ಮತಾಂತರದ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆಟ್ರಸ್ಟ್ನ ಮೇಲೆ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ |

ಸತಾರಾ, ೧೬ ಆಗಸ್ಟ್ (ವರದಿ) – ‘ದಕ್ಷಿಣ ಕಾಶಿ’ ಎಂದು ಕರೆಯಲ್ಪಡುವ ಮಹಾರಾಷ್ಟ್ರದ ಕ್ಷೇತ್ರಮಹುಲಿಯಲ್ಲಿ ‘ಅಟ್ ಬೆಥಾನಿ ಟ್ರಸ್ಟ್’ ಮತಾಂತರದಲ್ಲಿ ತೊಡಗಿದೆ. ಇದನ್ನು ಅರಿತುಕೊಂಡ ಗ್ರಾಮಸ್ಥರು ಸಂಘಟಿತರಾಗಿ ಪ್ರತಿಭಟನೆ ನಡೆಸಿ, ಆ ಟ್ರಸ್ಟ್‌ನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಂತೋಷ ಪಾಟೀಲ್ ಅವರಿಗೆ ಮನವಿ ಮಾಡಿದರು. (ಹಿಂದೂ ಧರ್ಮದ ಮೇಲಿನ ದಾಳಿಗಳ ವಿರುದ್ಧ ಸಂಘಟಿತವಾಗಿ ಹೋರಾಡುತ್ತಿರುವ ಕ್ಷೇತ್ರಮಹುಲಿಯ ಜಾಗೃತ ಹಿಂದೂಗಳಿಗೆ ಅಭಿನಂದನೆಗಳು! – ಸಂಪಾದಕರು)
Satara (Maharashtra): Villagers march to District Collector against forced conversions run under the guise of a prayer hall by At Bethany Trust.
Devout Hindus demand strict action & a complete ban on the Trust if found guilty of conversions!#Stopconversion pic.twitter.com/9CbkYtlVzs
— Sanatan Prabhat (@SanatanPrabhat) August 16, 2025
ಈ ಮನವಿಯಲ್ಲಿ,
೧. ಟ್ರಸ್ಟ್ ೦.೮೧ ಹೆಕ್ಟೇರ್ ಜಾಗವನ್ನು ಶರದ್ ಪಾಂಡುರಂಗ ಮಾನೆ ಅವರಿಂದ ಖರೀದಿಸಿದೆ. ಈ ಭೂಮಿ ಖರೀದಿ ಉದ್ದೇಶ ‘ಗ್ರೀನ್ ಹೌಸ್’ ಕಾಮಗಾರಿಗಾಗಿ ಎಂದು ಹೇಳಲಾಗಿದ್ದರೂ, ಅಲ್ಲಿ ಆರ್‌ಸಿ.ಸಿ ಕಟ್ಟಡ ನಿರ್ಮಿಸಲಾಗಿದೆ. (ಮತಾಂತರ ಕೇಂದ್ರವಾಗಿರುವ ಈ ಕಟ್ಟಡವನ್ನು ಕೆಡವಬೇಕು. ಇದಕ್ಕಾಗಿ ಆಡಳಿತ ಮಂಡಳಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದು ಅವಶ್ಯಕ! – ಸಂಪಾದಕರು)
೨. ಈ ಜಾಗವು ಕೃಷಿ ಭೂಮಿಯಾಗಿರುವುದರಿಂದ ಈ ಕಟ್ಟಡ ಅನಧಿಕೃತವಾಗಿದೆ. ಹಾಗೆಯೇ, ‘ಕೃಷಿ ಭೂಮಿಯನ್ನು ಕೇವಲ ರೈತರು ಮಾತ್ರ ಖರೀದಿಸಬಹುದು’ ಎಂಬ ನಿಯಮವಿದೆ; ಆದರೆ ಈ ನಿಯಮವನ್ನು ಉಲ್ಲಂಘಿಸಿ ಟ್ರಸ್ಟ್ ಕೃಷಿ ಭೂಮಿಯನ್ನು ಹೇಗೆ ಖರೀದಿಸಿದೆ? ಅಲ್ಲದೆ, ಜಾಗದ ವ್ಯವಹಾರ ನಡೆದಾಗ ಗುಂಠೆವಾರಿ ಕಾನೂನು ಇತ್ತು. ಈ ವ್ಯವಹಾರದಲ್ಲಿ ಕಾನೂನನ್ನೂ ಸಹ ಉಲ್ಲಂಘಿಸಲಾಗಿದೆ.
೩. ಟ್ರಸ್ಟ್‌ನ ಧರ್ಮದರ್ಶಿ ಪಾಲ್ ಜೇಕಬ್ ಈ ಕಟ್ಟಡವನ್ನು ‘ಪ್ರಾರ್ಥನಾ ಮಂದಿರ’ ಎಂದು ಘೋಷಿಸಿ, ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಬೋಧನೆಗಳನ್ನು ಗೋಡೆಗಳ ಮೇಲೆ ಬರೆಸಿದ್ದಾರೆ. ಆದ್ದರಿಂದ, ಈ ಅನಧಿಕೃತ ಕಟ್ಟಡ ಮತ್ತು ಸಂಬಂಧಪಟ್ಟ ಟ್ರಸ್ಟಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಅನಧಿಕೃತ ಕಟ್ಟಡದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮತ್ತು ಪ್ರಚಾರ ನಡೆಯುತ್ತಿದೆ. ಗ್ರಾಮದ ಮತ್ತು ಸುತ್ತಮುತ್ತಲಿನ ಬಡ ಮತ್ತು ನಿರ್ಗತಿಕ ಜನರಿಗೆ ವಿವಿಧ ರೀತಿಯ ಆಮಿಷಗಳನ್ನು ತೋರಿಸಿ ಅವರನ್ನು ಮತಾಂತರ ಮಾಡಲಾಗುತ್ತಿದೆ. (ಇಂತಹ ಘಟನೆಗಳನ್ನು ತಡೆಯಲು ಮತಾಂತರ-ವಿರೋಧಿ ಕಾನೂನು ಜಾರಿಗೆ ತರುವುದು ಅಗತ್ಯ! – ಸಂಪಾದಕರು)
ಸಂಪಾದಕೀಯ ನಿಲುವುಮತಾಂತರ ಮಾಡುವ ‘ಅಟ್ ಬೆಥಾನಿ ಟ್ರಸ್ಟ್’ ಅನ್ನು ನಿಷೇಧಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!