ಮುಜಫರ್ ನಗರ (ಉತ್ತರ ಪ್ರದೇಶ)ದಲ್ಲಿ ಮುಸಲ್ಮಾನರು ಹಿಂದೂ ಯುವಕನನ್ನು ಕಳ್ಳನೆಂದು ಭಾವಿಸಿ ಥಳಿಸಿದ್ದರಿಂದ ಸಾವು : Muzaffarnagar Hindu Murder

ಹಿಂದೂ ಯುವಕ ಮೋನು (ಎಡ)

ಮುಜಫರ್ ನಗರ (ಉತ್ತರ ಪ್ರದೇಶ) – ಇಲ್ಲಿನ ಬುಡಾನಾ ಪಟ್ಟಣದ ಕರ್ಬಲಾ ರಸ್ತೆಯಲ್ಲಿ ಮೋನು ಎಂಬ ಹಿಂದೂ ಯುವಕನನ್ನು ಕಳ್ಳನೆಂದು ಭಾವಿಸಿ ಸ್ಥಳೀಯ ಮುಸ್ಲಿಮರು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೋನು ಸಾವನ್ನಪ್ಪಿದ್ದಾನೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ನಂತರ, ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

ಆಗಸ್ಟ್ 17 ರ ತಡರಾತ್ರಿ ಮೋನು ಕುಡಿದ ಅಮಲಿನಲ್ಲಿ ಮುಸ್ಲಿಮರೊಬ್ಬರ ಮನೆಗೆ ನುಗ್ಗಿದ್ದನು. ಈ ವೇಳೆ ಜನರು ಆತನನ್ನು ಹಿಡಿದು ಕಳ್ಳನೆಂದು ಥಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದುಗಳ ಮೇಲೆ ದಾಳಿ ನಡೆಸಲು ಭಾರತ ಅಷ್ಟೇ ಅಲ್ಲದೆ, ಜಗತ್ತಿನಲ್ಲಿ ಎಲ್ಲಾ ಕಡೆಯಲ್ಲಿ ಮುಸ್ಲಿಮರಿಗೆ ಯಾವುದೋ ಒಂದು ಕಾರಣ ಹೇಳಲು ಬರುತ್ತದೆ, ಇದೇ ಅದರ ಒಂದು ಉದಾಹರಣೆ ಆಗಿದೆ !