
ವರ್ಧಾ, ಆಗಸ್ಟ್ 16 (ವಾರ್ತೆ) – ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಅಲ್ಬೇನಿಯಾ, ಅಲ್ಜೀರಿಯಾ, ಅಜೆರ್‌ಬೈಜಾನ್, ಈಜಿಪ್ಟ್, ಇಂಡೋನೇಷ್ಯಾ, ಜೋರ್ಡಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಲಿಬಿಯಾ, ಮಲೇಷ್ಯಾ, ಇರಾಕ್, ಇರಾನ್, ಮಾಲ್ಡೀವ್ಸ್, ಮಾಲಿ, ನೈಜೀರಿಯಾ, ಮೊರೊಕ್ಕೊ, ಓಮನ್ ಇಲ್ಲಿನ ಹಿಂದೂಗಳು ಯಾವ ಸಿದ್ಧಾಂತದಿಂದ ನಾಶವಾದರೋ, ಅದೇ ಸಿದ್ಧಾಂತವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಹಿಂದೂಗಳಿಗೆ ದೊಡ್ಡ ಅಪಾಯ ಎದುರಾಗಿದೆ. ನಮ್ಮ ಪೂರ್ವಜರು ಮಾಡಿದ ತಪ್ಪನ್ನೇ ನಾವು ಮುಂದುವರಿಸಿದರೆ, ಅವರಿಗಾದ ಪರಿಸ್ಥಿತಿಯೇ ನಮಗೂ ಆಗುತ್ತದೆ. ಆದ್ದರಿಂದ, ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಅಗತ್ಯ ಎಂದು ಸರ್ವೋಚ್ಚ ನ್ಯಾಯಾಲಯದ ಹಿಂದುತ್ವನಿಷ್ಠ ವಕೀಲ (ಶ್ರೀ.) ಅಶ್ವಿನಿ ಉಪಾಧ್ಯಾಯ ಹೇಳಿದರು.
ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತು ದುರ್ಗಾ ವಾಹಿನಿ ಇವರು ಆಗಸ್ಟ್ 14 ರಂದು ‘ಅಖಂಡ ಭಾರತ ಸಂಕಲ್ಪ ದಿನ’ದ ಅಂಗವಾಗಿ ವರ್ಧಾದ ಸಾರ್ವಜನಿಕ ಗ್ರಂಥಾಲಯದ ಸಭಾಂಗಣದಲ್ಲಿ ವಕೀಲ ಉಪಾಧ್ಯಾಯರವರ ಭಾಷಣವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಅವರು ಮಾತು ಮುಂದುವರೆಸಿ, “ದುರ್ಯೋಧನನ ತಾಯಿಯ ತವರೂರಾದ ಗಾಂಧಾರ ದೇಶವು ಯಾವ ಸಿದ್ಧಾಂತದಿಂದ ಅಫ್ಘಾನಿಸ್ತಾನವಾಯಿತು, ಅಲ್ಲಿ 17ನೇ ಶತಮಾನದಲ್ಲಿ 100% ಹಿಂದೂಗಳಿದ್ದರು. 1805ರಲ್ಲಿ ಪಂಡಿತ ನಂದರಾಮ್ ಟಿಕ್ಕೂ ಅಲ್ಲಿ ಪ್ರಧಾನಿಯಾಗಿದ್ದರು. ಅದೇ ಗಾಂಧಾರ 19ನೇ ಶತಮಾನದ ವೇಳೆಗೆ ಹಿಂದೂ-ಮುಕ್ತವಾಯಿತು. ಜಗತ್ತಿನ ಅತಿ ದೊಡ್ಡ ಬುದ್ಧನ ಮೂರ್ತಿ ಅಫ್ಘಾನಿಸ್ತಾನದಲ್ಲಿತ್ತು. ಜಗತ್ತಿನ ಅತಿ ಪ್ರಾಚೀನ ಶಿವ ದೇವಾಲಯ ಗಾಂಧಾರದಲ್ಲಿತ್ತು. ಜಗತ್ತಿನ ಅತಿ ಪ್ರಾಚೀನ ಮತ್ತು ಭವ್ಯ ವಿಷ್ಣು ದೇವಾಲಯ ಪೇಶಾವರದಲ್ಲಿತ್ತು. ಇವುಗಳಲ್ಲಿ ಈಗ ಏನೂ ಉಳಿದಿಲ್ಲ. ಇದೇ ಸಿದ್ಧಾಂತದಿಂದ ಭಾರತದ ಕಾಶ್ಮೀರ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ಲಕ್ಷದ್ವೀಪ, ಲಡಾಖ್, ಕಾರ್ಗಿಲ್‌ನ ಹಿಂದೂಗಳು ನಾಶವಾಗಿದ್ದಾರೆ ಮತ್ತು ಇತರ ಪ್ರದೇಶಗಳ ಅನೇಕ ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ” ಎಂದು ಹೇಳಿದರು.
ಸಮಾಜವು ಅಭಿವೃದ್ಧಿಯನ್ನು ನೋಡಿಕೊಳ್ಳುತ್ತದೆ; ಆದರೆ ಅಧರ್ಮದ ನಾಶವನ್ನು ಸಮಾಜವಲ್ಲ, ಸರಕಾರವೇ ಮಾಡಬಹುದು!
ಸರಕಾರವು ಜಿಹಾದಿ ಶಕ್ತಿಗಳಿಂದ ಹಿಂದೂಗಳನ್ನು ರಕ್ಷಿಸುವುದು ಅವಶ್ಯಕವಾಗಿದೆ. ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಇತ್ಯಾದಿಗಳನ್ನು ಸಮಾಜವು ನೋಡಿಕೊಳ್ಳುತ್ತದೆ; ಆದರೆ ಅಧರ್ಮದ ನಾಶವನ್ನು ಸಮಾಜವು ಮಾಡಲು ಸಾಧ್ಯವಿಲ್ಲ, ಆ ಕೆಲಸವನ್ನು ಸರಕಾರವೇ ಮಾಡಬೇಕಾಗುತ್ತದೆ”, ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!