ದೆಹಲಿಯ ಭಾಜಪ ಸರಕಾರದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ : Delhi CM Attacked

ಆರೋಪಿ ರಾಜೇಶಭಾಯಿ ಖಿಮಜಿಯ ಬಂಧನ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಆರೋಪಿ ರಾಜೇಶ್‌ಭಾಯ್ ಖಿಮ್ಜಿ

ನವದೆಹಲಿ – ಆಗಸ್ಟ್ ೨೦ ರಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿವಾಸದಲ್ಲಿ ಅವರ ಮೇಲೆ ಹಲ್ಲೆ ನಡೆದಿದ್ದು, ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಹಲ್ಲೆ ಮಾಡಿದ ರಾಜೇಶಭಾಯಿ ಖಿಮಜಿ (೪೧ ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತನು ಗುಜರಾತ್‌ನ ರಾಜಕೋಟ್ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಾನೆ. ದೆಹಲಿಯಲ್ಲಿ ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈತ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ.

ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತಮ್ಮ ನಿವಾಸದಲ್ಲಿ ಜನರನ್ನು ಭೇಟಿಯಾಗುತ್ತಿರುವಾಗ ಖಿಮಜಿ ದಿಢೀರನೆ ಅಲ್ಲಿಗೆ ಬಂದಿದ್ದಾನೆ. ಆತ ಮುಖ್ಯಮಂತ್ರಿಯವರ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ಅವರು ಟೇಬಲ್‌ನ ಮೂಲೆಗೆ ತಗಲಿರುವುದರಿಂದ ತಲೆಗೆ ಗಾಯವಾಗಿದೆ.