ಧರಾಲಿ ಗ್ರಾಮದಲ್ಲಿ ಬೆಟ್ಟದಿಂದ ಪ್ರತಿ ಸೆಕೆಂಡ್‌ಗೆ 50 ರಿಂದ 60 ಲಕ್ಷ ಲೀಟರ್ ನೀರು ಹರಿಯುತ್ತಿತ್ತು!

ಉತ್ತರಖಂಡ: ಭಾರಿ ನೀರಿನ ಪ್ರವಾಹದ ಕುರಿತು ಉಪಗ್ರಹ ಅಧ್ಯಯನದ ವರದಿ

ಡೆಹ್ರಾಡೂನ್ (ಉತ್ತರಾಖಂಡ) – ಇತ್ತೀಚೆಗೆ ಬಂದ ಉಪಗ್ರಹ ಅಧ್ಯಯನ ವರದಿಯೊಂದರ ಪ್ರಕಾರ ಉತ್ತರಾಖಂಡದ ಧರಾಲಿ ಮತ್ತು ಹರ್ಷಿಲ್ ಹತ್ತಿರದ ಹಳ್ಳಿಗಳಲ್ಲಿ, ಪ್ರತಿ ಸೆಕೆಂಡ್‌ಗೆ 50 ರಿಂದ 60 ಲಕ್ಷ ಲೀಟರ್ ನೀರು ಬೆಟ್ಟದಿಂದ ಹರಿದು ಬಂದಿತ್ತು. ಉತ್ತರಾಖಂಡದಲ್ಲಿ ನೀರಿನ ಭಾರಿ ಪ್ರವಾಹದಿಂದಾಗಿ ಧರಾಲಿ ಗ್ರಾಮವೇ ಕೊಚ್ಚಿಹೋಗಿತ್ತು. ಈ ಘಟನೆಯ ಬಗ್ಗೆ ಉಪಗ್ರಹಗಳ ಮೂಲಕ ಅಧ್ಯಯನ ಮಾಡಲಾಗಿದೆ.

“ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್” ಸಂಸ್ಥೆಯು 24 ಗಂಟೆಗಳ ಕಾಲ ಭಾರಿ ಮಳೆ ಸುರಿದರೆ ಹರ್ಷಿಲ್ ಮತ್ತು ಧರಾಲಿ ಗ್ರಾಮಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಉಪಗ್ರಹ ಅಧ್ಯಯನದ ಮೂಲಕ ಮೊದಲೇ ಅಂದಾಜು ಮಾಡಿತ್ತು. ಈ ಅಧ್ಯಯನದ ಪ್ರಕಾರ, 24 ಗಂಟೆಗಳ ಮಳೆಯ ನಂತರ, ಈ ಎರಡೂ ಹಳ್ಳಿಗಳಲ್ಲಿ ಪ್ರತಿ ಸೆಕೆಂಡ್‌ಗೆ 50 ರಿಂದ 60 ಲಕ್ಷ ಲೀಟರ್ ನೀರು ಹರಿದು ಬರುತ್ತಿತ್ತು. ಅದರೊಂದಿಗೆ ಭಾರಿ ಪ್ರಮಾಣದ ಕಸವೂ ಕೂಡ ಹರಿದು ಬರುತ್ತಿತ್ತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಸಂಸ್ಥೆಯು ಭಾಗೀರಥಿ ನದಿಯ ಮೇಲ್ಭಾಗದಲ್ಲಿರುವ ಹರ್ಷಿಲ್ ಕಣಿವೆಯ ಉಪಗ್ರಹ ಅಧ್ಯಯನ ನಡೆಸಿದೆ. ಇದರೊಂದಿಗೆ, ಈ ಸಂಸ್ಥೆಯು ಉಪಗ್ರಹ ವ್ಯವಸ್ಥೆಯ ಮೂಲಕ ಹಿಮನದಿಗಳು, ಹಿಮನದಿ-ಸರೋವರಗಳು, ರಾಶಿಪ್ರವಾಹ, ಹಿಮಕುಸಿತ ಮತ್ತು ಭೂಕುಸಿತಗಳ ಬಗ್ಗೆಯೂ ಅಧ್ಯಯನ ಮಾಡಿದೆ.