ಪಾಕಿಸ್ತಾನ ಮತ್ತು ತಾಲಿಬಾನ ನಡುವೆ ಹೆಚ್ಚಿದ ಉದ್ವಿಗ್ನತೆ! : Taliban-Pakistan

ಪಾಕಿಸ್ತಾನದಲ್ಲಿ ತಾಲಿಬಾನ ವಿರೋಧಿ ನಾಯಕರ ಸಭೆ!

ಕಾಬೂಲ (ಅಫ್ಘಾನಿಸ್ತಾನ) – ಪಾಕಿಸ್ತಾನ ಮತ್ತು ತಾಲಿಬಾನ ಆಡಳಿತದ ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಾಗುತ್ತಿದೆ. ಎರಡೂ ಕಡೆಯವರು ಪರಸ್ಪರರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎರಡೂ ದೇಶಗಳ ಗಡಿಯಲ್ಲೂ ಬಿಗುವಿನ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತಾಲಿಬಾನ್ ವಿರೋಧಿ ನಾಯಕರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಪಾಕಿಸ್ತಾನ ಸರಕಾರದ ಬೆಂಬಲವಿದೆ ಎಂದು ತಾಲಿಬಾನ್ ಆರೋಪಿಸಿದೆ. ತಾಲಿಬಾನ್ ಬೆಂಬಲಿಗರು ಪಾಕಿಸ್ತಾನವನ್ನು ಇಸ್ಲಾಂ ಹೆಸರಿಗೆ ‘ಕಳಂಕ’ ಎಂದು ಕರೆದಿದ್ದಾರೆ.

1. ಪಾಕಿಸ್ತಾನದ ‘ಸೌತ್ ಏಷ್ಯನ್ ಸ್ಟ್ರಾಟೆಜಿಕ್ ಸ್ಟೆಬಿಲಿಟಿ ಇನ್ಸ್ಟಿಟ್ಯೂಟ್ ಯೂನಿವರ್ಸಿಟಿ’ ಎಂಬ ತಜ್ಞರ ಮಂಡಳಿಯು ಈ ತಿಂಗಳ ಕೊನೆಯಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ನಾಯಕರ ಸಭೆಯನ್ನು ಏರ್ಪಡಿಸಿದೆ.

2. ಪಾಕಿಸ್ತಾನವು ಸಾಂಪ್ರದಾಯಿಕವಾಗಿ ತಾಲಿಬಾನ್‌ ನ ಬೆಂಬಲಿಗ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಇದುವರೆಗೆ ತಾಲಿಬಾನ್ ವಿರೋಧಿ ಗುಂಪುಗಳೊಂದಿಗೆ ವೈರತ್ವವನ್ನು ಹೊಂದಿತ್ತು; ಆದರೆ ಸಧ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ, ಇದು ಈಗ ತಾಲಿಬಾನ್ ವಿರೋಧಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ.

3. ತಾಲಿಬಾನ್ ಮೇಲೆ ಒತ್ತಡ ಹೇರಿ, ಅದನ್ನು ಪಾಕಿಸ್ತಾನದ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಪಾಕಿಸ್ತಾನದ ಪ್ರಯತ್ನವಾಗಿದೆ. ಇದಕ್ಕಾಗಿ, ತಾಲಿಬಾನ್ ವಿರೋಧಿ ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ್’ ಭಯೋತ್ಪಾದಕ ಸಂಘಟನೆಯೊಂದಿಗೆ ಕೂಡ ಸಂಪರ್ಕ ಸಾಧಿಸಲಾಗುತ್ತಿದೆ.

4. ತಾಲಿಬಾನ್‌ ಗೆ ತೊಂದರೆ ನೀಡಿ, ಭಾರತದ ಹಿತಾಸಕ್ತಿಗಳಿಗೆ ಹಾನಿ ಮಾಡುವುದು ಪಾಕಿಸ್ತಾನದ ತಂತ್ರವಾಗಿದೆ. ಇದಕ್ಕೆ ಕಾರಣವೇನೆಂದರೆ, ಇಂದು ತಾಲಿಬಾನ್ ಭಾರತಕ್ಕೆ ಹತ್ತಿರವಾಗಿದೆ.

5. ತಾಲಿಬಾನ್ ವಿರೋಧಿ ನಾಯಕರಲ್ಲಿ ಯೂನಿಸ್ ಕಾನೂನಿ, ಮಹಮ್ಮದ್ ಮೊಹಕಿಕ್, ಅತ್ತಾ ಮಹಮ್ಮದ್ ನೂರ್, ಸಲಾಹುದ್ದೀನ್ ರಬ್ಬಾನಿ ಇವರು ಸೇರಿದ್ದಾರೆ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ನೆರೆಯ ರಾಷ್ಟ್ರಗಳನ್ನು ಅಸ್ಥಿರಗೊಳಿಸುವುದು ಪಾಕಿಸ್ತಾನದ ಹಳೆಯ ಚಾಳಿಯಾಗಿದೆ. ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ, ಇಂದು ಅದು ಹಸಿವಿನಿಂದ ಕಂಗಾಲಾಗಿದೆ. ಭಿಕ್ಷುಕ ದೇಶವು ತನ್ನೊಂದಿಗೆ ಇತರ ದೇಶಗಳನ್ನು ಮುಳುಗಿಸುವುದು. ಇದು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಹೇಳಿಕೆಯ ಭಾಗವಾಗಿ ಈ ಸಭೆಯಾಗಿದೆಯೇ?