‘ಆರ್‌.ಎಸ್.ಎಸ್. ‘ಭಾರತೀಯ ತಾಲಿಬಾನ್’!’ – ಕಾಂಗ್ರೆಸ್ಸಿನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದರಿಂದ ವಿವಾದಾತ್ಮಕ ಹೇಳಿಕೆ

ನವದೆಹಲಿ – ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ನಾನು ಸಂಘವನ್ನು ಕೇವಲ ‘ತಾಲಿಬಾನ್’ಗೆ ಹೋಲಿಸುತ್ತೇನೆ. ಸಂಘವು ‘ಭಾರತೀಯ ತಾಲಿಬಾನ್’ ಆಗಿದೆ ಮತ್ತು ಪ್ರಧಾನಿ ಕೆಂಪು ಕೋಟೆಯಿಂದ ಸಂಘವನ್ನು ಹೊಗಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮಾಜಿ ಸಂಸದ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ. ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷಗಳು ಪೂರ್ಣಗೊಂಡಿವೆ’ ಈ ನಿಮಿತ್ತ ಅಭಿನಂದಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಹರಿಪ್ರಸಾದ್ ಈ ಮೇಲಿನ ಟೀಕೆ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಸಂಘದ ಯಾವುದೇ ಕೊಡುಗೆ ಇಲ್ಲ! – ಹರಿಪ್ರಸಾದ

1. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವನಾದರೂ ‘ಸಂಘಿ’ (ಸಂಘದವರು) ಇದ್ದರಾ? ಸಂಘವು ನೋಂದಾಯಿತ ಸಂಘಟನೆಯಲ್ಲದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಅವರಿಗೆ ಹಣ ಎಲ್ಲಿಂದ ಸಿಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಭಾಜಪ ಮತ್ತು ಸಂಘವು ಇತಿಹಾಸವನ್ನು ವಿರೂಪಗೊಳಿಸುವುದರಲ್ಲಿ ಪರಿಣತರಾಗಿದ್ದಾರೆ. (ಭಾಜಪ ಮತ್ತು ಸಂಘವಲ್ಲ, ಬದಲಾಗಿ ಕಾಂಗ್ರೆಸ್ ಇತಿಹಾಸವನ್ನು ವಿರೂಪಗೊಳಿಸಿದ್ದು, ಈಗ ಅದನ್ನು ಸರಿಪಡಿಸಲಾಗುತ್ತಿದೆ! – ಸಂಪಾದಕರು) ಅವರು ಇತಿಹಾಸವನ್ನು ಮತ್ತೆ ಬರೆಯಲು ಪ್ರಯತ್ನಿಸುತ್ತಿದ್ದಾರೆ.

2. ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳದ ಪ್ರಧಾನಿಯಾಗಿದ್ದ ಎ.ಕೆ. ಫಜಲುಲ್ ಹಕ್ ಮತ್ತು ಸಂಘದ ಚಿಂತಕ ಶ್ಯಾಮಪ್ರಸಾದ ಮುಖರ್ಜಿ ಅವರು ಬಂಗಾಳದ ವಿಭಜನೆಯ ಪ್ರಸ್ತಾವನೆಯನ್ನು ಮೊದಲು ಮಂಡಿಸಿದರು. ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರಕರ ಅವರು ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಅಗತ್ಯ ಎಂದು ನಂಬಿದ್ದರು. (‘ನಂಬುವಂತೆ ಸುಳ್ಳು ಹೇಳಿ ಎಂಬ ವೃತ್ತಿಯ ಕಾಂಗ್ರೆಸ್ಸಿಗರು! ವಿಭಜನೆಯ ಅಪರಾಧಿಗಳು ಯಾರು ಎಂದು ಇಡೀ ಜಗತ್ತಿಗೆ ತಿಳಿದಿದೆ. ಕಾಂಗ್ರೆಸ್ಸಿಗರು ಎಷ್ಟೇ ಸುಳ್ಳು ಹರಡಲು ಪ್ರಯತ್ನಿಸಿದರೂ, ಅವರಿಗೆ ಅದರಿಂದ ಯಾವುದೇ ಲಾಭವಾಗುವುದಿಲ್ಲ! – ಸಂಪಾದಕರು) ಆದರೆ ಈಗ ಮಾತ್ರ ಭಾಜಪದವರು ಇದಕ್ಕಾಗಿ ಕಾಂಗ್ರೆಸ್ ಅನ್ನು ದೂಷಿಸುತ್ತಿದ್ದಾರೆ.

ಕಾಂಗ್ರೆಸ್‌ನ ‘ತಾಲಿಬಾನ್’ ಮಾನಸಿಕತೆ! – ಭಾಜಪ

ಬಿ.ಕೆ. ಹರಿಪ್ರಸಾದ ಅವರಿಗೆ ಉತ್ತರ ನೀಡಿದ ಭಾಜಪ ವಕ್ತಾರ ಶೆಹಜಾದ ಪೂನಾವಾಲಾ, ‘ಕಾಂಗ್ರೆಸ್ಸಿನದು ‘ತಾಲಿಬಾನ್’ ಮಾನಸಿಕತೆ’ ಎಂದು ಹೇಳಿದ್ದಾರೆ. ಮ. ಗಾಂಧಿ ಮತ್ತು ಜಯಪ್ರಕಾಶ ನಾರಾಯಣ ಅವರು ಸಂಘವನ್ನು ಏಕೆ ಹೊಗಳಿದರು? ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ ಮುಖರ್ಜಿ ಅವರು ಸಂಘದ ಕೇಂದ್ರ ಕಚೇರಿಗೆ ಏಕೆ ಭೇಟಿ ನೀಡಿದರು?’ ಎಂದು ಅವರು ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

  • ರಾಷ್ಟ್ರೀಯ ಸ್ವಯಂ ಸೇವಕ ಸಂಘ ‘ತಾಲಿಬಾನ್’ ಆಗಿದ್ದರೆ, ಈ ದೇಶದಲ್ಲಿ ಒಬ್ಬರಾದರೂ ಹಿಂದೂ ವಿರೋಧಿ ವ್ಯಕ್ತಿ ಮತ್ತು ಅನ್ಯ ಧರ್ಮದವರು ಬದುಕುಳಿಯುತ್ತಿದ್ದರೇ? ಬಿ.ಕೆ. ಹರಿಪ್ರಸಾದ ಇಂತಹ ಟೀಕೆಗಳನ್ನು ಮಾಡಲು ಸಾಧ್ಯವಾಗುತ್ತಿತ್ತೇ?
  • ಬಿ.ಕೆ. ಹರಿಪ್ರಸಾದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಲ್ಲಿ ಒಬ್ಬ ‘ಹಿಂದೂ’ ಆಗಿ ಬದುಕಲು ಸಾಧ್ಯವೇ? ಎಂಬುದನ್ನು ಅವರು ಮೊದಲು ಹೇಳಬೇಕು!