
ನವದೆಹಲಿ – ಕೇವಲ ಮೂರು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ದೆಹಲಿಯ ಬೀದಿ ನಾಯಿಗಳ ಸಮಸ್ಯೆಯ ಕುರಿತು ಆಡಳಿತಕ್ಕೆ ಆದೇಶ ನೀಡಿತ್ತು. ಅದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು “ಈ ಪ್ರಕರಣವನ್ನು ನ್ಯಾಯಾಲಯದ ಮೂವರು ಸದಸ್ಯರ ಪೀಠದ ಮುಂದೆ ಮತ್ತೆ ವಿಚಾರಣೆ ನಡೆಸಲಾಗುವುದು” ಎಂದು ಹೇಳಿದ್ದರು. ಅದರಂತೆ, ಆಗಸ್ಟ್ 14 ರಂದು ಪೀಠದ ಮುಂದೆ ವಿಚಾರಣೆ ನಡೆಸಲಾಯಿತು. ನ್ಯಾಯಾಲಯವು ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿದೆ. ಆಗಸ್ಟ್ 11 ರಂದು ಸರ್ವೋಚ್ಚ ನ್ಯಾಯಾಲಯ, ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ದೆಹಲಿ-ಎನ್.ಸಿ.ಆರ್. (ರಾಷ್ಟ್ರೀಯ ರಾಜಧಾನಿ ಪ್ರದೇಶ) ನ ವಸತಿ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು 8 ವಾರಗಳ ಒಳಗಾಗಿ ಸ್ಥಳಾಂತರಿಸಿ ಅವುಗಳನ್ನು ಆಶ್ರಯತಾಣಗಳಿಗೆ ಕಳುಹಿಸಬೇಕೆಂದು ಆದೇಶ ನೀಡಿತ್ತು. ಈ ಕೆಲಸಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಲಸಿಕೆ ಹಾಕಿದರೂ ನಾಯಿಗಳು ಮಕ್ಕಳನ್ನು ಕಚ್ಚುವುದು ಮತ್ತು ಉಗುರಿನಿಂದ ಪರಚುವುದು ನಿಲ್ಲಿಸುವುದಿಲ್ಲ! – ಕೇಂದ್ರ ಸರಕಾರ
ವಿಚಾರಣೆಯ ಸಮಯದಲ್ಲಿ, ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಇಲ್ಲಿ ತಮ್ಮನ್ನು ಪ್ರಾಣಿ ಪ್ರೇಮಿಗಳು ಎಂದು ಕರೆದುಕೊಳ್ಳುವವರಲ್ಲಿ ಅನೇಕ ಮಾಂಸಾಹಾರಿಗಳಿದ್ದಾರೆ. ಮಕ್ಕಳು ಸಾಯುತ್ತಿದ್ದಾರೆ. ನಾನು ಫೋಟೋಗಳನ್ನು ತೋರಿಸುತ್ತೇನೆ. ಸಂತಾನಶಕ್ತಿ ಹರಣದಿಂದ ರೇಬೀಸ್ ನಿಲ್ಲುವುದಿಲ್ಲ. ನೀವು ಲಸಿಕೆ ಹಾಕಿದರೂ ಸಹ ನಾಯಿಗಳು ಮಕ್ಕಳನ್ನು ಕಚ್ಚುವುದು ಮತ್ತು ಪರಚುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ವರ್ಷ 37 ಲಕ್ಷ ಪ್ರಕರಣಗಳು ಅಂದರೆ ಪ್ರತಿದಿನ 10 ಸಾವಿರ ಪ್ರಕರಣಗಳು. ಇವು ನಾಯಿ ಕಡಿತದ ಪ್ರಕರಣಗಳಾಗಿವೆ. ರೇಬೀಸ್ ನಿಂದ ಸಾವನ್ನಪ್ಪಿದವರ ಸಂಖ್ಯೆ 305 ಆಗಿದೆ. ಯಾರೂ ಪ್ರಾಣಿಗಳನ್ನು ದ್ವೇಷಿಸುವುದಿಲ್ಲ. ನಾವು ಮಕ್ಕಳನ್ನು ಆಟವಾಡಲು ಹೊರಗೆ ಕಳುಹಿಸಲು ಸಾಧ್ಯವಿಲ್ಲ. ಇದು ನನ್ನ ನಿಲುವಾಗಿದೆ. ಸರಕಾರದ ನಿಲುವಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ” ಎಂದು ಹೇಳಿದರು. (ಅಸಹಾಯಕ ಜನರ ಪರವಾಗಿ ನಿಂತಿರುವ ಮಹಾಧಿವಕ್ತಾ ತುಷಾರ ಮೆಹ್ತಾ ಅವರಿಗೆ ಅಭಿನಂದನೆಗಳು! – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!