ಭಾರತೀಯ ಸೇನೆಯ ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಹುದ್ದೆಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಭಾರತೀಯ ಸೇನೆಯ ನ್ಯಾಯಾಧೀಶ ಅಡ್ವೊಕೇಟ್ ಜನರಲ್ (ಜಡ್ಜ್ ಅಡ್ವೊಕೇಟ್ ಜನರಲ್) ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಧಿಕಾರಿಗಳ ಅನುಪಾತವನ್ನು 2:1 ಎಂದು ಇಟ್ಟುಕೊಂಡಿದ್ದ ಸೇನೆಯ ನೀತಿಯನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ‘ಸೇನೆಯ ಈ ನೀತಿಯು ಸ್ವಇಚ್ಛೆಯಿಂದ ಕೂಡಿದೆ ಮತ್ತು ಸಂವಿಧಾನದ ಪ್ರಕಾರ ಎಲ್ಲರಿಗೂ ನೀಡಿದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಒಬ್ಬ ಅರ್ಜಿದಾರಳನ್ನು ತಕ್ಷಣ ಸೇವೆಯಲ್ಲಿ ಸೇರಿಸಿಕೊಳ್ಳುವಂತೆ ಆದೇಶಿಸಿತು, ಆದರೆ ಇನ್ನೊಬ್ಬ ಅರ್ಜಿದಾರಳು ಈಗಾಗಲೇ ನೌಕಾಪಡೆಯಲ್ಲಿ ಸೇರಿರುವ ಕಾರಣ ಆಕೆಗೆ ಯಾವುದೇ ಪರಿಹಾರ ಸಿಗಲಿಲ್ಲ, ಎಂದು ಹೇಳಿದ್ದಾರೆ.
ನ್ಯಾಯಾಲಯವು, ‘ಸರಕಾರವು ಕೇವಲ ಪುರುಷರಿಗಾಗಿ ಸ್ಥಾನಗಳನ್ನು ಕಾಯ್ದಿರಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಸ್ಥಾನಗಳನ್ನು ಸೀಮಿತಗೊಳಿಸುವುದು ತಪ್ಪು. ವಾಸ್ತವವಾಗಿ ಲಿಂಗ ತಟಸ್ಥತೆಯ ಅರ್ಥ ‘ಅತ್ಯಂತ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು” ಎಂದು ಹೇಳಿದೆ.
ಯಾವ ಪ್ರಕರಣ?
ಭಾರತೀಯ ಸೇನೆಯ ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಹುದ್ದೆಯ ಪರೀಕ್ಷೆಯ ಮೆರಿಟ್ ಪಟ್ಟಿಯಲ್ಲಿ 2 ಮಹಿಳಾ ಅಭ್ಯರ್ಥಿಗಳು ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದರು; ಆದರೆ ಮಹಿಳೆಯರಿಗೆ ಕೇವಲ 3 ಸ್ಥಾನಗಳಿದ್ದ ಕಾರಣ ಅವರಿಗೆ ಅವಕಾಶ ಸಿಗಲಿಲ್ಲ. ಅವರಿಗಿಂತ ಕಡಿಮೆ ಅಂಕ ಗಳಿಸಿದ ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಒಟ್ಟು 9 ಖಾಲಿ ಹುದ್ದೆಗಳಿದ್ದವು, ಅವುಗಳಲ್ಲಿ 6 ಪುರುಷರು ಮತ್ತು 3 ಮಹಿಳೆಯರನ್ನು 2:1 ಅನುಪಾತದ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು.
ಸೇನೆಯ ಕಾನೂನು ಶಾಖೆಯ ಮಹತ್ವ!
ಭಾರತೀಯ ಸೇನೆಯ ‘ನ್ಯಾಯಾಧೀಶ ಅಡ್ವೊಕೇಟ್ ಜನರಲ್ ವಿಭಾಗ’ವು ಸೇನೆಯ ಕಾನೂನು ಶಾಖೆಯಾಗಿದೆ, ಅಲ್ಲಿ ಅಧಿಕಾರಿಗಳು ಕಾನೂನು ಸಲಹೆ ನೀಡುತ್ತಾರೆ. ‘ಕೋರ್ಟ್-ಮಾರ್ಷಲ್’ (ಸೇನೆಯ ನ್ಯಾಯಾಲಯದ ಪ್ರಕರಣಗಳು) ನಡೆಸಲಾಗುತ್ತದೆ ಮತ್ತು ಸೈನಿಕರು, ಹಾಗೆಯೇ ಅವರ ಕುಟುಂಬಗಳ ಕಾನೂನು ಅಗತ್ಯಗಳನ್ನು ಪೂರೈಸಲಾಗುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!