊಳ್ಳಿ!

ವಿಧೇಯಕದಲ್ಲಿರುವ ವ್ಯವಸ್ಥೆ:

೧. ಸೇವಾ ಪೂರೈಕೆ: ನಿಯಮಗಳನ್ನು ಉಲ್ಲಂಘಿಸಿ ಆನ್ಲೈನ್ ಮನಿ ಗೇಮಿಂಗ್ ಸೇವೆ ಪೂರೈಸುವವರಿಗೆ ಕೂಡ ೩ ವರ್ಷದ ಜೈಲು ಶಿಕ್ಷೆ ಮತ್ತು ೧ ಕೋಟಿ ರೂಪಾಯಿ ದಂಡ ಅಥವಾ ಎರಡು ವಿಧಿಸಲಾಗುವುದು.

೨. ಜಾಹೀರಾತು ಮಾಡುವುದು: ನಿಯಮಗಳನ್ನು ಉಲ್ಲಂಘಿಸಿ ಜಾಹೀರಾತುಗಳನ್ನು ಮಾಡುವವರಿಗು ಕೂಡ ೨ ವರ್ಷಗಳವರೆಗೆ ಜೈಲುವಾಸ ಮತ್ತು ೫೦ ಲಕ್ಷ ರೂಪಾಯಿ ದಂಡ ಅಥವಾ ಎರಡು ವಿಧಿಸಲಾಗುವುದು .

೩. ವ್ಯವಹಾರದಲ್ಲಿ ಸಹಭಾಗ: ಯಾವುದೇ ರೀತಿಯಿಂದ ವ್ಯವಹಾರದಲ್ಲಿ ಸಹಭಾಗ ಇರುವವರಿಗೂ ಕೂಡ ೩ ವರ್ಷಗಳ ಜೈಲುವಾಸ ಅಥವಾ ೧ ಕೋಟಿ ರೂಪಾಯಿ ದಂಡ ವಿಧಿಸಬಹುದು.

೪. ಅಪರಾಧದ ಪುನರಾವರ್ತನೆ: ಮೇಲಿಂದ ಮೇಲೆ ಈ ಅಪರಾಧ ಮಾಡುವವರಿಗೆ ೩ ರಿಂದ ೫ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ಭರಿಸುವ ಶಿಕ್ಷೆ ಕೂಡ ಆಗಬಹುದು.

‘ಆನ್ಲೈನ್ ಗೇಮಿಂಗ್’ ಗಾಗಿ ಬ್ಯಾಂಕ್ ಗಳು ಹಣ ಪೂರೈಕೆ ಮಾಡುವಂತಿಲ್ಲ!

ಸಂತ್ರಸ್ತರಿಗೆ ಅನ್ಯಾಯವಾಗಬಾರದೆಂದು ಈ ವಿಧೇಯಕವು ಹಣಕ್ಕೆ ಸಂಬಂಧಿತ ಆನ್ ಲೈನ್ ಗೇಮ್ ಆಡುವ ವ್ಯಕ್ತಿಗಳನ್ನು ಅಪರಾಧಿ ಎಂದು ತಿಳಿಯುವುದಿಲ್ಲ. ಅವರಿಗೆ ಅಪರಾಧಿಗಳನ್ನದೆ ಸಂತ್ರಸ್ತರು ಎಂದು ಹೇಳಲಾಗುವುದು. ಈ ವಿಧೇಯಕವು ಪ್ರಚಾರ ಮಾಡುವವರು ಮತ್ತು ಆಯೋಜಕರ ಮೇಲೆ ನಿಯಂತ್ರಣ ತರುತ್ತದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇಂತಹ ಆಟಗಳಿಗೆ ಹಣ ಪೂರೈಕೆ ಮಾಡುವುದನ್ನು ನಿಷೇಧಿಸಲಾಗಿದೆ.

ವಿಧೇಯಕದ ಉದ್ದೇಶವೇನು?

ಭಾರತದ ಗೇಮಿಂಗ್ ಕ್ಷೇತ್ರವು ವೇಗವಾಗಿ ಬೆಳವಣಿಗೆ ಆಗಿದ್ದರೂ, ನಿಯಂತ್ರಣ ವಾತಾವರಣ ಈಗಲೂ ಅಸ್ಪಷ್ಟವಾಗಿದೆ.’ ಆನ್ಲೈನ್ ಗೇಮ್ಸ್ ‘ ನ ಚಟ, ವಿಶೇಷವಾಗಿ ಆರ್ಥಿಕ ಪ್ರಲೋಭನೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಇವುಗಳ ಚಿಂತೆಯನ್ನು ಹೆಚ್ಚಿಸುತ್ತಿದೆ. ಹಣಕ್ಕೆ ಸಂಬಂಧಿತ ಆನ್ ಲೈನ್ ಗೇಮ್ ಗಳಿಂದ ವ್ಯಕ್ತಿಗಳಿಗೆ ಆರ್ಥಿಕ ನಷ್ಟ ಸಹಿಸಬೇಕಾಗುತ್ತದೆ. ಪರಿಣಾಮವಾಗಿ ಖಿನ್ನತೆ ಮತ್ತು ಆತ್ಮಹತ್ಯೆಯಂತಹ ಘಟನೆಗಳು ಸಂಭವಿಸುತ್ತಿವೆ. ಆನ್ಲೈನ್ ಮನಿ ಗೇಮಿಂಗ್ ಉಪಯೋಗ ಕಪ್ಪು ಹಣವನ್ನು (ಬಿಳಿ ಮಾಡುವುದು) ಚಾಲನೆಗೆ ತರುವುದು, ಹಾಗೂ ಇತರ ಅಕ್ರಮ ಕೃತ್ಯಗಳಿಗಾಗಿ ಕೂಡ ಆಗುತ್ತಿವೆ. ಈ ವಿಧೇಯಕ ಒಂದು ಕಡೆಗೆ ‘ ಈ ಸ್ಪೋರ್ಟ್ಸ್ ‘ ಮತ್ತು ‘ ಆನ್ಲೈನ್ ಸೋಶಿಯಲ್ ಗೇಮ್ಸ್ ‘ ಉದಾಹರಣೆ ‘ ಕ್ಯಾಂಡಿ ಕ್ರಶ್ ‘ ಇವುಗಳಿಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡುತ್ತದೆ, ಹಾಗೂ ಇನ್ನೊಂದೆಡೆಗೆ ಆನ್ಲೈನ್ ಮನಿ ಗೇಮ್ಸ್ ಗೆ ಸ್ಪಷ್ಟವಾಗಿ ನಿಷೇಧ ಹೇರುತ್ತಿದೆ. ಈ ವಿಧೇಯಕ ಪಾಲನೆ ಮತ್ತು ಜವಾಬ್ದಾರಿಗಾಗಿ ಸಂವಿಧಾನಿಕ ನಿಯಮ ಪ್ರಾಧಿಕಾರಣದ ಸ್ಥಾಪನೆ ಮಾಡಲು ಪ್ರಸ್ತಾವನೆ ಮಾಡಿದೆ. ಆನ್ಲೈನ್ ಗೇಮಿಂಗ್ ವೇದಿಕೆಗಾಗಿ ನೋಂದಣಿ ಮತ್ತು ನಿಯಮ ಪಾಲನೆ ವ್ಯವಸ್ಥೆ ಕೂಡ ಇದರಲ್ಲಿದೆ. ನಿಯಂತ್ರಕ ಪ್ರಾಧೀಕರಣಕ್ಕೆ ಯೋಗ್ಯ ಪರಿಶೀಲನೆಯ ನಂತರ ಯಾವುದಾದರೂ ಗೇಮ್ ‘ ಮನಿ ಗೇಮ್ ‘ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವಿರುತ್ತದೆ.

‘ಡ್ರೀಮ್ -೧೧’ ಇಂತಹ ಆಪ್ಸ್ ಗಳ ಮೇಲೆ ಕೂಡ ನಿರ್ಬಂಧ ಬರುವುದೇ?

ಈ ವಿಧೇಯಕದ ನಂತರ ಜನರ ಪ್ರಶ್ನೆ ಏನೆಂದರೆ, ‘ ಡ್ರೀಮ್ – ೧೧’ ನಂತಹ ಆಪ್ಸ್ ಕೂಡ ನಿಷೇಧಿಸಲಾಗುವುದೇ? ಕಾರಣ ಇದರಲ್ಲಿ ಹಣ ಹೂಡಿಕೆ ಮಾಡಿ ಆಟ ಆಡಲಾಗುತ್ತದೆ. ವಿಧೇಯಕದಲ್ಲಿನ ವ್ಯವಸ್ಥೆಯ ಪ್ರಕಾರ ಇಂತಹ ಎಲ್ಲಾ ಆಪ್ಸ್ ಗಳ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಕ್ರಿಕೆಟ್ ಸಹಿತ ಅನೇಕ ಆಟಗಳಿಗಾಗಿ ಇಂತಹ ಆಪ್ಸ್ ಗಳಿವೆ, ಅದರಲ್ಲಿ ಹಣ ಹೂಡಿಕೆ ಸಂಘಗಳನ್ನು ನಿರ್ಮಿಸುತ್ತಾರೆ. ವಿಧೇಯಕದ ಪ್ರಕಾರ ಯಾವುದೇ ರೀತಿಯ ವ್ಯವಹಾರ ನಡೆಸುವ ಆಪ್ಸ್ ಗಳನ್ನು ನಿಷೇಧಿಸಲಾಗುವುದು, ಹಾಗೂ ಜೂಜಿಗೆ ಪ್ರೋತ್ಸಾಹ ನೀಡುವ ಆಪ್ ಗಳನ್ನು ನಿಯಂತ್ರಿಸಲಾಗುವುದು.