‘ಅಪೂರ್ಣ’, ‘ಕಿರಿಕಿರಿಯ’, ‘ಭಯಾನಕ’, ಹಾಗೂ ಕಡಿಮೆ ‘ಪ್ರಾಂಪ್ಟ್ಸ್’ಗಳಿಗೆ ಅನುಮತಿ ನೀಡಿದ ಬಗ್ಗೆ ಜನರ ಆಕ್ರೋಶ!

ನ್ಯೂಯಾರ್ಕ್ (ಅಮೇರಿಕಾ) – ‘ಓಪನ್ ಎಐ’ ಕಂಪನಿಯ ಅತ್ಯಾಧುನಿಕ ‘ಜಿಪಿಟಿ-5 ಮಾಡೆಲ್’ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ‘ರೆಡ್ಡಿಟ್’ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ವ್ಯವಸ್ಥೆಯನ್ನು ‘ಅಪೂರ್ಣ’, ‘ಕಿರಿಕಿರಿಯ’, ‘ಭಯಾನಕ’, ಮತ್ತು ‘ಕಡಿಮೆ ಪ್ರಾಂಪ್ಟ್ಸ್’ಗಳಿಗೆ (ಆದೇಶಗಳಿಗೆ) ಅನುಮತಿ ನೀಡುತ್ತದೆ ಎಂದು ಕಟುವಾಗಿ ಟೀಕಿಸಿದ್ದಾರೆ. ‘ಕೋಡಿಂಗ್’ ಮತ್ತು ಬರಹಕ್ಕಾಗಿ ಇದು ವಿಶ್ವದ ಅತ್ಯುತ್ತಮ ವ್ಯವಸ್ಥೆ ಎಂದು ‘ಓಪನ್ ಎಐ’ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮನ್ ಹೊಗಳಿದ್ದರೂ, ಈ ಎಐ ವ್ಯವಸ್ಥೆಯು ಈಗ ಉಚಿತ ಬಳಕೆಗೆ ಲಭ್ಯವಿದ್ದರೂ, ಬಳಕೆದಾರರು ಇದನ್ನು ‘ಚಾಟ್‌ಜಿಪಿಟಿ’ಯ ‘ಅಪ್‌ಗ್ರೇಡ್’ ಅಲ್ಲ, ಬದಲಾಗಿ ‘ಡೌನ್‌ಗ್ರೇಡ್’ (ಕಡಿಮೆ ಸಾಮರ್ಥ್ಯದ) ಆವೃತ್ತಿ’ ಎಂದು ಟೀಕಿಸುತ್ತಿದ್ದಾರೆ.
ಆಲ್ಟ್‌ಮನ್ ಅವರು ಈ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ನೇರವಾಗಿ ಉತ್ತರಿಸಲು ತಪ್ಪಿಸಿಕೊಂಡಿದ್ದಾರೆ. ಜಿಪಿಟಿ-5 ಇದು ನಮ್ಮ ಇಂದಿನವರೆಗಿನ ಅತ್ಯಂತ ಬುದ್ಧಿವಂತ ಮಾದರಿ, ಆದರೆ ನಾವು ಮುಖ್ಯವಾಗಿ ಪ್ರಾಯೋಗಿಕ ಉಪಯೋಗ ಮತ್ತು ಸಾಮಾನ್ಯ ಜನರಿಗೆ ಲಭ್ಯತೆ, ಹಾಗೂ ಕಡಿಮೆ ಬೆಲೆಗೆ ಜನರಿಗೆ ಸಿಗಬೇಕೆಂಬುದರ ಕಡೆ ನಾವು ಗಮನ ಹರಿಸಿದ್ದೇವೆ ಎಂದು ಅವರು ದೃಢ ನಿಲುವು ವ್ಯಕ್ತಪಡಿಸಿದ್ದಾರೆ.

‘ಚಾಟ್ ಜಿಪಿಟಿ’ ಮೇಲೆ ಬಂದಿರುವ ಆರೋಪಗಳು:
1. ‘ಚಾಟ್ ಜಿಪಿಟಿ ಪ್ಲಸ್’ ಸದಸ್ಯರು (ಪ್ರತಿ ತಿಂಗಳು ಸುಮಾರು 2 ಸಾವಿರ ರೂಪಾಯಿ ಶುಲ್ಕ ಪಾವತಿಸುವವರು) ಒಂದು ಗಂಟೆಯಲ್ಲಿಯೇ ಜಿಪಿಟಿ-5 ರ ಬಳಕೆಯ ಮಿತಿಯನ್ನು ಅರ್ಥಮಾಡಿಕೊಂಡರು.
2. ಮುಖ್ಯವಾಗಿ ‘ಓಪನ್ ಎಐ’ ಹಿಂದಿನ ಎಲ್ಲಾ ಮಾಡೆಲ್‌ಗಳನ್ನು ಸ್ಥಗಿತಗೊಳಿಸಿರುವುದು ಈ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ, ಜೊತೆಗೆ ಸಂಶಯವೂ ಬಲಗೊಂಡಿದೆ.
3. ‘ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್’ (ಎಲ್.ಎಲ್.ಎಮ್. ಅಂದರೆ, ಮನುಷ್ಯರ ಭಾಷೆಯನ್ನು ಅಧ್ಯಯನ, ವಿಶ್ಲೇಷಣೆ ಮಾಡಿ ಉತ್ತರ ನೀಡುವ ಸಂಕೀರ್ಣ ವ್ಯವಸ್ಥೆಗಳು) ನಡೆಸಲು ಹೆಚ್ಚಿನ ಸಂಪನ್ಮೂಲಗಳು ಬೇಕಾಗುತ್ತವೆ. ‘ಓಪನ್ ಎಐ’ ದಕ್ಷತೆಯನ್ನು ನಿರ್ಲಕ್ಷಿಸಿ ಉತ್ಪಾದಕತೆಯನ್ನು ಹೆಚ್ಚಿಸಿದೆ.
4. ಕಂಪನಿಯು 500 ಬಿಲಿಯನ್ ಡಾಲರ್ ಮೌಲ್ಯಮಾಪನದ ಮಹತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಲು ಈ ಕ್ರಮವನ್ನು ತೆಗೆದುಕೊಂಡಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation