
‘ಸಾಧನೆ ಮಾಡುವಾಗ ಚಿತ್ತ ಶುದ್ಧಿಯು ಮಹತ್ವದ್ದಾಗಿದೆ. ಆದ್ದರಿಂದ ನೀವು ಯಾವ ಸಾಧನೆ ಮಾಡುತ್ತೀರಿ, ಎನ್ನುವುದಕ್ಕಿಂತ ಆದು ಹೇಗೆ ಮಾಡುತ್ತಿರಿ, ಎನ್ನುವುದು ಮಹತ್ವದ್ದಾಗುತ್ತದೆ. ಹಾಗಾಗಿ ಒಬ್ಬರಿಗೆ ದೇವರ ಹೆಸರೂ ಇಷ್ಟವಾಗದಿದ್ದರೆ, ಅವನು ಮೊದಲ ಹಂತದಲ್ಲಿ ಬೇರೆ ಯಾವುದೇ ನಾಮ ತೆಗೆದುಕೊಳ್ಳಬಹುದು. ಬೇಡ ರತ್ನಾಕರನು ‘ಮರಾ’ ‘ಮರಾ’ ಎಂದು ಜಪ ಮಾಡಿ ಮಹರ್ಷಿ ವಾಲ್ಮಿಕಿಯಾದದ್ದು, ಇದಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಮುಂದಿನ ಪೀಳಿಗೆಯ ಧಾವಂತದ ಜೀವನವನ್ನು ಗುರುತಿಸಿ ಅವರಿಗಾಗಿ ಕಾರ್ಯನಿರತರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
‘ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಆದ್ದರಿಂದ ಕಳೆದ ೪ ದಶಕಗಳಿಂದ ನಾನು ವಿವಿಧ ಆಧ್ಯಾತ್ಮಿಕ ಗ್ರಂಥಗಳನ್ನು ಓದಿ ಜಿಜ್ಞಾಸುಗಳಿಗೆ ಅವಶ್ಯಕವಿರುವ ಜ್ಞಾನವನ್ನು ಸಂಗ್ರಹಿಸಿದ್ದೇನೆ. ಸುಮಾರು ೫೦೦೦ ಗ್ರಂಥಗಳಾಗುವಷ್ಟು ಜ್ಞಾನವನ್ನು ಸಂಗ್ರಹಿಸಲಾಗಿದೆ. ಆದ್ದರಿಂದ ನನ್ನ ಮುಂದಿನ ಪೀಳಿಗೆಯು ಈ ಸಂಗ್ರಹಿಸಿದ ಜ್ಞಾನದ ಗ್ರಂಥಗಳನ್ನು ಪ್ರಕಟಿಸುವುದರಲ್ಲಿ ನಿರತರಾಗಿರುತ್ತದೆ. ಅವರಿಗೆ ಇತರ ಗ್ರಂಥಗಳಲ್ಲಿ ಜ್ಞಾನವನ್ನು ಹುಡುಕಿ ಸಂಗ್ರಹಿಸಲು ಸಮಯ ಸಿಗುವುದಿಲ್ಲ. ಆದ್ದರಿಂದ ನಾನು ಆಧ್ಯಾತ್ಮಿಕ ವಿಷಯಗಳ ಗ್ರಂಥಗಳನ್ನು ಓದಿ ಅದರಲ್ಲಿನ ಅವಶ್ಯಕವಿರುವ ಜ್ಞಾನವನ್ನು ಆಯ್ಕೆ ಮಾಡಿಡಲು ಆದ್ಯತೆ ನೀಡುತ್ತಿದ್ದೇನೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !