ರಾಜ್ಯದಲ್ಲಿ 45 ಸಾವಿರ ಮಂಟಪಗಳಿದ್ದು, 500 ಕೋಟಿ ರೂ. ಖರ್ಚಾಗಲಿದೆ!

ಕೋಲಕಾತಾ (ಬಂಗಾಳ) – ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಆಚರಿಸುವಂತೆಯೇ, ಬಂಗಾಳದಲ್ಲಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಆಚರಣೆಗಾಗಿ ಮಂಟಪಗಳನ್ನು ಸ್ಥಾಪಿಸುವವರಿಗೆ ಪಶ್ಚಿಮ ಬಂಗಾಳ ಸರಕಾರ ಪ್ರತಿ ವರ್ಷ ಅನುದಾನ ನೀಡುತ್ತದೆ. ಈ ವರ್ಷ ತೃಣಮೂಲ ಕಾಂಗ್ರೆಸ್ ಅದನ್ನು ಹೆಚ್ಚಿಸಿದೆ. ಈ ಬಾರಿ ಸರಕಾರ ಪ್ರತಿ ಮಂಟಪಕ್ಕೆ 1 ಲಕ್ಷ 10 ಸಾವಿರ ರೂ. ಅನುದಾನ ನೀಡುತ್ತಿದೆ. ಕಳೆದ ವರ್ಷ 85 ಸಾವಿರ ರೂ.ಗಳನ್ನು ನೀಡಲಾಗಿತ್ತು. ಇದಕ್ಕಾಗಿ ಸರಕಾರ ಸುಮಾರು 500 ಕೋಟಿ ರೂ. ವೆಚ್ಚ ಮಾಡುತ್ತಿದೆ.
1. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2018 ರಲ್ಲಿ ಮಂಟಪಗಳಿಗೆ ಅನುದಾನ ನೀಡುವುದನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ 28 ಸಾವಿರ ಮಂಟಪಗಳಿಗೆ ತಲಾ 10 ಸಾವಿರ ರೂ. ನೀಡಲಾಗಿತ್ತು. ಈ ಬಾರಿ ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ಮಂಟಪಗಳಿವೆ, ಅಂದರೆ 11 ಪಟ್ಟು ಹೆಚ್ಚಳವಾಗಿದೆ.
2. ಸರಕಾರಿ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಈ 10 ದಿನಗಳಲ್ಲಿ 80 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿತ್ತು. ಈ ಬಾರಿ ಎಲ್ಲಾ ವಸ್ತುಗಳ ಬೆಲೆಗಳು ಮತ್ತು ಮಂಟಪಗಳ ಸಂಖ್ಯೆ ಹೆಚ್ಚಿರುವುದರಿಂದ 1 ಲಕ್ಷ ಕೋಟಿ ರೂ. ತಲುಪಬಹುದು.
ರಾಜಕೀಯ ಲಾಭ ಪಡೆಯುವ ಸರಕಾರದ ಪ್ರಯತ್ನ! – ಭಾಜಪ ಆರೋಪ

ಭಾಜಪ ವಕ್ತಾರ ಸಜಲ್ ಘೋಷ ಮಾತನಾಡಿ, “ನಾವು ತೃಣಮೂಲ ಸರಕಾರದಿಂದ ಅನುದಾನ ಪಡೆಯುವುದಿಲ್ಲ; ಏಕೆಂದರೆ ಸರಕಾರವು ಅವುಗಳನ್ನು ತನ್ನ ಸ್ವಂತ ಪ್ರಚಾರಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡಿದೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳಿವೆ; ಅದಕ್ಕಾಗಿಯೇ ಮಮತಾ ಬ್ಯಾನರ್ಜಿ ಸರಕಾರವು 25 ಸಾವಿರ ರೂ.ಗಳ ಹೆಚ್ಚುವರಿ ಅನುದಾನ ನೀಡುತ್ತಿದೆ” ಎಂದು ಹೇಳಿದರು.
ವಿಧಾನಸಭೆಯ ಸ್ಪೀಕರ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಬಿಮನ್ ಬ್ಯಾನರ್ಜಿಯವರು, “ಸರಕಾರ ಯಾವುದೇ ರಾಜಕೀಯ ತಾರತಮ್ಯ ಮಾಡುವುದಿಲ್ಲ. ಕೋಲಕಾತಾದಲ್ಲಿ 4-5 ದೊಡ್ಡ ಭಾಜಪ ಬೆಂಬಲಿತ ಮಂಟಪಗಳಿವೆ; ಆದರೆ ಸರಕಾರ ಅವರಿಗೂ ಅನುದಾನ ನೀಡುತ್ತದೆ” ಎಂದು ಹೇಳಿದರು.
ಸಂಪಾದಕೀಯ ನಿಲುವುಮಮತಾ ಬ್ಯಾನರ್ಜಿ ಈ ರೀತಿಯ ಅನುದಾನ ನೀಡಿ ಹಿಂದೂಗಳನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ; ಆದರೆ ಹಿಂದೂಗಳು ಅವರ ಈ ಆಮಿಷಕ್ಕೆ ಒಳಗಾಗಬಾರದು; ಏಕೆಂದರೆ ಅವರ ಒಟ್ಟಾರೆ ಆಡಳಿತ ಹಿಂದೂ ವಿರೋಧಿ ಮತ್ತು ಹಿಂದೂಗಳಿಗೆ ಹಾನಿ ಮಾಡುವಂತಹದ್ದಾಗಿದೆ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!