|

ಕೊಲಂಬೋ (ಶ್ರೀಲಂಕಾ) – ಭಾರತದ ಮೇಲೆ ಅಮೇರಿಕಾ ವಹಿಸಿದ ಆಮದು ಸುಂಕದ ಬಗ್ಗೆ ಶ್ರೀಲಂಕಾ ಭಾರತವನ್ನು ಅಪಹಾಸ್ಯ ಮಾಡಿರುವ ಪ್ರಕರಣದಲ್ಲಿ ಶ್ರೀಲಂಕಾದ ಸಂಸದ ಹರ್ಷ ಡಿಸಿಲ್ವಾ ಅವರು ‘ಭಾರತದ ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ, ಅವರೇ ನಮಗೆ ಸಂಕಷ್ಟದಲ್ಲಿ ಸಹಾಯ ಮಾಡಿದ್ದಾರೆ, ಎಂದು ಶ್ರೀಲಂಕಾ ನಾಯಕರಿಗೆ ಬುದ್ದಿ ಹೇಳಿದ್ದಾರೆ. ಹರ್ಷ ಮುಂದೆ ಮಾತನಾಡಿ, ಅಮೇರಿಕಾ ಆಮದು ಸುಂಕ ಕಡಿಮೆ ಮಾಡುತ್ತದೆ ಎಂದು ಭಾರತ ನಿರೀಕ್ಷಿಸಿತ್ತು, ಮತ್ತು ಶ್ರೀಲಂಕಾದ ನಿರೀಕ್ಷೆಯೂ ಅದೇ ಆಗಿತ್ತು. ಆದರೆ ನಮ್ಮ ಕೆಲವು ನಾಯಕರು ಭಾರತದ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ. ಭಾರತವೇ ನಮ್ಮ ನಿಜವಾದ ಸ್ನೇಹಿತ. ಅವರ ಧೈರ್ಯ ಇಡೀ ಏಷ್ಯಾಗೆ ಸ್ಫೂರ್ತಿ ನೀಡಿದೆ ಎಂದು ಕೊಂಡಾಡಿದರು.”
೨೦೨೨ರಲ್ಲಿ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ, ಭಾರತವು ಸುಮಾರು ೫ ಶತಕೋಟಿ ಡಾಲರ್ (ಸುಮಾರು ೪ ಲಕ್ಷ ೩೮ ಸಾವಿರ ಕೋಟಿ ರೂಪಾಯಿ) ನೆರವು ನೀಡಿತ್ತು. ಔಷಧಗಳು, ಆಹಾರ, ಇಂಧನ ಮತ್ತು ನಗದು ಸಾಲಗಳ ನೆರವು ನೀಡಿತ್ತು. ಶ್ರೀಲಂಕಾದ ಸಂಕಟದ ಸಮಯದಲ್ಲಿ, ಚೀನಾ ಅಥವಾ ಇತರ ದೇಶಗಳು ಅಷ್ಟೊಂದು ಸಹಾಯ ಮಾಡಿರಲಿಲ್ಲ. ಅಮೇರಿಕಾ ಶ್ರೀಲಂಕಾದ ಸರಕುಗಳ ಮೇಲೆ ೨೦% ತೆರಿಗೆಯನ್ನು ಹೇರಿದ್ದು ಆಗಸ್ಟ್ ೭, ೨೦೨೫ ರಿಂದ ಇದು ಜಾರಿಗೆ ಬಂದಿದೆ.
ಸಂಪಾದಕೀಯ ನಿಲುವುಭಾರತದ ಸಹಾಯದ ಅರಿವು ಇಲ್ಲದಿರುವವರು ಮತ್ತು ಭಾರತೀಯರನ್ನೇ ಅಪಹಾಸ್ಯ ಮಾಡುವ ಕೃತಘ್ನ ದೇಶಗಳಿಗೆ ಇನ್ನು ಮುಂದೆ ಸಹಾಯ ಮಾಡಬೇಕೋ ಬೇಡವೋ ಎಂಬುದನ್ನು ಸರಕಾರವೇ ನಿರ್ಧರಿಸಬೇಕು ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು