
ಡಬ್ಲಿನ್ (ಐರ್ಲ್ಯಾಂಡ್) – ಐರ್ಲ್ಯಾಂಡ್ ನಲ್ಲಿ ಇತ್ತೀಚಿನ ಸಮಯದಲ್ಲಿ ಭಾರತೀಯರ ಮೇಲಿನ ದಾಳಿಗಳ ಘಟನೆಗಳು ನಡೆಯುತ್ತಿವೆ. ಈ ದಾಳಿಗಳ ಕುರಿತು ಐರ್ಲ್ಯಾಂಡ್ ನ ರಾಷ್ಟ್ರಪತಿ ಮಾಯಕೆಲ್ ಡಿ. ಹಿಗಿಗ್ಸ್ ಇವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಈ ದಾಳಿಯನ್ನು ‘ಹೇಯ ಕೃತ್ಯ’ ಮತ್ತು ‘ದೇಶದ ಮೌಲ್ಯಕ್ಕೆ ಮಾಡಿರುವ ವಂಚನೆ’ ಎಂದು ಹೇಳಿದ್ದಾರೆ. ಭಾರತೀಯ ಜನಾಂಗದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವಾಗ ರಾಷ್ಟ್ರಪತಿ ಹಿಗಿನ್ಸ್ ಇವರು, ಭಾರತೀಯ ಮೂಲದ ಜನರು ಇವರು ಐರ್ಲ್ಯಾಂಡಿನ ಗುರುತಿನ ಮಹತ್ವದ ಭಾಗವಾಗಿದ್ದು ಅವರ ಉಪಸ್ಥಿತಿಯಿಂದ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಹೆಚ್ಚು ಸಮೃದ್ಧವಾಗಿದೆ. ಐರ್ಲ್ಯಾಂಡಿನಲ್ಲಿನ ವೈದ್ಯಕೀಯ ಸೇವೆ, ಆರೈಕೆ, ಸಂಸ್ಕೃತಿ, ವ್ಯವಸಾಯ ಮತ್ತು ಔದ್ಯೋಗಿಕ ಈ ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ನಮ್ಮ ಸಾಮೂಹಿಕ ಜೀವನಕ್ಕಾಗಿ ಒಂದು ವರದಾನವಾಗಿದೆ, ಎಂದು ಹೇಳಿದರು.
೧. ಕಳೆದ ಕೆಲವು ದಿನಗಳಲ್ಲಿ ಐರ್ಲ್ಯಾಂಡಿನಲ್ಲಿ ಭಾರತೀಯ ಮೂಲದ ಅನೇಕ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ಭಾರತೀಯ ರಾಯಭಾರಿಗೆ ಸುರಕ್ಷಾ ಸಂಬಂಧಿತ ಸೂಚನೆ ಪ್ರಸಾರಗೊಳಿಸಿ ಭಾರತೀಯ ನಾಗರೀಕರು ನಿರ್ಜನ ಪ್ರದೇಶಗಳಿಗೆ ಹೋಗದಿರಲು ಸಲಹೆ ನೀಡಲಾಗಿದೆ.
೨. ಜುಲೈ ೧೯ ರಂದು ಟಾಲಹಟ್, ಡಬ್ಲಿನ್ ಇಲ್ಲಿ ಒಬ್ಬ ೪೦ ವರ್ಷದ ‘ಅಮೆಜಾನ್’ ನ ಓರ್ವ ಭಾರತಿಯ ಸಿಬ್ಬಂದಿಯ ಮೇಲೆ ಇಲ್ಲಿಯ ಕಿಶೋರ್ ವಯಸ್ಸಿನ ತಂಡದಿಂದ ದಾಳಿ ನಡೆದಿದೆ. ಭಾರತೀಯ ಸಿಬ್ಬಂದಿಯ ಮುಖದ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಮತ್ತು ಅವರ ಬಟ್ಟೆ ಹರಿಯಲಾಗಿದ್ದವು ಎಂದು ಹೇಳಿದರು.
೩. ಜೆನಿಫರ್ ಮರೆ ಎಂಬ ಓರ್ವ ಆಯರೀಶ್ ಮಹಿಳೆಯು, ಈ ತಂಡದಿಂದ ಕನಿಷ್ಠ ನಾಲ್ಕು ಭಾರತೀಯ ನಾಗರೀಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು, ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation