
ಮುಂಬಯಿ – ಹೆಸರಾಂತ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಮುಂಬರುವ ಸಿನಿಮಾ ‘ದಿ ಬಂಗಾಲ ಫೈಲ್ಸ್’ ಚರ್ಚೆಯಲ್ಲಿದೆ. ಸಿನಿಮಾದ ಟೀಸರ್(ಚಲನಚಿತ್ರದ ಸಂಕ್ಷಿಪ್ತ ಭಾಗ) ಬಿಡುಗಡೆಯಾದ ನಂತರ, ಆಗಸ್ಟ್ 16 ರಂದು ಕೋಲಕಾತಾದಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಇದಕ್ಕಾಗಿ ನಗರದಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೂ ಮುನ್ನ ಅಗ್ನಿಹೋತ್ರಿ ಅವರು ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಸಾಧ್ಯತೆ ಇದೆ. ಆದರೆ, ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರಕಾರವು ಈ ಸಿನಿಮಾವನ್ನು ಬಂಗಾಳದಲ್ಲಿ ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿದೆ.

‘ದಿ ಬಂಗಾಲ ಫೈಲ್ಸ್’ ಸಿನಿಮಾವು 1946 ರಲ್ಲಿ ಅಂದಿನ ಕೋಲಕಾತಾದಲ್ಲಿ ನಡೆದ ಗಲಭೆಗಳ ಕುರಿತಾಗಿದೆ. ಸಿನಿಮಾದ ಟೀಸರ್‌ನಲ್ಲಿ ‘ಬಂಗಾಳವು ಮತ್ತೊಂದು ಕಾಶ್ಮೀರವಾಗಿ ಬದಲಾಗುತ್ತಿದೆ’ ಎಂಬ ಹೇಳಿಕೆ, ಹಾಗೂ ಅದರಲ್ಲಿ ಸುಡುತ್ತಿರುವ ಶ್ರೀ ದುರ್ಗಾದೇವಿಯ ವಿಗ್ರಹವನ್ನು ತೋರಿಸಿರುವುದರಿಂದ ಜನರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡಿದೆ. ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ ಈ ಸಿನಿಮಾದ ನಿರ್ಮಾಪಕರು. ನಟರಾದ ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಅನುಪಮ್ ಖೇರ್ ಮತ್ತು ದರ್ಶನ್ ಕುಮಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 5 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!