ತಾನು ‘ರಾಹುಲ್ ಶರ್ಮಾ’ ಎಂದು ಹೇಳಿ ಹಿಂದೂ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿದ ಮೊಹ್ಸಿನ್

  • ಮಧ್ಯಪ್ರದೇಶ: ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ

  • ಬಲಾತ್ಕಾರ ಮಾಡಿ ಮತಾಂತರಕ್ಕಾಗಿ ಒತ್ತಡ.

ಭೋಪಾಲ – ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಇಛಾವರದಲ್ಲಿ ನಡೆದ ‘ಲವ್ ಜಿಹಾದ್’ ಘಟನೆಯು ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಮೊಹ್ಸಿನ್ ಎಂಬ ಮುಸ್ಲಿಂ ವ್ಯಕ್ತಿ ‘ರಾಹುಲ್ ಶರ್ಮಾ’ ಎಂಬ ಹೆಸರನ್ನು ಹೇಳಿಕೊಂಡು 23 ವರ್ಷದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಕೆಡವಿದ್ದಾನೆ. ಮೊಹ್ಸಿನ್ ಆ ಯುವತಿಗೆ ಮದುವೆಯ ಆಮಿಷವೊಡ್ಡಿ ದೈಹಿಕ ಸಂಬಂಧ ಇಟ್ಟುಕೊಂಡಿದ್ದನು. ನಂತರ ಅವನ ನಿಜವಾದ ಗುರುತು ಬಯಲಾದಾಗ, ಮೊಹ್ಸಿನ್ ಆ ಯುವತಿಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದನು. ಸಂತ್ರಸ್ತ ಯುವತಿ ಧೈರ್ಯ ಮಾಡಿ ಸೀಹೋರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿ ಮೊಹ್ಸಿನ್‌ ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

1. ಈ ಘಟನೆಯ ನಂತರ ಇಛಾವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಆಗಸ್ಟ್ 17 ರಂದು ಪಟ್ಟಣ ಬಂದ್‌ ಗೆ ಕರೆ ನೀಡಿದ್ದವು.

2. ಸ್ಥಳೀಯ ಜನರು ಮೊಹ್ಸಿನ್‌ ನ ಆಸ್ತಿಯ ಮೇಲೆ ಬುಲ್ಡೋಜರ್ ಚಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

3. ಪೊಲೀಸ್ ಅಧಿಕಾರಿ ರವೀಂದ್ರ ಯಾದವ್ ಅವರು, ಸಂತ್ರಸ್ತ ಹಿಂದೂ ಯುವತಿ ಆರೋಪಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಆದ್ದರಿಂದ ತನಿಖೆಯಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಲ್ಲಿದ್ದರೂ, ಅಲ್ಲಿನ ಮತಾಂಧರು ಇಂತಹ ಕೃತ್ಯಗಳನ್ನು ಎಸಗಲು ಧೈರ್ಯ ಮಾಡುತ್ತಿದ್ದಾರೆ, ಇದರರ್ಥ ಈ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.