ಸರಕಾರ ಮತ್ತು ವಿರೋಧ ಪಕ್ಷಗಳು ಒಗ್ಗೂಡಿ ದಾಳಿ ನಡೆಸುತ್ತಿವೆ

ಡಬ್ಲಿನ (ಐರ್ಲೆಂಡ್) – ಬ್ರಿಟನ್‌ನ ನೆರೆಯ ದೇಶವಾದ ಐರ್ಲೆಂಡನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಭಾರತೀಯರ ಮೇಲೆ 6 ದಾಳಿಗಳು ನಡೆದಿವೆ. ಈ ದಾಳಿಗಳು ರಾಜಧಾನಿ ಡಬ್ಲಿನ್ ಸೇರಿದಂತೆ ಕ್ಲೋಂಡಾಲ್ಕಿನ್, ಬ್ಯಾಲಿಮೂನ್ ಮತ್ತು ವಾಟರಫೋರ್ಡ್ ನಲ್ಲಿ ನಡೆದಿವೆ. ಈ ದಾಳಿಗಳ ಹಿಂದೆ ಸರಕಾರ ಮತ್ತು ವಿರೋಧ ಪಕ್ಷಗಳ ದೊಡ್ಡ ಕೈವಾಡವಿದೆ. ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ಗೃಹ ನಿರ್ಮಾಣ ಬಿಕ್ಕಟ್ಟಿಗೆ ಅವರು ಭಾರತೀಯರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಇಲ್ಲಿನ ಏಷ್ಯಾದ ಜನರು ಯೂರೋಪಿನ ಇತರ ದೇಶಗಳಿಗೆ ವಲಸೆ ಹೋಗುವ ಯೋಚನೆ ಮಾಡುತ್ತಿದ್ದಾರೆ.
ಪೊಲೀಸರಿಂದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಇಲ್ಲ!
‘ಐರ್ಲೆಂಡ್ ಇಂಡಿಯಾ ಕೌನ್ಸಿಲ್’ನ ಅಧ್ಯಕ್ಷ ಪ್ರಶಾಂತ ಶುಕ್ಲಾ ಅವರ ಪ್ರಕಾರ, ಭಾರತೀಯರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಪ್ರತಿದಿನ ದೂರುಗಳು ಬರುತ್ತಿವೆ; ಆದರೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಇದರಿಂದ ಭಾರತೀಯ ಸಮುದಾಯದಲ್ಲಿ ನಿರಾಶೆ ಹರಡಿದೆ. ಒಬ್ಬ ಭಾರತೀಯ ನರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪತ್ರವನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರ ಸಹೋದ್ಯೋಗಿಗಳು ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಿದ್ದಾರೆ. ಈಗ ಅವರು ಐರ್ಲೆಂಡ್ ತೊರೆಯುವ ಯೋಚನೆ ಮಾಡುತ್ತಿದ್ದಾರೆ.
ವಲಸಿಗರಲ್ಲಿ ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ
ಏಪ್ರಿಲ್ 2025 ರಲ್ಲಿ, ಐರ್ಲೆಂಡ್‌ನ ಜನಸಂಖ್ಯೆ 53 ಲಕ್ಷ 80 ಸಾವಿರ ಲಕ್ಷ ಇತ್ತು. ಅವರಲ್ಲಿ 12 ಲಕ್ಷ 50 ಸಾವಿರ ವಲಸಿಗರಿದ್ದಾರೆ, ಇದು ಒಟ್ಟು ಜನಸಂಖ್ಯೆಯ ಶೇ. 24ರಷ್ಟು ಆಗಿದೆ. ವಲಸಿಗರ ವಿಷಯದಲ್ಲಿ ಪೋಲೆಂಡ್ ಮತ್ತು ಬ್ರಿಟನ್ ನಂತರ ಭಾರತ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ 2025 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 4.8 ಇತ್ತು. ಐರ್ಲೆಂಡನ ಆರೋಗ್ಯ ಮತ್ತು ಸಾಮಾಜಿಕ ಸೇವಾ ವಲಯದಲ್ಲಿ ಸುಮಾರು ಶೇ.18 ನೌಕರರು ಐರ್ಲೆಂಡ್ ಹೊರಗಿನ ನಾಗರಿಕರಾಗಿದ್ದಾರೆ. ಅವರಲ್ಲಿ ಶೇ.3 ಭಾರತೀಯರು ಇದ್ದಾರೆ. ಬ್ರಿಟನ್‌ನಲ್ಲಿ ಅಕ್ರಮವಾಗಿ ಕೆಲಸ ಮಾಡುವವರ ವಿರುದ್ಧದ ಕ್ರಮದ ಭಾಗವಾಗಿ, ಒಂದು ವಾರ ಕಾಲ ನಡೆದ ದೊಡ್ಡ ಕಾರ್ಯಾಚರಣೆಯಲ್ಲಿ ಭಾರತೀಯ ನಾಗರಿಕರು ಸೇರಿದಂತೆ ನೂರಾರು ಜನರನ್ನು ಬಂಧಿಸಲಾಯಿತು.
ಸಂಪಾದಕೀಯ ನಿಲುವುಒಂದು ಸರಕಾರವೇ ಈ ರೀತಿ ಭಾರತೀಯರ ಮೇಲೆ ದಾಳಿ ನಡೆಸುತ್ತಿದ್ದರೆ, ಅದು ಚಿಂತಾಜನಕವಾಗಿದೆ. ಪಾಕಿಸ್ತಾನದಲ್ಲೂ ಹೀಗಾಗುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ, ಭಾರತ ಸರಕಾರವು ಸಮರೋಪಾದಿಯಲ್ಲಿ ಭಾರತೀಯರ ಸುರಕ್ಷತೆಗಾಗಿ ಪ್ರಯತ್ನಿಸುವುದು ಅವಶ್ಯಕವಾಗಿದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation